Headlines

ಆಕ್ಸಿಡೆಂಟ್‌ನಲ್ಲಿ ಮೂವರು ಹಿಂದೂ ವೈದ್ಯ ವಿದ್ಯಾರ್ಥಿಗಳ ಸಾವು, ಇದು ಕೊಲೆ ಎಂದ ಸ್ಥಳೀಯರು.. | Kozhikode Koilandy Accident 3 Mbbs Students Dead Mystery Hit And Run Suspect San

ಆಕ್ಸಿಡೆಂಟ್‌ನಲ್ಲಿ ಮೂವರು ಹಿಂದೂ ವೈದ್ಯ ವಿದ್ಯಾರ್ಥಿಗಳ ಸಾವು, ಇದು ಕೊಲೆ ಎಂದ ಸ್ಥಳೀಯರು.. | Kozhikode Koilandy Accident 3 Mbbs Students Dead Mystery Hit And Run Suspect San



ಆಕ್ಸಿಡೆಂಟ್‌ನಲ್ಲಿ ಮೂವರು ಹಿಂದೂ ವೈದ್ಯ ವಿದ್ಯಾರ್ಥಿಗಳ ಸಾವು, ಇದು ಕೊಲೆ ಎಂದ ಸ್ಥಳೀಯರು.. | Kozhikode Koilandy Accident 3 Mbbs Students Dead Mystery Hit And Run Suspect San

ಸ್ಕೂಟರ್‌ಗೆ ಹಿಂದಿನಿಂದ ಮತ್ತೊಂದು ವಾಹನ ಡಿಕ್ಕಿ ಹೊಡೆದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮೃತಪಟ್ಟ ಮೂವರೂ ಮಲಬಾರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.  

ಕೋಝಿಕೋಡ್ (ಮಾ.18): ಕೇರಳದ ಕೋಝಿಕೋಡ್‌ನ ಕೊಯಿಲಾಂಡಿಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿವರವಾದ ತನಿಖೆಗೆ ಮುಂದಾಗಿದ್ದಾರೆ. ಸ್ಕೂಟರ್‌ಗೆ ಹಿಂದಿನಿಂದ ಯಾವುದೋ ವಾಹನ ಡಿಕ್ಕಿ ಹೊಡೆದಿದೆ ಎಂಬ ಸ್ಥಳೀಯರ ಸಂಶಯದ ಬೆನ್ನಲ್ಲೇ ಪೊಲೀಸರು ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು. ಈ ಅಪಘಾತವು ಮುಂಜಾನೆ ಸುಮಾರು 2:30ಕ್ಕೆ ಸಂಭವಿಸಿದೆ. ಮೃತರು ಮಲಬಾರ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ಸ್ಕೂಟರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂಬುದು ಪ್ರಾಥಮಿಕ ಮಾಹಿತಿಯಾಗಿದೆ. ಆದರೆ, ಸ್ಕೂಟರ್‌ಗೆ ಹಿಂದಿನಿಂದ ಮತ್ತೊಂದು ವಾಹನ ಡಿಕ್ಕಿ ಹೊಡೆದಿರಬಹುದು ಎಂಬ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಸ್ಕೂಟರ್‌ನ ಹಿಂಭಾಗವು ಜಖಂಗೊಂಡಿರುವುದು ಸ್ಥಳೀಯರ ಈ ಅನುಮಾನಕ್ಕೆ ಕಾರಣವಾಗಿದೆ. ಸ್ಕೂಟರ್ ಕಂಬಕ್ಕೆ ಡಿಕ್ಕಿ ಹೊಡೆದರೆ ಹಿಂಭಾಗವು ಈ ರೀತಿ ಜಖಂ ಆಗಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ. ವಾಹನದ ಹಿಂಭಾಗಕ್ಕಾದ ಹಾನಿಯು ಬೇರೆ ಯಾವುದಾದರೂ ವಾಹನ ಬಂದು ಡಿಕ್ಕಿ ಹೊಡೆದಿದ್ದರಿಂದ ಉಂಟಾಗಿದ್ದೇ ಎಂಬುದು ಅವರ ಶಂಕೆಯಾಗಿದೆ. ಸಮೀಪದ ಸಿಸಿಟಿವಿಗಳನ್ನು ಪರಿಶೀಲಿಸಲಾಗಿದ್ದರೂ, ಅಪಘಾತದ ದೃಶ್ಯಗಳು ಯಾವುದೂ ಲಭ್ಯವಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದ ಬೈಕ್‌

ಅದೇ ಸಮಯದಲ್ಲಿ, ಸ್ಕೂಟರ್‌ಗೆ ಮತ್ತೊಂದು ವಾಹನ ಡಿಕ್ಕಿ ಹೊಡೆದಿದೆ ಎಂಬ ಸ್ಥಳೀಯರ ಸಂಶಯವನ್ನು ಪೊಲೀಸರು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಮೂವರು ಸಂಚರಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್ ನಿಯಂತ್ರಣ ತಪ್ಪಿ ಸಮೀಪದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯ ಅಂಶವಾಗಿದೆ. ಸ್ಥಳದಲ್ಲಿಯೇ ಸಾವು ಸಂಭವಿಸಿರುವುದು ದೃಢಪಟ್ಟಿದೆ. ಅಪಘಾತಕ್ಕೀಡಾಗಿ ಬಿದ್ದಿದ್ದ ವಿದ್ಯಾರ್ಥಿಗಳನ್ನು ಮೊದಲು ಗಮನಿಸಿದ್ದು ಆಟೋ ಚಾಲಕರೊಬ್ಬರು. ತಕ್ಷಣವೇ ಅವರು ಸ್ಥಳೀಯರನ್ನು ಮತ್ತು ಪೊಲೀಸರನ್ನು ಕರೆಸಿ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ತಲುಪಿಸಿದರು.

ಮೂವರು ಹಿಂದೂ ವೈದ್ಯ ವಿದ್ಯಾರ್ಥಿಗಳ ಸಾವು

ಸ್ಥಳೀಯರ ಸಂಶಯದ ಆಧಾರದ ಮೇಲೆ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರೂ, ಸಂಶಯಾಸ್ಪದವಾಗಿ ಯಾವುದೇ ವಾಹನ ಕಂಡುಬಂದಿಲ್ಲ. ವಿದ್ಯಾರ್ಥಿಗಳ ಮೃತದೇಹಗಳನ್ನು ಕೋಝಿಕೋಡ್ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಕೋಝಿಕೋಡ್‌ನ ಕೊಯಿಲಾಂಡಿಯ ಕುರುವಂಗಾಡ್ ಎಂಬಲ್ಲಿ ಈ ಅಪಘಾತ ಸಂಭವಿಸಿದ್ದು, ನಂದಕಿಶೋರ್, ಅಭಿಯಾನ್ ಮತ್ತು ಅಭಿನವ್ ಮೃತಪಟ್ಟ ವಿದ್ಯಾರ್ಥಿಗಳು. ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರು ಮಲಬಾರ್ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳಾಗಿದ್ದರು.



Source link

Leave a Reply

Your email address will not be published. Required fields are marked *