ಬೆಂಗಳೂರು ಉದ್ಯಮಿ ಲೇಪಾಕ್ಷಿಯಲ್ಲಿ ಕೊಲೆ: ಹೊಸ ಕಾರು ಕೊಡಿಸುವುದಾಗಿ ‘ಅಕ್ಕನ ಗಂಡನನ್ನ ಪರಲೋಕ ಸೇರಿಸಿದ ಭಾಮೈದ’! | Bengaluru Businessman Vinay Kumar Murdered By Brother In Law Lepakshi Sat

ಬೆಂಗಳೂರು ಉದ್ಯಮಿ ಲೇಪಾಕ್ಷಿಯಲ್ಲಿ ಕೊಲೆ: ಹೊಸ ಕಾರು ಕೊಡಿಸುವುದಾಗಿ ‘ಅಕ್ಕನ ಗಂಡನನ್ನ ಪರಲೋಕ ಸೇರಿಸಿದ ಭಾಮೈದ’! | Bengaluru Businessman Vinay Kumar Murdered By Brother In Law Lepakshi Sat



ಬೆಂಗಳೂರು ಉದ್ಯಮಿ ಲೇಪಾಕ್ಷಿಯಲ್ಲಿ ಕೊಲೆ: ಹೊಸ ಕಾರು ಕೊಡಿಸುವುದಾಗಿ ‘ಅಕ್ಕನ ಗಂಡನನ್ನ ಪರಲೋಕ ಸೇರಿಸಿದ ಭಾಮೈದ’! | Bengaluru Businessman Vinay Kumar Murdered By Brother In Law Lepakshi Sat

‘ಹೊಸ ಕಾರು ಕೊಡಿಸುತ್ತೇನೆ’ ಎಂಬ ಆಮಿಷವೊಡ್ಡಿ ಬೆಂಗಳೂರಿನ ಯುವಕನನ್ನು ಆಂಧ್ರದ ಲೇಪಾಕ್ಷಿಗೆ ಕರೆಸಿಕೊಂಡು ಬಾಮೈದನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದ್ದು, ಬೈಕ್‌ನಲ್ಲಿದ್ದ ಜಿಪಿಎಸ್ ಸಹಾಯದಿಂದ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿದೆ.

ಬೆಂಗಳೂರು (ಏ.06): ‘ಹೊಸ ಕಾರು ಕೊಡಿಸುತ್ತೇನೆ ಬಾ’ ಎಂದು ನಂಬಿಸಿ ಆಂಧ್ರಪ್ರದೇಶಕ್ಕೆ ಕರೆಸಿಕೊಂಡ ಬಾಮೈದನೇ, ತನ್ನ ಸ್ವಂತ ಅಕ್ಕನ ಗಂಡ(ಬಾವ)ನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಕಳೆದ ಹನ್ನೊಂದು ತಿಂಗಳ ಹಿಂದೆಯಷ್ಟೇ ಮದುವೆಯಾಗಿ ನವಜೀವನ ಆರಂಭಿಸಿದ್ದ ವಿನಯ್ ಕುಮಾರ್ (30) ಕೊಲೆಯಾದ ದುರ್ದೈವಿ ಆಗಿದ್ದಾರೆ.

ಮದುವೆಯಾಗಿ ಕೇವಲ 11 ತಿಂಗಳು!

ಬೆಂಗಳೂರಿನ ಚಿಕ್ಕಬಾಣವಾರದಲ್ಲಿ ವಾಸವಾಗಿದ್ದ ವಿನಯ್ ಕುಮಾರ್ ಅವರು ಸ್ವಂತದ ಖಾಸಗಿ ಕಂಪನಿಯೊಂದನ್ನು ನಡೆಸುತ್ತಿದ್ದರು. ಕಳೆದ 11 ತಿಂಗಳ ಹಿಂದೆಯಷ್ಟೇ ಮೇಘನಾ ಎಂಬುವವರ ಜೊತೆ ಮನೆಯವರ ಸಮ್ಮತಿಯ ಮೇರೆಗೆ ಅದ್ದೂರಿಯಾಗಿ ಮದುವೆಯಾಗಿದ್ದರು. ದಂಪತಿಗಳ ನಡುವೆ ಈ ಹಿಂದೆ ಸಣ್ಣಪುಟ್ಟ ವಿಚಾರಕ್ಕೆ ಪತ್ನಿಯ ಅಣ್ಣ ರಾಜು ಎಂಬುವವರ ಜೊತೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ವಿನಯ್ ಪತ್ನಿಯ ಅಣ್ಣನಿಗೆ (ಭಾಮೈದನಿಗೆ) ಬೈದಿದ್ದರು ಎನ್ನಲಾಗಿದ್ದು, ಇದನ್ನೇ ಮನಸ್ಸಿನಲ್ಲಿಟ್ಟುಕೊಂಡ ರಾಜು ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದನು.

ಕಾರಿನ ಆಮಿಷವೊಡ್ಡಿ ಲೇಪಾಕ್ಷಿಗೆ ಕರೆಸಿಕೊಂಡ ಬಾಮೈದ

ವಿನಯ್ ಕುಮಾರ್ ಅವರು ಹೊಸ ಕಾರು ಖರೀದಿಸಲು ಮುಂದಾಗಿದ್ದರು. ಈ ವೇಳೆ ಪತ್ನಿ ಮೇಘನಾ, ‘ನಮ್ಮ ಅಣ್ಣ ಕಾರು ತೆಗೆದುಕೊಳ್ಳಲು ಹಣ ಕೊಡುತ್ತಾನೆ, ಆತನ ಬಳಿ ಹೋಗಿ ಹಣ ಪಡೆದು ಕಾರು ತನ್ನಿ’ ಎಂದು ವಿನಯ್‌ಗೆ ನಂಬಿಸಿ ಕಳುಹಿಸಿದ್ದಾಳೆ. ಪತ್ನಿಯ ಮಾತನ್ನು ನಂಬಿದ ವಿನಯ್, ತನ್ನ ಸ್ನೇಹಿತನ ‘ಹಿಮಾಲಯನ್’ ಬೈಕ್ ಪಡೆದುಕೊಂಡು ಆಂಧ್ರಪ್ರದೇಶದ ಲೇಪಾಕ್ಷಿಗೆ ತೆರಳಿದ್ದರು.

ಜಿಪಿಎಸ್ (GPS) ಮೂಲಕ ಪತ್ತೆಯಾದ ಮೃತದೇಹ

ವಿನಯ್ ಲೇಪಾಕ್ಷಿಗೆ ತೆರಳಿ 2 ದಿನಗಳಾದರೂ ಮನೆಗೆ ವಾಪಸ್ ಬಂದಿರಲಿಲ್ಲ, ಅತ್ತ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಲೇಪಾಕ್ಷಿಗೆ ತೆರಳಿ ಹುಡುಕಾಟ ಆರಂಭಿಸಿದರು. ಅದೃಷ್ಟವಶಾತ್ ವಿನಯ್ ತೆಗೆದುಕೊಂಡು ಹೋಗಿದ್ದ ಹಿಮಾಲಯನ್ ಬೈಕ್‌ಗೆ ಜಿಪಿಎಸ್ ಅಳವಡಿಸಲಾಗಿತ್ತು. ಅದರ ಆಧಾರದ ಮೇಲೆ ಹುಡುಕಾಟ ನಡೆಸಿದಾಗ ಬೈಕ್ ಪತ್ತೆಯಾಗಿದೆ. ಬೈಕ್ ಬಿದ್ದಿದ್ದ ಜಾಗದಿಂದ ಸುಮಾರು 100 ಮೀಟರ್ ಅಂತರದಲ್ಲಿ ವಿನಯ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬ್ಯಾಟ್ ಮತ್ತು ರಾಡ್‌ನಿಂದ ಹಲ್ಲೆ

ಆರೋಪಿ ರಾಜು ತನ್ನ ಬಾವ ವಿನಯ್ ಮೇಲೆ ಬ್ಯಾಟ್ ಮತ್ತು ಕಬ್ಬಿಣದ ರಾಡ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೊಲೆ ಮಾಡಿದ ನಂತರ ಅಲ್ಲಿಂದ ಪರಾರಿಯಾಗಿದ್ದನು. ಲೇಪಾಕ್ಷಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಈಗ ಆರೋಪಿ ರಾಜುನನ್ನು ವಶಕ್ಕೆ ಪಡೆದಿದ್ದಾರೆ. ಪತ್ನಿಯ ಅಣ್ಣನನ್ನೇ ನಂಬಿ ಹೋದ ವ್ಯಕ್ತಿ ಶವವಾಗಿ ಮರಳಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕೊಲೆಯಲ್ಲಿ ಪತ್ನಿಯ ಪಾತ್ರವೇನಾದರೂ ಇದೆಯೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *