Headlines

Viral Photoshoot: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ 3 ತಿಂಗಳ ಮಗುವಿನ ‘ಮಾಹಾಲಕ್ಷ್ಮೀ’ ಫೋಟೊ ಶೂಟ್ | 3 Month Babies Mahalakshmi Photoshoot Going Viral

Viral Photoshoot: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ 3 ತಿಂಗಳ ಮಗುವಿನ ‘ಮಾಹಾಲಕ್ಷ್ಮೀ’ ಫೋಟೊ ಶೂಟ್ | 3 Month Babies Mahalakshmi Photoshoot Going Viral



Viral Photoshoot: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ 3 ತಿಂಗಳ ಮಗುವಿನ ‘ಮಾಹಾಲಕ್ಷ್ಮೀ’ ಫೋಟೊ ಶೂಟ್ | 3 Month Babies Mahalakshmi Photoshoot Going Viral

Viral Photoshoot: ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮೂರು ತಿಂಗಳ ಮಗುವಿನ ಫೋಟೊಶೂಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಮಗುವಿಗೆ ಮಹಾಲಕ್ಷ್ಮೀ ದೇವಿಯ ಗೆಟಪ್ ಹಾಕಿಸಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 

3 ತಿಂಗಳ ಮಗುವಿನ ವೈರಲ್ ಫೋಟೊ ಶೂಟ್

ಇತ್ತೀಚಿನ ದಿನಗಳಲ್ಲಿ ಫೋಟೋ ಶೂಟ್ ಹಾವಳಿ ಹೆಚ್ಚಾಗುತ್ತಿದೆ. ಪ್ರೆಗ್ನೆನ್ಸಿ ಫೋಟೋ ಶೂಟ್, ಪ್ರಿ ವೆಡ್ಡಿಂಗ್ ಫೋಟೋ ಶೂಟ್, ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್, ಡೆಲಿವರಿ ಫೋಟೊ ಶೂಟ್, ನ್ಯೂ ಬಾರ್ನ್ ಫೋಟೊ ಶೂಟ್ ಹೀಗೆ ಎಲ್ಲಾದಕ್ಕೂ ಫೋಟೊ ಶೂಟ್ ಮಾಡಿಸೋದು ಈಗ ಟ್ರೆಂಡ್ ಆಗಿದೆ. ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು, ಎಲ್ಲೆಡೆಯೂ ಒಂದಲ್ಲ ಒಂದು ಫೋಟೊ ಶೂಟ್ ಕಾಣಿಸುತ್ತಲೇ ಇರುತ್ತೆ. ಇದೀಗ ಪುಟಾಣಿ ಮಗುವೊಂದರ ಫೋಟೋಶೂಟ್ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದರಲ್ಲಿ ಮಗುವಿಗೆ ದೇವಿ ‘ಮಹಾಲಕ್ಷ್ಮಿ’ಯ ಗೆಟಪ್ ಹಾಕಿ ಫೋಟೋ ಶೂಟ್ ಮಾಡಿಸಿದ್ದು, ಈ ವಿಡಿಯೋಗೆ ಈಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಮಹಾಲಕ್ಷ್ಮೀಯಾದ ಪುಟ್ಟ ಮಗು

ಮಹಾಲಕ್ಷ್ಮಿ ದೇವಿಯ ಥೀಮ್ ಫೋಟೋಶೂಟ್‌ನಲ್ಲಿ 3 ತಿಂಗಳ ಮಗುವಿನ ಹೃದಯಸ್ಪರ್ಶಿ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಜನರ ಹೃದಯ ಗೆಲ್ಲುತ್ತಿದೆ. ವೈರಲ್ ಕ್ಲಿಪ್‌ನಲ್ಲಿ, ಮಹಾಲಕ್ಷ್ಮಿ ದೇವಿಯ ಸ್ಫೂರ್ತಿಯಿಂದ ಪ್ರೇರಿತವಾದ ಫೋಟೋಶೂಟ್‌ಗಾಗಿ ಪುಟ್ಟ ಮಗುವನ್ನು ಸುಂದರವಾಗಿ ಅಲಂಕರಿಸಿರುವುದನ್ನು ಕಾಣಬಹುದು. ಥೀಮ್‌ಗೆ ಹೊಂದಿಕೆಯಾಗುವಂತೆ ಮಗುವಿಗೆ ಸಾಂಪ್ರದಾಯಿಕ ಉಡುಪು ಮತ್ತು ಇತರ ಅಲಂಕಾರ ಮಾಡಿ, ಜೊತೆಗೆ ಅಷ್ಟೇ ಜೋಪಾನವಾಗಿ, ಜಾಗೃತೆಯಿಂದ ಸಿಂಗಾರ ಮಾಡಿದ ಮುದ್ದಾದ ವಿಡಿಯೋ ಜನಮನ ಗೆಲ್ಲುತ್ತಿದೆ. ಚಿತ್ರೀಕರಣದ ಸಮಯದಲ್ಲಿ ಮಗುವಿನ ನ್ಯಾಚುರಲ್ ಮತ್ತು ಮುದ್ದಾದ ಪ್ರತಿಕ್ರಿಯೆಗಳು ಜನರ ಗಮನ ಸೆಳೆಯುತ್ತಿದೆ. ಆ ಪುಟ್ಟ ಮಗುವಿನ ಮುಗ್ಧ ಎಕ್ಸ್ ಪ್ರೆಶನ್ ಮತ್ತು ಮುದ್ದಾದ ಆಕ್ಷನ್ ಎರಡನ್ನೂ ಕಾಣಬಹುದು. ಸೋಶಿಯಲ್ ಮೀಡೀಯಾದಲ್ಲೀ ಈ ವಿಡಿಯೋ ಶೀಘ್ರವಾಗಿ ವೈರಲ್ ಆಗುತ್ತಿದ್ದು, ಕಾಮೆಂಟ್ ಸೆಕ್ಷನ್ ಪೂರ್ತಿ ಹೃದಯದ ಇಮೋಜಿಗಳಿಂದ ತುಂಬಿದೆ. ಜನ ಎಷ್ಟು ಮುದ್ದಾಗಿದೆ ಮಗುವಿನ ಎಕ್ಸ್ ಪ್ರೆಶನ್ ಎಂದು ಹೇಳುತ್ತಿದ್ದಾರೆ.

ಪೋಷಕರ ವಿರುದ್ಧ ನೆಟ್ಟಿಗರು ಗರಂ

ಇನ್ನೂ ಹೆಚ್ಚಿನ ಜನರು ಮಗುವಿನ ವಿಡಿಯೋ ಫೋಟೊ ಶೂಟ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಹಲವರು ಪೋಷಕರ ವಿರುದ್ಧ ಕಿಡಿ ಕಾರಿದ್ದಾರೆ. ಇಷ್ಟು ಸಣ್ಣ ಮಗುವಿಗೆ ಈ ರೀತಿಯಾಗಿ ಗೆಟಪ್ ಹಾಕಿ ಫೋಟೊ ಶೂಟ್ ಮಾಡುವ ಅವಶ್ಯಕತೆ ಏನಿತ್ತು? ಮಗುವಿಗೆ ತೊಂದರೆ ನೀಡುತ್ತಿದ್ದಾರೆ. ಇದು ಒಳ್ಳೆಯದಲ್ಲ, ಮಗುವಿಗೆ ಈ ರೀತಿ ಟಾರ್ಚರ್ ನೀಡುವುದು ಒಳ್ಳೆಯದಲ್ಲ ಎನ್ನುತ್ತಿದ್ದಾರೆ. ಒಟ್ಟಲ್ಲಿ ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.



Source link

Leave a Reply

Your email address will not be published. Required fields are marked *