
ಇರಾನ್ ದಾಳಿಯಿಂದ ಖತಾರ್ LNG ಘಟಕ ಸ್ಥಗಿತ, ಭಾರತದ ಗ್ಯಾಸ್ ಆಮದು ಸಂಪೂರ್ಣ ಬಂದ್ , ಭಾರತ ವಾರ್ಷಿಕ ಶೇಕಡಾ 40 ರಷ್ಟು ಗ್ಯಾಸನ್ನು ಖತಾರ್‌ನಿಂದ ಆಮದು ಮಾಡಿಕೊಳ್ಳುತ್ತದೆ. ಇದೀಗ ಏಕಾಏಕಿ ಪೂರೈಕೆ ಸ್ಥಗಿತ ಭಾರತಕ್ಕೆ ತೀವ್ರ ಸಂಕಷ್ಟ ತರಲಿದೆ.
ನವದೆಹಲಿ (ಮಾ.04) ಇಸ್ರೇಲ್ ಹಾಗೂ ಅಮೆರಿಕ ಸೇರಿ ಇರಾನ್ ಮೇಲೆ ನಡೆಸುತ್ತಿರುವ ದಾಳಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲ ಖಮನೈ ಹತ್ಯೆ ಬಳಿಕ ಇರಾನ್ ನಡೆಸುತ್ತಿರುವ ಪ್ರತಿದಾಳಿ ಗುರಿ ತಪ್ಪುತ್ತಿದೆ. ಅಮೆರಿಕ ಸೇನಾ ನೆಲೆಗಳ ಗುರಿಯಾಗಿಸಿ ನಡೆಸುತ್ತಿರುವ ದಾಳಿಯಲ್ಲಿ ಗಲ್ಫ್ ರಾಷ್ಟ್ರಗಳು ಹೈರಾಣಾಗಿದೆ. ಖತಾರ್ ಮೇಲೆ ಇರಾನ್ ನಡೆಸಿದ ದಾಳಿಯಿಂದ ಖತಾರ್‌ನ ಸಿಎನ್‌ಜಿ ಘಟಕ ಸ್ಥಗಿತಗೊಳಿಸಲಾಗಿದೆ. ಸುರಕ್ಷತಾ ದೃಷ್ಟಿಯಿಂದ ಘಟಕ ಸಂಪೂರ್ಣ ಬಂದ್ ಮಾಡಲಾಗಿದೆ. ಇದು ಭಾರತಕ್ಕೆ ಸಂಕಷ್ಟಕ್ಕೆ ಸಲುಕಿಸಿದೆ. ಖತಾರ್‌ನಿಂದ ಭಾರತಕ್ಕೆ ಬರುತ್ತಿದ್ದ ಗ್ಯಾಸ್ ಆಮದು ನಿಂತಿದೆ. ಭಾರತ ಆಮದು ಮಾಡುವ ವಾರ್ಷಿಕ ಅನಿಲದಲ್ಲಿ ಶೇಕಡಾ 40ರಷ್ಟು ಅನಿಲ ಖತಾರ್‌ನಿಂದ ಆಮದು ಮಾಡಲಾಗುತ್ತದೆ.
ಭಾರತದಲ್ಲಿ ಗ್ಯಾಸ್ ವ್ಯತ್ಯಯ
ಖತಾರ್‌ನಿಂದ ಪೂರೈಕೆಯಾಗುತ್ತಿದ್ದ ಅನಿಲ್ ಸಾಗಾಣೆ ಸಂಪೂರ್ಣ ಬಂದ್ ಆಗಿದೆ. ಇದರಿಂದ ಸದ್ಯಕ್ಕೆ ಭಾರತದಲ್ಲಿ ಅನಿಲ ವ್ಯತ್ಯಯ ಸಮಸ್ಯೆಯಾಗುವುದಿಲ್ಲ. ಆದರೆ ಯುದ್ಧ ಇದೇ ರೀತಿ ಮುಂದುವರಿದರೆ ಸಮಸ್ಯೆ ಹೆಚ್ಚಾಗಲಿದೆ. ಕಾರಣ ಹೊರ್ಮುಜ್ ಜಲಸಂಧಿ ಬಂದ್ ಮಾಡಲಾಗಿದೆ. ಹೀಗಾಗಿ ಅನಿಲ, ತೈಲ ಸೇರಿದಂತೆ ಯಾವುದೇ ಸಾಗಾಣೆಗಳು ಈ ಜಲಸಂಧಿ ಮೂಲಕ ನಡೆಯುವುದಿಲ್ಲ. ಸದ್ಯ ಶೇಖರಣೆಗೊಂಡಿರುವ ಗ್ಯಾಸ್ ಬರಿದಾಗುತ್ತಿದ್ದಂತೆ ಸಮಸ್ಯೆಗಳು ತೀವ್ರಗೊಳ್ಳಲಿದೆ.
ಸಿಎನ್‌ಜಿ ಮೇಲೆ ಪರಿಣಾಮ, ಬೆಲೆ ಏರಿಕೆ
ಭಾರತಕ್ಕೆ ಅನಿಲ ಪೂರೈಕೆ ಸ್ಥಗತಿಗೊಂಡರೆ ಅಡುಗೆ ಅನಿಲ, ವಾಹನಗಳ ಸಿಎನ್‌ಜಿ ಪೂರೈಕೆ ಸಮಸ್ಯೆಯಾಗಲಿದೆ.ಇದರಿಂದ ಭಾರತದಲ್ಲಿ ಗ್ಯಾಸ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಯುದ್ಧ ಕೆಲ ದಿನಗಳಲ್ಲಿ ಅಂತ್ಯಗೊಂಡರೆ ಭಾರತ ಸವಾಲು ನಿಭಾಯಿಸಲಿದೆ. ಯುದ್ಧ ಮುಂದುವರಿದರೆ ಸಮಸ್ಯೆ ತೀವ್ರಗೊಳ್ಳಲಿದೆ.
ಗುತ್ತಿಗೆ ಆಧಾರದಲ್ಲಿ ಭಾರತ ಖತಾರ್‌ನಿಂದ ಅನಿಲ ಆಮದು ಮಾಡಿಕೊಳ್ಳುತ್ತಿತ್ತು. ಇದೀಗ ಈ ವ್ಯವಸ್ಥೆ ಬಂದ್ ಆಗಿದೆ. ಇದೀಗ ಮುಕ್ತ ಮಾರುಕಟ್ಟೆಯಿಂದ ಅನಿಲ ಆಮದು ಭಾರತಕ್ಕೆ ದುಬಾರಿಯಾಗಲಿದೆ.