ಬಕೆಟ್‌ನಲ್ಲಿ ಹೀಟರ್ ಇಟ್ಟು ಸ್ನಾನಕ್ಕೆ ನೀರು ಬಿಸಿ ಮಾಡುವಾಗ ಕರೆಂಟ್ ಶಾಕ್: 7ನೇ ಕ್ಲಾಸ್ ಬಾಲಕ ಸಾವು | Immersion Rod Electric Shock While Heating Water 7th Class Student Died

ಬಕೆಟ್‌ನಲ್ಲಿ ಹೀಟರ್ ಇಟ್ಟು ಸ್ನಾನಕ್ಕೆ ನೀರು ಬಿಸಿ ಮಾಡುವಾಗ ಕರೆಂಟ್ ಶಾಕ್: 7ನೇ ಕ್ಲಾಸ್ ಬಾಲಕ ಸಾವು | Immersion Rod Electric Shock While Heating Water 7th Class Student Died



ಬಕೆಟ್‌ನಲ್ಲಿ ಹೀಟರ್ ಇಟ್ಟು ಸ್ನಾನಕ್ಕೆ ನೀರು ಬಿಸಿ ಮಾಡುವಾಗ ಕರೆಂಟ್ ಶಾಕ್: 7ನೇ ಕ್ಲಾಸ್ ಬಾಲಕ ಸಾವು | Immersion Rod Electric Shock While Heating Water 7th Class Student Died

ಭೋಪಾಲ್‌ನಲ್ಲಿ, ಸ್ನಾನಕ್ಕೆ ನೀರು ಬಿಸಿ ಮಾಡಲು ಇಮ್ಮರ್ಶನ್ ರಾಡ್ ಬಳಸುತ್ತಿದ್ದ 13 ವರ್ಷದ ಬಾಲಕ ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ್ದಾನೆ. ನೀರು ಬಿಸಿಯಾಗಿದೆಯೇ ಎಂದು ಪರೀಕ್ಷಿಸಲು ವಿದ್ಯುತ್ ಸಂಪರ್ಕ ಇರುವಾಗಲೇ ಬಕೆಟ್‌ಗೆ ಕೈ ಹಾಕಿದಾಗ ಈ ದುರಂತ ಸಂಭವಿಸಿದೆ. 

ಹೀಟರ್ ಇಟ್ಟು ಸ್ನಾನಕ್ಕೆ ನೀರು ಬಿಸಿ ಮಾಡುವಾಗ ಕರೆಂಟ್ ಶಾಕ್: 7ನೇ ಕ್ಲಾಸ್ ಬಾಲಕ ಸಾವು

ಭೋಪಾಲ್: ಸ್ನಾನ ಮಾಡುವುದಕ್ಕೆ ಬಕೆಟ್‌ನಲ್ಲಿ ನೀರು ಬಿಸಿ ಮಾಡುವಾಗ ಕರೆಂಟ್ ಶಾಕ್ ಆಗಿ 7ನೇ ಕ್ಲಾಸ್ ಓದುತ್ತಿದ್ದ 13 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆದಿದೆ. ನೀರಿನಲ್ಲಿ ಮುಳುಗುವಂತಹ ನೀರು ತುಂಬಿದ ಬಕೆಟ್‌ಗೆ ಇಟ್ಟು ನೀರನ್ನು ಬಿಸಿ ಮಾಡುವಂತಹ ವಾಟರ್ ಹೀಟರ್ ಆದ ಇರ್ಮರ್ಶನ್ ರಾಡ್‌ನ್ನು ಬಕೆಟ್‌ಗೆ ಇಟ್ಟು ಬಾಲಕ ನೀರು ಬಿಸಿ ಮಾಡುತ್ತಿದ್ದು, ಅರಿವಿಲ್ಲದೇ ಕರೆಂಟ್ ಪಾಸಾಗುತ್ತಿದ್ದಾಗಲೇ ನೀರು ಬಿಸಿಯಾಗಿದೆಯೇ ಎಂದು ಮುಟ್ಟಿ ನೋಡುವುದಕ್ಕೆ ನೀರಿಗೆ ಕೈ ಹಾಕಿದ್ದು, ಕರೆಂಟ್ ಶಾಕ್‌ಗೆ ಒಳಗಾಗಿ ಬಾಲಕ ಸಾವನ್ನಪ್ಪಿದ್ದಾನೆ. ಭೋಪಾಲ್‌ನ ಆನಂದ್ ನಗರ ಪ್ರದೇಶದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.

ಇದನ್ನೂ ಓದಿ: ಡಿವೋರ್ಸ್‌ ಕೇಸಲ್ಲಿ ಗಂಡನ ಬದಲು ಆತನ ಗೆಳತಿ ನೀಡಿದಳು ಹೆಂಡತಿಗೆ ದುಬಾರಿ 1.5 ಕೋಟಿ ಪರಿಹಾರ

ಇಲ್ಲಿ 13 ವರ್ಷದ ಬಾಲಕ ಸ್ನಾನಕ್ಕಾಗಿ ಇಮ್ಮರ್ಶನ್ ರಾಡ್ ಸಹಾಯದಿಂದ ಬಕೆಟ್‌ನಲ್ಲಿ ನೀರನ್ನು ಬಿಸಿ ಮಾಡುತ್ತಿದ್ದ. ಆದರೆ, ಬಿಸಿಯಾಗಿದ್ಯಾ ಅಂತ ನೋಡುವುದಕ್ಕೆ ಹೋಗಿ ಬಾಲಕ ಹೆಣವಾಗಿದ್ದಾನೆ. ಮೃತ ಬಾಲಕನನ್ನು ಕೇಶವ್ ಎಂದು ಗುರುತಿಸಲಾಗಿದ್ದು, ಈತ 7 ನೇ ತರಗತಿಯಲ್ಲಿ ಓದುತ್ತಿದ್ದ. ಬಾಲಕ ನೀರಿಗೆ ಕೈ ಹಾಕುವ ವೇಳೆ ನೀರು ಬಿಸಿಯಾಗಿದ್ದು, ವಿದ್ಯುತ್ ಹರಿಯುತ್ತಿತ್ತು. ವಿದ್ಯುತ್ ಆಘಾತಕ್ಕೀಡಾದ ಆತನನ್ನು ಕೂಡಲೇ ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದರಾದರು ಆತ ಬದುಕುಳಿಯಲಿಲ್ಲ, ಬಾಲಕನ ಹಠಾತ್ ಸಾವು ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದು, ಕೆಲ ಕ್ಷಣದಲ್ಲಿ ಮಗನನ್ನು ಕಳೆದುಕೊಂಡ ಅವರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನು ಓದಿ: ನಾಪತ್ತೆಯಾಗಿದ್ದ ಇಬ್ಬರು ಮುಸ್ಲಿಂ ಯುವತಿಯರು ಹಿಂದೂ ಸೋದರರನ್ನು ಮದುವೆಯಾಗಿ ಪತ್ತೆ

ಇಮ್ಮರ್ಶನ್ ರಾಡ್‌ಗಳನ್ನು ಬಳಸುವಾಗ ಮುನ್ನೆಚ್ಚರಿಕೆಗಳು:

  • ನೀರನ್ನು ಬಿಸಿಯಾಗಿದೆಯಾ ಎಂದು ನೋಡುವುದಕ್ಕೆ ಮುಟ್ಟುವ ಮೊದಲು ಯಾವಾಗಲೂ ವಿದ್ಯುತ್ ಅನ್ನು ಆಫ್ ಮಾಡಿ. ರಾಡ್ ವಿದ್ಯುತ್ ಸಂಪರ್ಕ ಹೊಂದಿರುವಾಗ ನಿಮ್ಮ ಕೈಯನ್ನು ಬಕೆಟ್‌ನಲ್ಲಿ ಇಡಬೇಡಿ.
  • ಸರಿಯಾದ ನಿರೋಧಕ ಮತ್ತು ಸುರಕ್ಷತಾ ಪ್ರಮಾಣಪತ್ರದೊಂದಿಗೆ ಉತ್ತಮ ಗುಣಮಟ್ಟದ ಇಮ್ಮರ್ಶನ್ ರಾಡ್ ಅನ್ನು ಬಳಸಿ. ಇತ್ತೀಚೆಗೆ ವಾಟರ್‌ಪ್ರೂಫ್ ಇಮ್ಮರ್ಷನ್ ರಾಡ್‌ಗಳು ಸಿಗುತ್ತವೆ.
  • ನಿಮ್ಮ ಮನೆಯ ವೈರಿಂಗ್‌ನಲ್ಲಿ ಸರಿಯಾದ ಅರ್ಥಿಂಗ್ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಪ್ರತಿ ಬಳಕೆಯ ಮೊದಲು ವೈರ್ ಮತ್ತು ಪ್ಲಗ್‌ಗೆ ಹಾನಿಯಾಗಿದೆಯೇ ನಡುವೆ ವಿದ್ಯುತ್ ಸೋರಿಕೆಯಾಗುತ್ತಿದೆಯೇ ಎಂದು ಪರಿಶೀಲಿಸಿ. ವೈರ್ ಕತ್ತರಿಸಿದ್ದರೆ ಅಥವಾ ಸಡಿಲವಾಗಿದ್ದರೆ ಆ ರಾಡ್ ಅನ್ನು ಬಳಸಬೇಡಿ.
  • ನೀರಿನ ಮಟ್ಟವನ್ನು ಹೀಟರ್ ಸುರುಳಿಗಿಂತ ಮೇಲಿರಿಸಿ. ನೀರಿಲ್ಲದೆ ರಾಡ್ ಅನ್ನು ಎಂದಿಗೂ ಆನ್ ಮಾಡಬೇಡಿ.



Source link

Leave a Reply

Your email address will not be published. Required fields are marked *