ಜಲಮೂಲಗಳ ಮೇಲೆ ನಿಗಾಕ್ಕೆ ಡಿಜಿಟಲ್‌ ವಾಟರ್‌ ಸ್ಟಾಕ್‌ ಯೋಜನೆ: ಸಚಿವ ಬೋಸರಾಜು | Digital Water Stock Karnataka Ai Satellite Lakes Says Ns Boseraju Gvd

ಜಲಮೂಲಗಳ ಮೇಲೆ ನಿಗಾಕ್ಕೆ ಡಿಜಿಟಲ್‌ ವಾಟರ್‌ ಸ್ಟಾಕ್‌ ಯೋಜನೆ: ಸಚಿವ ಬೋಸರಾಜು | Digital Water Stock Karnataka Ai Satellite Lakes Says Ns Boseraju Gvd



ಜಲಮೂಲಗಳ ಮೇಲೆ ನಿಗಾಕ್ಕೆ ಡಿಜಿಟಲ್‌ ವಾಟರ್‌ ಸ್ಟಾಕ್‌ ಯೋಜನೆ: ಸಚಿವ ಬೋಸರಾಜು | Digital Water Stock Karnataka Ai Satellite Lakes Says Ns Boseraju Gvd

ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ‘ಡಿಜಿಟಲ್‌ ವಾಟರ್‌ ಸ್ಟಾಕ್‌’ ಎಂಬ ನೂತನ ತಂತ್ರಜ್ಞಾನ ಆಧಾರಿತ ನೀರಿನ ನಿರ್ವಹಣಾ ವೇದಿಕೆ ಅನುಷ್ಠಾನಗೊಳಿಸುತ್ತಿದೆ.

ಬೆಂಗಳೂರು (ಆ.29): ರಾಜ್ಯದ ಜಲಮೂಲಗಳ ಸಮಗ್ರ ನಿರ್ವಹಣೆ ಮತ್ತು ಪಾರದರ್ಶಕತೆ, ಹೊಣೆಗಾರಿಕೆ ತರಲು ಉಪಗ್ರಹ ದತ್ತಾಂಶ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಡಿಜಿಟಲ್‌ ವಾಟರ್‌ ಸ್ಟಾಕ್‌ ಯೋಜನೆ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜು ತಿಳಿಸಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ‘ಡಿಜಿಟಲ್‌ ವಾಟರ್‌ ಸ್ಟಾಕ್‌’ ಎಂಬ ನೂತನ ತಂತ್ರಜ್ಞಾನ ಆಧಾರಿತ ನೀರಿನ ನಿರ್ವಹಣಾ ವೇದಿಕೆ ಅನುಷ್ಠಾನಗೊಳಿಸುತ್ತಿದೆ. ರಾಜ್ಯ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ ಈ ಯೋಜನೆ ಅನುಷ್ಠಾನಗೊಳಿಸುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಪಗ್ರಹದ ಸೆನ್ಸಾರ್‌, ಇಮೇಜಿಂಗ್‌ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳ ಮೂಲಕ ಸರೋವರ, ಕೆರೆ ಮತ್ತು ಅಂತರ್ಜಲಗಳ ಸಮಗ್ರ ನಿರ್ವಹಣೆ ಮಾಡಲಾಗುತ್ತದೆ. 34,000ಕ್ಕೂ ಹೆಚ್ಚಿನ ಕೆರೆಗಳ ಸಮೀಕ್ಷೆ ಮಾಡಲಾಗಿದೆ ಮತ್ತು 31 ಸಾವಿರಕ್ಕೂ ಹೆಚ್ಚಿನ ಜಲಮೂಲಗಳನ್ನು ಜಿಯೋಟ್ಯಾಗ್‌ ಮಾಡಲಾಗಿದೆ. ಸಮೀಕ್ಷೆಯಲ್ಲಿ 42 ಸಾವಿರ ಎಕರೆಗೂ ಹೆಚ್ಚಿನ ಅತಿಕ್ರಮಣ ಗುರುತಿಸಲಾಗಿದ್ದು, 29 ಸಾವಿರಕ್ಕೂ ಹೆಚ್ಚಿನ ಅತಿಕ್ರಮಣ ತೆರವು ಮಾಡಲಾಗಿದೆ. ಮೊದಲ ಹಂತದಲ್ಲಿ ಅಂತರ್ಜಲದ ಅತಿಯಾದ ಬಳಕೆ ಮಾಡುತ್ತಿರುವ 41 ತಾಲೂಕುಗಳಲ್ಲಿ ಡಿಜಿಟಲ್‌ ವಾಟರ್‌ ಸ್ಟಾಕ್‌ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಏನಿದು ಡಿಜಿಟಲ್‌ ವಾಟರ್‌ ಸ್ಟಾಕ್‌?: ಉಪಗ್ರಹಗಳ ಸೆನ್ಸಾರ್‌ಗಳಿಂದ ಪಡೆದ ದತ್ತಾಂಶಗಳು, ಕೃತಕ ಬುದ್ಧಿಮತ್ತೆ ಮತ್ತು ಮಷಿನ್‌ ಲರ್ನಿಂಗ್‌ನಿಂದ ಪಡೆಯುವ ಇಮೇಜಿಂಗ್‌ನ ವಿಶ್ಲೇಷಣೆ ಮಾಡುವುದಕ್ಕೆ ಡಿಜಿಟಲ್‌ ವಾಟರ್‌ ಸ್ಟಾಕ್‌ ಎಂದು ಕರೆಯಲಾಗುತ್ತದೆ. ಜಲಮೂಲಗಳ ಐದು ವರ್ಷಗಳ ಹಿಂದಿನ ದತ್ತಾಂಶಗಳನ್ನು ಪಡೆದು, ಪ್ರಸ್ತುತ ಇರುವ ಸ್ಥಿತಿ-ಗತಿಗಳ ಹೋಲಿಕೆ ಮಾಡಲಾಗುತ್ತದೆ. ಯಾವುದೇ ಜಲಮೂಲದ ಸ್ವರೂಪ, ನೀರಿನ ಶೇಖರಣೆಯಲ್ಲಾಗುತ್ತಿರುವ ವ್ಯತ್ಯಾಸ ಗುರುತಿಸಿ ಅದನ್ನು ಸರಿಪಡಿಸುವ ಕಾರ್ಯ ಮಾಡಲಾಗುತ್ತದೆ.



Source link

Leave a Reply

Your email address will not be published. Required fields are marked *