ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ಅಜ್ಜಿ, ಮಗಳು ಮತ್ತು ಮೊಮ್ಮಗಳ ಕೃತಿಗಳು ಒಂದೇ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳುವ ಅಪರೂಪದ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ್ಲಲಿ ತಾಯಿ, ಮಗಳು, ಮೊಮ್ಮಗಳ ಕೃತಿಗಳು ಒಂದೇ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.
ಬೆಂಗಳೂರು (ಏ.4): ಅಜ್ಜಿ, ಮಗಳು ಮತ್ತು ಮೊಮ್ಮಗಳ ಕೃತಿಗಳು ಒಂದೇ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳುವ ಅಪರೂಪದ ಸನ್ನಿವೇಶಕ್ಕೆ ಭಾನುವಾರ ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಭವನ ಸಾಕ್ಷಿಯಾಗಲಿದೆ.
ಭಾನುವಾರ ಬೆಳಗ್ಗೆ 10.30ಕ್ಕೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾರತಿ ವಸ್ತ್ರದ ಅವರ ‘ಚೇತನ ಭಾರತಿ’, ಪತ್ರಕರ್ತೆ ರಶ್ಮಿ ಎಸ್. ಅವರ ‘ಮಿದು ಮಾತು’ ಮತ್ತು ಅರ್ನಿ ಸಿ.ನವೀನ್ ಅವರ ‘ಎಕೋಸ್ ಫ್ರಂ ಮೈ ಜಾರ್’ ಕೃತಿಗಳ ಲೋಕಾರ್ಪಣೆಯಾಗಲಿದೆ.
ಅಲಮೇಲದ ಬೆರಗು ಪ್ರಕಾಶನದಿಂದ ಕಾರ್ಯಕ್ರಮ ಆಯೋಜಿಸಿದ್ದು, ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಅವರು ಉದ್ಘಾಟಿಸಲಿದ್ದಾರೆ. ಅಂಕಣಕಾರ ಎನ್.ರವಿಶಂಕರ್ ಅವರು ಕೃತಿ ಪರಿಚಯ ಮಾಡಿಕೊಟ್ಟು ಸಂವಾದ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
