Car crash Bail case ಅಪಘಾತದಲ್ಲಿ ಮಹಿಳೆ ಸಾವು, ಕಾರು ಗುದ್ದಿದ ಆರೋಪಿಯ ಜಾಮೀನು ಎತ್ತಿಹಿಡಿದ ಸುಪ್ರೀಂ ಕೋರ್ಟ್ | Supreme Court Upholds Bail For Student In Fatal Vadodara Accident Case

Car crash Bail case ಅಪಘಾತದಲ್ಲಿ ಮಹಿಳೆ ಸಾವು, ಕಾರು ಗುದ್ದಿದ ಆರೋಪಿಯ ಜಾಮೀನು ಎತ್ತಿಹಿಡಿದ ಸುಪ್ರೀಂ ಕೋರ್ಟ್ | Supreme Court Upholds Bail For Student In Fatal Vadodara Accident Case



Car crash Bail case ಅಪಘಾತದಲ್ಲಿ ಮಹಿಳೆ ಸಾವು, ಕಾರು ಗುದ್ದಿದ ಆರೋಪಿಯ ಜಾಮೀನು ಎತ್ತಿಹಿಡಿದ ಸುಪ್ರೀಂ ಕೋರ್ಟ್ | Supreme Court Upholds Bail For Student In Fatal Vadodara Accident Case

ಅಪಘಾತದಲ್ಲಿ ಮಹಿಳೆ ಸಾವು, ಕಾರು ಗುದ್ದಿದ ಆರೋಪಿಯ ಜಾಮೀನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಇತ್ತ ಮಹಿಳೆಯ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇತರ 7 ಗಾಯಗೊಂಡ ವ್ಯಕ್ತಿಗಳ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. 

ನವದೆಹಲಿ (ಮಾ.23) ಕಾನೂನು ವಿದ್ಯಾರ್ಥಿ ವೇಗವಾಗಿ ಕಾರು ಚಲಾಯಿಸಿ ಮಾಡಿದ ಅಪಘಾತದಲ್ಲಿ ಮಹಿಳೆ ಮೃತಪಟ್ಟರೆ, 7 ಮಂದಿ ಗಾಯಗೊಂಡದ್ದರು. ಈ ಪ್ರಕರಣ ಸಂಬಂಧ ಗುಜರಾತ್ ಹೈಕೋರ್ಟ್ ಆರೋಪಿಗೆ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿತ್ತು. ಆದೆರೆ ಸುಪ್ರೀಂ ಕೋರ್ಟ್ ಕೂಡ ಆರೋಪಿಯ ಜಾಮೀನು ಎತ್ತಿ ಹಿಡಿದಿದೆ.ಆತ ಉದ್ದೇಶ ಪೂರ್ವಕವಾಗಿ ಮಾಡಿಲ್ಲ, ನಶೆಯಿಂದ ಮಾಡಿದ್ದಾನೆ ಎಂದು ಆರೋಪಿಗೆ ಜಾಮೀನು ನೀಡಿದೆ.

ಅವನಲ್ಲ, ಅವನೊಳಗಿರುವ ನಶೆ

2025ರ ಮಾರ್ಚ್ 13ರಲ್ಲಿ ಗುಜರಾತ್ ಮೂಲದ ವಿದ್ಯಾರ್ಥಿ ರಕ್ಷಿತ್ ಚೌರಾಸಿಯಾ ನಶೆಯಲ್ಲಿ ಅತೀ ವೇಗವಾಗಿ ಕಾರು ಚಲಾಯಿಸಿ ಅಪಘಾತ ಮಾಡಿದ್ದಾನೆ. ಈ ಪ್ರಕರಣ ಜಾಮೀನು ಕುರಿತು ಸುಪ್ರೀಂ ಕೋರ್ಟ್ ಆದೇಶ ಹಲವರನ್ನು ಅಚ್ಚರಿಗೊಳಿಸಿದೆ. ವಿದ್ಯಾರ್ಥಿ ಡ್ರಗ್ಸ್ ನಶೆಯಲ್ಲಿ ಕಾರು ಅಪಘಾತ ಮಾಡಿದ್ದಾನೆ. ಆತ ಉದ್ದೇಶಪೂರ್ವಕವಾಗಿ ಮಾಡಿಲ್ಲ. ಡ್ರಗ್ಸ್ ನಶೆಯಲ್ಲಿ ನಡೆದು ಹೋದ ಘಟನೆ ಎಂದು ಆರೋಪಿಗೆ ನೀಡಿದ ಜಾಮೀನು ಆದೇಶವನ್ನು ಎತ್ತಿ ಹಿಡಿದಿದೆ.

ಮಹಿಳೆಯ ಕುಟುಂಬಸ್ಥರಿಂದ ಕಣ್ಣೀರು

ತಮ್ಮ ಪಾಡಿಗೆ ನಡೆದು ಹೋಗುತ್ತಿದ್ದವರ ಮೇಲೆ ರಕ್ಷಿತ್ ಚೌರಾಸಿಯಾ ಕಾರು ಹರಿಸಿದ್ದ. ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರು. ಸುಪ್ರೀಂ ಕೋರ್ಟ್ ಜಾಮೀನು ಆದೇಶ ಎತ್ತಿಹಿಡಿದ ಬೆನ್ನಲ್ಲೇ ಕುಟುಂಬಸ್ಥರು ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ. ನಮ್ಮವರನ್ನು ಕಳೆದುಕೊಂಡಿದ್ದೇವೆ. ಜೈಲಿನಲ್ಲಿ ಪಾಠ ಕಲಿಯಲಿ ಎಂದು ಬಯಸಿದರೆ, ಜಾಮೀನು ನೀಡಲಾಗಿದೆ. ಇದು ತೀವ್ರ ದುಃಖ ತಂದಿದೆ ಎಂದಿದ್ದಾರೆ.

ಅಪಘಾತದ ಬಳಿಕ ಆರೋಪಿಗೆ ಇರಲಿಲ್ಲ ಕನಿಕರ

ಅಪಘಾತದಲ್ಲಿ ಒಟ್ಟು 8 ಮಂದಿ ಗಾಯಗೊಂಡಿದ್ದರು. ಈ ಪೈಕಿ ಮಹಿಳೆ ಮೃತಪಟ್ಟಿದ್ದರು. ಅಪಘಾತದಿಂದ ಪಕ್ಕದಲ್ಲಿ ಕುಳಿತಿದ್ದ ಗೆಳೆಯ ಆಕ್ರೋಶಗೊಂಡಿದ್ದ. ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದಾನೆ ಎಂದು ಆಕ್ರೋಶಗೊಂಡಿದ್ದಾನೆ. ಆದರೆ ಆರೋಪಿ ಅಪಘಾತಗೊಂಡ ಬಳಿಕ ಕಾರಿನಿಂದ ಹೊರಬಂದು ಗೆಳೆಯ ಸೇರಿ ಸಿಕ್ಕ ಸಿಕ್ಕವರ ಮೇಲೆ ಎಗರಾಡಿದ್ದ. ನಶೆ ಇಳಿದರೂ ಈತನಿಗೆ ತಾನು ದೊಡ್ಡ ತಪ್ಪು ಮಾಡಿದ್ದೇನೆ ಅನ್ನೋ ಯಾವ ಭಾವನೆಯೂ ಇರಲಿಲ್ಲ. ಈನತ ವಿಡಿಯೋಗಳು ಸಾಕಷ್ಟು ವೈರಲ್ ಆಗಿತ್ತು.



Source link

Leave a Reply

Your email address will not be published. Required fields are marked *