ನಟಿ ಹನಿ ರೋಸ್‌ಗೆ ಬಿಗ್ ರಿಲೀಫ್: ಕೇಂದ್ರದ ಜಿಎಸ್‌ಟಿ ನೋಟಿಸ್ ಅನ್ನೇ ರದ್ದುಗೊಳಿಸಿದ ಹೈಕೋರ್ಟ್! | High Court Cancels Gst Notice Against Actress Honey Rose Rachel Movie Update Sat

ನಟಿ ಹನಿ ರೋಸ್‌ಗೆ ಬಿಗ್ ರಿಲೀಫ್: ಕೇಂದ್ರದ ಜಿಎಸ್‌ಟಿ ನೋಟಿಸ್ ಅನ್ನೇ ರದ್ದುಗೊಳಿಸಿದ ಹೈಕೋರ್ಟ್! | High Court Cancels Gst Notice Against Actress Honey Rose Rachel Movie Update Sat



ನಟಿ ಹನಿ ರೋಸ್‌ಗೆ ಬಿಗ್ ರಿಲೀಫ್: ಕೇಂದ್ರದ ಜಿಎಸ್‌ಟಿ ನೋಟಿಸ್ ಅನ್ನೇ ರದ್ದುಗೊಳಿಸಿದ ಹೈಕೋರ್ಟ್! | High Court Cancels Gst Notice Against Actress Honey Rose Rachel Movie Update Sat

ನಟಿ ಹನಿ ರೋಸ್ ಅವರಿಗೆ ಜಿಎಸ್‌ಟಿ ತೆರಿಗೆ ಪ್ರಕರಣದಲ್ಲಿ ಕೇರಳ ಹೈಕೋರ್ಟ್‌ನಿಂದ ರಿಲೀಫ್ ಸಿಕ್ಕಿದ್ದು, ಇಲಾಖೆಯ ನೋಟಿಸ್ ರದ್ದಾಗಿದೆ. ಇದರ ನಡುವೆಯೇ, ಅವರು ‘ರೇಚಲ್’ ಎಂಬ ಬಹುಭಾಷಾ ಸಿನಿಮಾದಲ್ಲಿ ಮಾಂಸ ಕತ್ತರಿಸುವ ಮಹಿಳೆಯ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ಬಹುಭಾಷಾ ನಟಿ ಹನಿ ರೋಸ್ ಅವರಿಗೆ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ನಿಂದ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ. ಜಿಎಸ್‌ಟಿ (GST) ಇಲಾಖೆ ನೀಡಿದ್ದ ನೋಟಿಸ್ ಅನ್ನು ನ್ಯಾಯಾಲಯವು ಕಾನೂನುಬಾಹಿರ ಎಂದು ಪರಿಗಣಿಸಿ ರದ್ದುಗೊಳಿಸಿದೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ನಟಿಯನ್ನು ಕಾಡುತ್ತಿದ್ದ ಕಾನೂನು ಸಂಕಷ್ಟಕ್ಕೆ ಸದ್ಯ ತೆರೆ ಬಿದ್ದಿದೆ.

ಏನಿದು ಪ್ರಕರಣ?

ನಟಿ ಹನಿ ರೋಸ್ ಅವರು ತಾವು ನಟನೆಯಿಂದ ಗಳಿಸಿದ ಒಟ್ಟು ಆದಾಯವನ್ನು ಸರಿಯಾಗಿ ಘೋಷಿಸಿಲ್ಲ ಮತ್ತು ನಿಯಮದಂತೆ ತೆರಿಗೆ ಪಾವತಿಸಿಲ್ಲ ಎಂದು ಜಿಎಸ್‌ಟಿ ಇಲಾಖೆ ಆರೋಪಿಸಿತ್ತು. ಈ ಸಂಬಂಧ ಇಲಾಖೆಯು ಕಳೆದ ಹಲವು ವರ್ಷಗಳ ತೆರಿಗೆ ದಾಖಲೆಗಳನ್ನು ಒಟ್ಟಿಗೆ ಸಲ್ಲಿಸುವಂತೆ ಹನಿ ರೋಸ್ ಅವರಿಗೆ ಒಂದೇ ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ನಟಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್ ತೀರ್ಪಿನ ಸಾರಾಂಶ:

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಜಿಎಸ್‌ಟಿ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸಿದೆ. “ಹಲವು ವರ್ಷಗಳ ತೆರಿಗೆ ವಿವರಗಳನ್ನು ಒಂದೇ ನೋಟಿಸ್ ಮೂಲಕ ಕೇಳುವುದು ಸರಿಯಲ್ಲ. ಪ್ರತಿ ಆರ್ಥಿಕ ವರ್ಷದ ತೆರಿಗೆ ದಾಖಲೆಗಳನ್ನು ಪ್ರತ್ಯೇಕವಾಗಿಯೇ ಕೇಳಬೇಕು ಮತ್ತು ಅದಕ್ಕೆ ಸಂಬಂಧಿಸಿದಂತೆ ಸ್ವತಂತ್ರ ನೋಟಿಸ್ ನೀಡಬೇಕು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ತಾಂತ್ರಿಕ ಕಾರಣದಿಂದಾಗಿ ಇಲಾಖೆಯ ನೋಟಿಸ್ ಅನ್ನು ರದ್ದುಗೊಳಿಸಿದ ನ್ಯಾಯಾಲಯ, ನಟಿಗೆ ನೆಮ್ಮದಿ ನೀಡಿದೆ.

ಮಾಂಸ ಕತ್ತರಿಸುವ ಮಹಿಳೆಯಾಗಿ ಹನಿ ರೋಸ್ ಅಬ್ಬರ!

ಕಾನೂನು ಹೋರಾಟದ ನಡುವೆಯೇ ಹನಿ ರೋಸ್ ಅಭಿನಯದ ಬಹುನಿರೀಕ್ಷಿತ ‘ರೇಚಲ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕಳೆದ ಎರಡು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಹನಿ ರೋಸ್, ಈ ಚಿತ್ರದಲ್ಲಿ ಹಿಂದೆಂದೂ ಕಂಡಿರದ ಅತ್ಯಂತ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ‘ಮಾಂಸ ಕತ್ತರಿಸುವ ಮಹಿಳೆ’ಯಾಗಿ ಪಕ್ಕಾ ಮಾಸ್ ಅವತಾರ ತಾಳಿದ್ದಾರೆ. ಪಾಲಾದಿಂದ ಬಂದ ಬೇಟೆಗಾರ ಪೋತ್ತುಪಾರ ಜೋಯಿಚನ್ ಅವರ ಪುತ್ರಿ ‘ರೇಚಲ್’ ಆಗಿ ಹನಿ ರೋಸ್ ತೆರೆ ಮೇಲೆ ಅಬ್ಬರಿಸಲಿದ್ದಾರೆ. ಆನಂದಿನಿ ಬಾಲ ಈ ಚಿತ್ರದ ಮೂಲಕ ನಿರ್ದೇಶಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕ ಎಬ್ರಿಡ್ ಶೈನ್ ಈ ಚಿತ್ರಕ್ಕೆ ಸಹ-ಬರಹಗಾರರಾಗಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಐದು ಭಾಷೆಗಳಲ್ಲಿ ಬಿಡುಗಡೆ:

‘ರೇಚಲ್’ ಕೇವಲ ಮಲಯಾಳಂಗೆ ಸೀಮಿತವಾಗದೆ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಬಾಬುರಾಜ್, ರೋಶನ್, ಜಾಫರ್ ಇಡುಕ್ಕಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು ಮತ್ತು ಟೀಸರ್ ಹನಿ ರೋಸ್ ಅವರ ಹೊಸ ಇಮೇಜ್ ಬಗ್ಗೆ ಕುತೂಹಲ ಮೂಡಿಸಿದ್ದು, ಚಿತ್ರಪ್ರೇಮಿಗಳು ಸಿನಿಮಾದ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ.



Source link

Leave a Reply

Your email address will not be published. Required fields are marked *