Headlines

ಕೊನೆಗೂ ಫಲಿಸದ ಪ್ರಾರ್ಥನೆ, ಕನ್ನಡ ಧಾರಾವಾಹಿ ನಟಿ ರಶ್ಮಿ ಲೀಲಾ ಇನ್ನಿಲ್ಲ! | Dialogue Writer Sarakki Manju Wife Actress Rashmi Leela Passed Away

ಕೊನೆಗೂ ಫಲಿಸದ ಪ್ರಾರ್ಥನೆ, ಕನ್ನಡ ಧಾರಾವಾಹಿ ನಟಿ ರಶ್ಮಿ ಲೀಲಾ ಇನ್ನಿಲ್ಲ! | Dialogue Writer Sarakki Manju Wife Actress Rashmi Leela Passed Away



ಕೊನೆಗೂ ಫಲಿಸದ ಪ್ರಾರ್ಥನೆ, ಕನ್ನಡ ಧಾರಾವಾಹಿ ನಟಿ ರಶ್ಮಿ ಲೀಲಾ ಇನ್ನಿಲ್ಲ! | Dialogue Writer Sarakki Manju Wife Actress Rashmi Leela Passed Away

Actress Rashmi Leela: ಕನ್ನಡದ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದ ರಶ್ಮಿಲೀಲಾ ಅವರು ಅಸು ನೀಗಿದ್ದಾರೆ. ಹಾಗಾದರೆ ರಶ್ಮಿಲೀಲಾಗೆ ಏನಾಗಿತ್ತು? ಇವರ ಪತಿ ಸಾರಕ್ಕಿ ಮಂಜು ಅವರು ಸಂಭಾಷಣೆಕಾರರಾಗಿ ಕೆಲಸ ಮಾಡುತ್ತಿದ್ದಾರೆ. 

ಕಳೆದ ಒಂದು ವರ್ಷದ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ರಶ್ಮಿಲೀಲಾ ಅವರು ಇನ್ನಿಲ್ಲ. ಈ ವಿಷಯವನ್ನು ಅವರ ಪತಿ ಸಾರಕ್ಕಿ ಮಂಜು ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆರ್ಥಿಕ ಸಹಾಯ ಕೇಳಿದ್ದರು

ರಶ್ಮಿಲೀಲಾ ಅವರು ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು. ಕಳೆದ ವರ್ಷ ಆಗಸ್ಟ್‌ ತಿಂಗಳಿನಲ್ಲಿ ರಶ್ಮಿಲೀಲಾ ಅವರು ಧನಸಹಾಯ ಮಾಡಿ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಮನವಿ ಮಾಡಿದ್ದರು. ಆಮೇಲೆ ಅನೇಕರು ಇವರಿಗೆ ಧನಸಹಾಯ ಮಾಡಿದ್ದರು. ಪತಿ ಸಾರಕ್ಕಿ ಮಂಜು ಅವರು ಸಂಭಾಷಣೆಕಾರರಾಗಿ ಗುರುತಿಸಿಕೊಂಡಿದ್ದಾರೆ. ಯಾರ ಪ್ರಾರ್ಥನೆಯೂ ಫಲಿಸಿಲ್ಲ, ಚಿಕಿತ್ಸೆಯೂ ಫಲಿಸಿಲ್ಲ. ಕೊನೆಗೂ ಕಾಲನ ಕರೆಗೆ ಓಗುಟ್ಟು ರಶ್ಮಿಲೀಲಾ ಹೋಗಿದ್ದಾರೆ.

ರಶ್ಮಿಲೀಲಾಗೆ ಏನಾಗಿತ್ತು?

2019ರಿಂದ ರಶ್ಮಿಲೀಲಾ ಅವರು ಪಲ್ಮನರಿ ಫೈಬ್ರೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಇದು ಹಂತಹಂತವಾಗಿ ಮುಂದುವರಿದ ರೋಗವಾಗಿದೆ. ಇದು ನಿಧಾನವಾಗಿ ಶ್ವಾಸಕೋಶಗಳಲ್ಲಿ ಗಾಯ ಮಾಡುತ್ತ, ಉಸಿರಾಟ ಆಗೋದನ್ನು ಕಷ್ಟಮಾಡುತ್ತದೆ. ಔಷಧಿಯಿಂದ ಏನೂ ಮಾಡೋಕೆ ಆಗೋದಿಲ್ಲ, ಹೀಗಾಗಿ ಲಂಗ್ ಟ್ರಾನ್ಸ್‌ಪ್ಲಾಂಟ್ ಮಾಡಬೇಕು ಎಂದು ರಶ್ಮಿಲೀಲಾ ಮಾಹಿತಿ ನೀಡಿದ್ದರು. ಕಳೆದ ಫೆಬ್ರವರಿಯಲ್ಲಿ ಲಂಗ್ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆ ಕೂಡ ಆಗಿತ್ತು. ಹೀಗಿದ್ದರೂ ಚಿಕಿತ್ಸೆ ಫಲಕಾರಿಯಾಗಿಲ್ಲ.

ಸಾರಕ್ಕಿ ಮಂಜು ಅವರು ಕೆಲವು ತಿಂಗಳುಗಳ ಹಿಂದೆ ಹೇಳಿದ್ದೇನು?

ಸ್ನೇಹಿತರೇ, ಜೀವನ ಕೆಲವೊಮ್ಮೆ ನಾವು ಊಹೆ ಮಾಡದ ರೀತಿಯಲ್ಲಿ ನಮ್ಮನ್ನು ಪರೀಕ್ಷಿಸುತ್ತದೆ. ಕಳೆದ 6–7 ವರ್ಷಗಳಿಂದ ನನ್ನ ಶ್ರೀಮತಿ ರಶ್ಮಿ ಅವರು ತೀವ್ರವಾದ Rheumatoid Arthritis ಎಂಬ ಕಠಿಣ ಕಾಯಿಲೆಯೊಂದಿಗೆ ಧೈರ್ಯವಾಗಿ ಹೋರಾಡುತ್ತಿದ್ದರು. ಕಾಲಕ್ರಮೇಣ, ಆ ಕಾಯಿಲೆಯ ಭೀಕರ side effect ಪರಿಣಾಮವಾಗಿ ಅವರ ಎರಡೂ ಶ್ವಾಸಕೋಶಗಳು ನಿಧಾನವಾಗಿ ಕಾರ್ಯನಿರ್ವಹಣೆ ನಿಲ್ಲಿಸುವ ಹಂತಕ್ಕೆ ತಲುಪಿದವು.

ಉಸಿರಾಡುವುದು — ನಾವು ಸಾಮಾನ್ಯವಾಗಿ ಗಮನಿಸದ ಅತಿ ಸಹಜವಾದ ಕ್ರಿಯೆ.ಆದರೆ ರಶ್ಮಿಯವರಿಗೆ ಪ್ರತಿದಿನದ ಹೋರಾಟವಾಗಿಬಿಟ್ಟಿತು. ಕಳೆದ ಒಂದು ವರ್ಷದಿಂದ, ಅವರು ಆಕ್ಸಿಜನ್ ಸಿಲಿಂಡರ್ ಸಹಾಯದಿಂದಲೇ ಜೀವನವನ್ನು ಹಿಡಿದುಕೊಂಡಿದ್ದಾರೆ. ನೋವು, ಕಷ್ಟ, ಭಯ… ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡು, ಅಸಾಧಾರಣ ಧೈರ್ಯದಿಂದ ಬದುಕಿದ್ದಾರೆ.

ವೈದ್ಯರು ನೇರವಾಗಿ ಹೇಳಿದ ಸತ್ಯ ತುಂಬಾ ಭಾರವಾಗಿತ್ತು — “ಶ್ವಾಸಕೋಶ ಬದಲಾವಣೆ (Lung Transplant) ಮಾತ್ರವೇ ಉಳಿದಿರುವ ಏಕೈಕ ಭರವಸೆ.” ಆ ನಿರೀಕ್ಷೆ, ಯಾರೋ ಒಬ್ಬ ಅಪರಿಚಿತ ದಾನಿಯ ದೇಹದಾನದ ಮೇಲೆ ಅವಲಂಬಿತವಾಗಿತ್ತು… ಯಾರೋ ಒಬ್ಬ ಮಹಾತ್ಮರ ತ್ಯಾಗದಿಂದಲೇ ಮತ್ತೊಬ್ಬರ ಜೀವ ಉಳಿಯುವಂತಹ ಆಶೆ. ಅದರಂತೆ ಕಳೆದ ಸೆಪ್ಟೆಂಬರ್‌ನಲ್ಲಿ ನಾರಾಯಣ ಹೃದಯಾಲಯದಲ್ಲಿ lungsಗಾಗಿ ಹೆಸರು ನೋಂದಾಯಿಸಿದ್ದೆವು. ನಂಬಿಕೆ, ಪ್ರಾರ್ಥನೆ, ಆತಂಕ — ಈ ಮೂರನ್ನೂ ಜೊತೆ ಮಾಡಿಕೊಂಡು ದಿನಗಳನ್ನು ಕಳೆಯುತ್ತಿದ್ದೆವು. ನಿನ್ನೆ ರಾತ್ರಿ, ಅನಿರೀಕ್ಷಿತವಾಗಿ, ನಾರಾಯಣ ಹೃದಯಾಲಯದಿಂದ ಒಂದು ಕರೆ ಬಂತು…

“ನಿಮಗೆ ಸೂಕ್ತವಾದ lungs ಲಭ್ಯವಾಗಿದೆ. ತಕ್ಷಣ ಬರಬೇಕು.” ಈ ಶಸ್ತ್ರಚಿಕಿತ್ಸೆ ಕೇವಲ ದುಬಾರಿಯಷ್ಟೇ ಅಲ್ಲ, ಅತ್ಯಂತ ಸಂಕೀರ್ಣ, ಅತ್ಯಧಿಕ life risk ಇರುವ ಆಪರೇಷನ್. ಆದರೂ, ಅದೇ ನಮ್ಮ ಕೊನೆಯ ಮತ್ತು ಏಕೈಕ ಆಶಾಕಿರಣ. ನಿನ್ನೆ ಮಧ್ಯರಾತ್ರಿ 1:30ಕ್ಕೆ ನಾರಾಯಣ ಹೃದಯಾಲಯಕ್ಕೆ ತಲುಪಿದೆವು. ಇಂದು ಬೆಳಿಗ್ಗೆ 9:30ಕ್ಕೆ, ರಶ್ಮಿಯವರನ್ನು ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಲಾಗಿದೆ. ಸುಮಾರು 10-12ಗಂಟೆಗಳ ದೀರ್ಘ ಅವಧಿಯ ಆಪರೇಷನ್ —ಜೀವನಕ್ಕಾಗಿ, ಉಸಿರಿಗಾಗಿ, ಹೊಸ ಬದುಕಿಗಾಗಿ. ರಶ್ಮಿಯವರ Lung Transplant ಯಶಸ್ವಿಯಾಗಲಿ, ಅವರು ಸಂಪೂರ್ಣ ಆರೋಗ್ಯದಿಂದ, ಮುಕ್ತ ಉಸಿರಾಟದೊಂದಿಗೆ ನಮ್ಮ ನಡುವೆ ಮರಳಲಿ ಎಂದು ನಿಮ್ಮೆಲ್ಲರ ಪ್ರಾರ್ಥನೆಗಳನ್ನು ವಿನಮ್ರವಾಗಿ ಕೋರುತ್ತೇನೆ.



Source link

Leave a Reply

Your email address will not be published. Required fields are marked *