‘ನನ್ನ ಕೇಳಿ ಅಯತೊಲ್ಲಾ ಆಯ್ಕೆ ಮಾಡಿ’ ಇರಾನ್‌ಗೆ ಟ್ರಂಪ್‌ ತಾಕೀತು । ಹೊಸ ನಾಯಕನನ್ನೂ ಕೊಲ್ತೇವೆ: ಇಸ್ರೇಲ್‌ | Ask Me Before Choosing The Ayatollah Trump Warns Iran

Donald Trump warning to Iran ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ನಂತರ ಹೊಸ ನಾಯಕನ ಆಯ್ಕೆ ಪ್ರಕ್ರಿಯೆ ನಡೆದಿದೆ. ಈ ನಡುವೆ, ತಮ್ಮ ಒಪ್ಪಿಗೆ ಇಲ್ಲದೆ ಆಯ್ಕೆಯಾದ ನಾಯಕ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. 

ವಾಷಿಂಗ್ಟನ್‌ (ಮಾ.9): ಇರಾನ್‌ನ ಸರ್ವೋಚ್ಚ ನಾಯಕನಾಗಿ 36 ವರ್ಷಗಳ ಆಳ್ವಿಕೆ ನಡೆಸಿದ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಳಿಕ ಆ ಜಾಗಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿಯ ನಡುವೆ, ‘ನನ್ನ ಒಪ್ಪಿಗೆ ಇಲ್ಲದೆ ಆಯ್ಕೆಯಾದವರು ಹೆಚ್ಚು ದಿನ ಉಳಿಯಲಾರ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

‘ಇರಾನಿಗರು ಮತ್ತೆ 10 ವರ್ಷಗಳ ಹಿಂದಿನಂತೆ ಆಗುವುದು ಬೇಡ’ ಎನ್ನುವ ಮೂಲಕ ದಶಕದ ಹಿಂದೆ ಇರಾನ್‌ ಮೇಲಿನ ಅಮೆರಿಕದ ದಾಳಿಯನ್ನು ನೆನಪಿಸುತ್ತಾ, ಈಗ ಮತ್ತೆ ಅಂತಹ ದಾಳಿಯಾಗುವುದನ್ನು ತಪ್ಪಿಸಲು ಮುಂದಿನ ನಾಯಕನ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ಅಭಿಪ್ರಾಯವನ್ನೂ ಪರಿಗಣಿಸಿ ಎಂದಿದ್ದಾರೆ.

ಇದೇ ವೇಳೆ ಇರಾನ್‌ ಮೇಲಿನ ಆಕ್ರಮಣಕ್ಕೆ ಇನ್ನೊಂದು ಕಾರಣವನ್ನೂ ನೀಡಿರುವ ಅವರು, ‘ಇರಾನ್‌ನವರು ಇಡೀ ಮಧ್ಯಪ್ರಾಚ್ಯವನ್ನು ವಶಪಡಿಸಿಕೊಳ್ಳುವ ಬಯಕೆಯಲ್ಲಿದ್ದರು. ಆದರೆ ನಾನದನ್ನು ತಪ್ಪಿಸಿದೆ’ ಎಂದು ಹೇಳಿದರು.

ಹೊಸ ನಾಯಕ ಹತ್ಯೆ

ಖಮೇನಿ ಜಾಗಕ್ಕೆ ಆಯ್ಕೆಯಾಗಿರುವವರ ಹೆಸರಿನ ಘೋಷಣೆಯಷ್ಟೇ ಬಾಕಿ ಇರುವ ಹೊತ್ತಿನಲ್ಲಿ ಇಸ್ರೇಲ್‌, ‘ನೂತನ ನಾಯಕನಾಗಿ ಆಯ್ಕೆಯಾಗುವವರನ್ನು ಹತ್ಯೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದೆ. ಈ ಮಧ್ಯೆ 88 ಹಿರಿಯ ಧಾರ್ಮಿಕ ಮುಖಂಡರ ತಂಡ ಒಬ್ಬನ ಹೆಸರನ್ನು ಅಂತಿಮಗೊಳಿಸಿದೆ. ಈ ತಂಡದ ಉನ್ನತ ನಾಯಕ ಮೊಹಮ್ಮದ್‌ ಮೆಹ್ದಿ ಮಿರ್ಭಗೇರಿ ಸದ್ಯದಲ್ಲೇ ಹೊಸ ನಾಯಕನನ್ನು ನೇಮಿಸಲಿದ್ದಾರೆ ಎನ್ನಲಾಗಿದೆ.

Source link

Leave a Reply

Your email address will not be published. Required fields are marked *