Headlines

ನಟನ ಪತ್ನಿ ದೀಪಿಕಾ ಇಲ್ಲಿಯವರು, ಕನ್ನಡದ ಬಗ್ಗೆ ತಿಳಿದು ಮಾತನಾಡಬೇಕು ‘ಕಾಂತಾರ’ ವಿವಾದಕ್ಕೆ ರಿಲೀಫ್ ಕೊಟ್ಟ ಹೈಕೋರ್ಟ್ | Karnataka High Court Grants Relief To Ranveer Singh In Kantara Chapter 1 Controversy

ನಟನ ಪತ್ನಿ ದೀಪಿಕಾ ಇಲ್ಲಿಯವರು, ಕನ್ನಡದ ಬಗ್ಗೆ ತಿಳಿದು ಮಾತನಾಡಬೇಕು ‘ಕಾಂತಾರ’ ವಿವಾದಕ್ಕೆ ರಿಲೀಫ್ ಕೊಟ್ಟ ಹೈಕೋರ್ಟ್ | Karnataka High Court Grants Relief To Ranveer Singh In Kantara Chapter 1 Controversy



ನಟನ ಪತ್ನಿ ದೀಪಿಕಾ ಇಲ್ಲಿಯವರು, ಕನ್ನಡದ ಬಗ್ಗೆ ತಿಳಿದು ಮಾತನಾಡಬೇಕು ‘ಕಾಂತಾರ’ ವಿವಾದಕ್ಕೆ ರಿಲೀಫ್ ಕೊಟ್ಟ ಹೈಕೋರ್ಟ್ | Karnataka High Court Grants Relief To Ranveer Singh In Kantara Chapter 1 Controversy

‘ಕಾಂತಾರ ಚಾಪ್ಟರ್‌-1’ ಚಿತ್ರದ ದೈವಪಾತ್ರದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ನಟ ರಣವೀರ್ ಸಿಂಗ್ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಿದೆ.

ಕಾಂತಾರ ಚಾಪ್ಟರ್‌-1 ಚಿತ್ರದ ವಿವಾದದಲ್ಲಿ ಬಂಧನದ ಭಯದಲ್ಲಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಕರ್ನಾಟಕ ಹೈಕೋರ್ಟ್ ರಿಲೀಫ್ ಕೊಟ್ಟಿದೆ. ಕಾಂತಾರ ಚಾಪ್ಟರ್‌-1 ಚಿತ್ರದ ದೈವಪಾತ್ರದ ಬಗ್ಗೆ ಅಪಮಾನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ನಗರದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಖಾಸಗಿ ದೂರು ಮತ್ತು ಹೈಗ್ರೌಂಡ್ಸ್‌ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಇಂದು ವಿಚಾರಣೆ ನಡೆಸಿದ ಕೋರ್ಟ್ ಮುಂದಿನ ವಿಚಾರಣೆ ವರೆಗೂ ಬಲವಂತದ ಕ್ರಮಕೈಗೊಳ್ಳದಂತೆ ಆದೇಶ ಹೊರಡಿಸಿದೆ.

ರಾಜ್ಯದ ಜನರ ಭಾವನೆಗೆ ಧಕ್ಕೆ ಆಗಿದೆ: ಕೋರ್ಟ್

ಒಂದು ಭಾಗದ ಜನರ ಭಾವನೆ ಧಕ್ಕೆ ಬರುವಂತೆ ಹೇಳಿಕೆ ನೀಡಬಾರದು. ಯಾರೋಬ್ಬರ ಧಾರ್ಮಿಕ ಭಾವನೆಗೆ ದಕ್ಕೆ ಬರುವಂತೆ ಮಾತಾಡಬಾರದು. ರಣವೀರ್ ಸಿಂಗ್ ಆಗಿರಲಿ ಯಾರೇ ಆಗಿರಲಿ. ಸೂಪರ್ ಸ್ಟಾರ್ ಆಗಿದ್ದು ಸಾಕಷ್ಟು ಜನ ಫಾಲೋ ಮಾಡುವವರು ಇದ್ದಾರೆ. ಅವರು ಆಡಿದ ಪದ ವಾಪಸ್ ಪಡೆಯಬಹುದು. ಆದರೆ ಇಂಟರ್ ನೆಟ್ ಇರುವುದನ್ನ ವಾಪಸ್ ಪಡೆಯಲು ಸಾಧ್ಯವಿಲ್ಲ. ಇದನ್ನ ತೀರ ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ರಾಜ್ಯದ ಜನರ ಭಾವನೆಗೆ ಧಕ್ಕೆ ಆಗಿದೆ. ರಣವೀರ್ ಸಿಂಗ್ ಗೆ ಇಲ್ಲಿನ ಭಾವನೆ ಗೊತ್ತಿರದೇ ಇರಬಹುದು. ಆದ್ರೆ ಅದನ್ನು ತಿಳಿದುಕೊಂಡು ಮಾತಾಡಬೇಕು.ಜನರ ಭಾವನೆಗ ಮೇಲೆ ದಾಳಿ ಮಾಡಬಾರದು ಅಭಿಪ್ರಾಯ ಪಟ್ಟರು. ಮುಂದಿನ ಸೋಮವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿಕೆ. ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮಕೈಗೊಳ್ಳದಂತೆ ಸೂಚನೆ ನೀಡಿದರು.

ಕನ್ನಡದ ಬಗ್ಗೆ ತಿಳಿದು ಮತನಾಡಬೇಕು: ದೂರುದಾರರ ಪರ ವಕೀಲರ ಹೇಳಿಕೆ

ದೂರುದಾರ ಪ್ರಶಾಂತ್‌ ಮೆಥಲ್‌ ಪರ ವಕೀಲರ ವಾದ ಮಂಡಿಸಿ ರಣವೀರ್ ಪತ್ನಿ ದೀಪಿಕಾ ಕೂಡ ಕನ್ನಡದವರಾಗಿದ್ದಾರೆ. ಕನ್ನಡದ ಬಗ್ಗೆ ತಿಳಿದುಕೊಂಡು ಮಾತಾಡಬೇಕು ಎಂದರು.

ರಣವೀರ್ ಸಿಂಗ್ ಪರ ಹಿರಿಯ ವಕೀಲ ಸಜನ್ ಪೂವಯ್ಯ ವಾದ ಮಂಡಿಸಿದರು. ರಿಷಬ್ ಶೆಟ್ಟಿ ಅಭಿನಯದ ಬಗ್ಗೆ ರಣವೀರ್ ಸಿಂಗ್ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಮಾತಾಡಿದ ಪದಗಳಿಗೆ ಕ್ಷಮೆ ಕೋರಲಾಗಿದೆ. ಆಡಿದ ಮಾತುಗಳಿಗೆ ರಣವೀರ್ ಕ್ಷಮೆ ಕೇಳಿದ್ದಾರೆ. ಕೇವಲ ಒಂದೂವರೆ ನಿಮಿಷದ ವೀಡಿಯೋ ಇದೆ. ಆ ವೀಡಿಯೋ ನೋಡಬಹುದು ಎಂದು ಹೇಳಿದರು. ತನಿಖೆಗೆ ಸಹಕರಿಸುವುದಾಗಿ ಹೇಳಿದ ರಣವೀರ್ ಸಿಂಗ್ ಪರ ವಕೀಲರು ಕೋರ್ಟ್‌ ಗೆ ಮನವರಿಕೆ ಮಾಡಿದರು. ರಣವೀರ್ ಸಿಂಗ್ ಪರ‌ವಕೀಲ ಹೇಳಿಕೆಯನ್ನು ಕೋರ್ಟ್ ದಾಖಲಿಸಿಕೊಂಡಿತು.

ಸೋಮವಾರ ಕೋರ್ಟ್ ಕಿಡಿ

ಪ್ರಕರಣದ ಹಿನ್ನೆಲೆ ಸೋಮವಾರ ರಣವೀರ್‌ ಪರ ವಕೀಲರು, ನ್ಯಾ.ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ಹಾಜರಾಗಿ ಅರ್ಜಿದಾರರು ಬಾಲಿವುಡ್ ನಟ. ರಣವೀರ್‌ ‘ಕಾಂತಾರ ಚಾಪ್ಟರ್ -1’ರ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟನೆ ಬಗ್ಗೆ ಪ್ರಾಮಾಣಿಕವಾಗಿ ಹೊಗಳಿ ದ್ದಾರೆ. ಆದರೆ, ಅವರ ಹೇಳಿಕೆಗೆ ಕ್ರಿಮಿನಲ್ ಬಣ್ಣ ಬಳಿಯಲಾಗಿದೆ. ಅರ್ಜಿಯನ್ನು ಸೋಮವಾರ ತುರ್ತು ವಿಚಾರಣೆ ನಡೆಸಬೇಕೆಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ತುರ್ತು ವಿಚಾರಣೆ ಏಕೆ? ಅರ್ಜಿದಾರರು ಬಾಲಿವುಡ್‌ ನಟರೆಂಬ ಕಾರಣಕ್ಕಾಗಿಯೇ? ಹಾಲಿವುಡ್‌ನವರಾದರೆ ಈಗಲೇ ವಿಚಾರಣೆ ನಡೆಸಬೇಕಾ? ಎಂದು ಪ್ರಶ್ನಿಸಿದರು.

ರಣವೀರ್‌ ಪರ ವಕೀಲರು, ಪೊಲೀಸರು ಅರ್ಜಿದಾರರಿಗೆ ಈಗಾಗಲೇ 2 ನೋಟಿಸ್‌ ನೀಡಿದ್ದಾರೆ. ಹಾಗಾಗಿ, ತುರ್ತು ವಿಚಾರಣೆಗೆ ಕೋರಲಾಗುತ್ತಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಈ ಮನವಿಗೆ ಒಪ್ಪಿದ ನ್ಯಾಯಪೀಠವು ಮಂಗಳವಾರ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತು. ಆ ಪ್ರಕಾರ ಇಂದು ವಿಚಾರಣೆ ನಡೆಸಿದ ಕೋರ್ಟ್ ರಿಲೀಫ್ ನೀಡಿದೆ.



Source link

Leave a Reply

Your email address will not be published. Required fields are marked *