Headlines

ಹುಲಿಕಾಂತೇಶ್ವರ ಜಾತ್ರಾ ಮಹೋತ್ಸವ- ಮುಂದಿನ ಜಾತ್ರೆಯೊಳಗೆ ನನ್ನ ಅತ್ತೆ ಸಾಯಲಿ : ದೇವರಿಗೆ ಸೊಸೆಯಿಂದ ಹರಕೆ | Daughter In Law Prays For Mother In Laws Death Before Next Fair

ಹುಲಿಕಾಂತೇಶ್ವರ ಜಾತ್ರಾ ಮಹೋತ್ಸವ- ಮುಂದಿನ ಜಾತ್ರೆಯೊಳಗೆ ನನ್ನ ಅತ್ತೆ ಸಾಯಲಿ : ದೇವರಿಗೆ ಸೊಸೆಯಿಂದ ಹರಕೆ | Daughter In Law Prays For Mother In Laws Death Before Next Fair



ಹುಲಿಕಾಂತೇಶ್ವರ ಜಾತ್ರಾ ಮಹೋತ್ಸವ- ಮುಂದಿನ ಜಾತ್ರೆಯೊಳಗೆ ನನ್ನ ಅತ್ತೆ ಸಾಯಲಿ : ದೇವರಿಗೆ ಸೊಸೆಯಿಂದ ಹರಕೆ | Daughter In Law Prays For Mother In Laws Death Before Next Fair

 ಇಂದಿನ ದಿನಗಳಲ್ಲಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಭಕ್ತರು ನಾನಾ ರೀತಿಯಲ್ಲಿ ಹಾಗೂ ವಿಚಿತ್ರ ಬೇಡಿಕೆಗಳನ್ನಿಟ್ಟು ದೇವರಲ್ಲಿ ಮೊರೆ ಹೋಗುತ್ತಿದ್ದಾರೆ. ಅಂತಹ ಘಟನೆಗಳ ಪೈಕಿ ಇತ್ತೀಚಿಗೆ ಖಣದಾಳ ಗ್ರಾಮದಲ್ಲಿ ನಡೆದ ಹುಲಿಕಾಂತೇಶ್ವರ ಜಾತ್ರಾ ಮಹೋತ್ಸವದಲ್ಲಿ ಬೆಳಕಿಗೆ ಬಂದಿದೆ.

ಮುಗಳಖೋಡ : ಇಂದಿನ ದಿನಗಳಲ್ಲಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಭಕ್ತರು ನಾನಾ ರೀತಿಯಲ್ಲಿ ಹಾಗೂ ವಿಚಿತ್ರ ಬೇಡಿಕೆಗಳನ್ನಿಟ್ಟು ದೇವರಲ್ಲಿ ಮೊರೆ ಹೋಗುತ್ತಿದ್ದಾರೆ. ಅಂತಹ ಘಟನೆಗಳ ಪೈಕಿ ಇತ್ತೀಚಿಗೆ ಮುಗಳಖೋಡ ಪಟ್ಟಣ ಸಮೀಪದ ಖಣದಾಳ ಗ್ರಾಮದಲ್ಲಿ ಫೆ.13 ರಿಂದ 17ರ ವರೆಗೆ ನಡೆದ ಹುಲಿಕಾಂತೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಕ್ತರೊಬ್ಬರು ಮುಂದಿನ ವರ್ಷದ ಜಾತ್ರೆಯ ಒಳಗಾಗಿ “ನನ್ನ ಕಷ್ಟ ದೂರ ಮಾಡಿ ನನ್ನ ಅತ್ತೆ ಸಾಯಲಿ ” ಎಂದು ವಿಚಿತ್ರ ಹರಕೆಯೊಂದನ್ನು ಕಟ್ಟಿಕೊಂಡಿರುವುದು ಬೆಳಕಿಗೆ ಬಂದಿದೆ.

ಬಿಳಿ ಹಾಳೆಯಲ್ಲಿ ಬರೆದು ಕಾಣಿಕೆಯ ಹುಂಡಿಯಲ್ಲಿ ಹಾಕಿ ಪ್ರಾರ್ಥನೆ

ತನ್ನ ಇಷ್ಟಾರ್ಥವನ್ನು ಬಿಳಿ ಹಾಳೆಯಲ್ಲಿ ಬರೆದು ನೂರು ರೂಪಾಯಿ ನೋಟಿನ ಜೊತೆಗೆ ಕಟ್ಟಿ ಹುಲಿಕಾಂತೇಶ್ವರ ದೇವರ ಕಾಣಿಕೆಯ ಹುಂಡಿಯಲ್ಲಿ ಹಾಕಿ ಪ್ರಾರ್ಥನೆ ಮಾಡಿದ್ದಾರೆ.

ತಬ್ಬಿಬ್ಬಾದ ಗ್ರಾಮಸ್ಥರು

ಫೆ.17 ರಂದು ವಿಶೇಷ ಜಾತ್ರೆ ಮುಗಿದ ಹಿನ್ನೆಲೆಯಲ್ಲಿ ಹುಲಿಕಾಂತೇಶ್ವರ ಜಾತ್ರಾ ಕಮೀಟಿಯವರು ಹುಂಡಿಯನ್ನು ತೆಗೆದು ಹಣ ಎಣಿಕೆ ಮಾಡುವ ಸಂದರ್ಭದಲ್ಲಿ ಈ ವಿಚಿತ್ರ ಹರಕೆಯ ಚೀಟಿ ಸಿಕ್ಕಿದೆ. ಈ ಕುರಿತು ಹಣ ಎಣಿಕೆ ಮಾಡುವ ಸಂದರ್ಭದಲ್ಲಿ ಸಿಕ್ಕ ಈ ವಿಚಿತ್ರ ಬೇಡಿಕೆಯ ಚೀಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಕೂಡ ಆಗಿದೆ. ಇದನ್ನು ನೋಡಿದ ಜನರಲ್ಲಿ ಎಂತಹ ವಿಚಿತ್ರ ಬೇಡಿಕೆ ಇದು, ಯಾರು ಹಾಕಿರಬಹುದು ಎಂದು ಜಾತ್ರಾ ಕಮೀಟಿ ಹಾಗೂ ಗ್ರಾಮಸ್ಥರು ತಬ್ಬಿಬ್ಬಾಗಿದ್ದಾರೆ.

ಇಲ್ಲಿ ಅತ್ತೆಯ ಕಾಟಕ್ಕೆ ಬೇಸತ್ತವರು ಸೋಸೆಯೋ? ಅಥವಾ ಅಳಿಯನೋ ಎಂಬುದು ಗೊತ್ತಾಗಿಲ್ಲ. ಹಲವು ವರ್ಷಗಳಿಂದ ಹುಲಿಕಾಂತೇಶ್ವರ ಜಾತ್ರೆ ನಡೆಯುತ್ತಿದ್ದು, ಇಂತಹ ವಿಚಿತ್ರ ಬೇಡಿಕೆ ಬಂದಿರುವುದು ಇದೇ ಮೊದಲು. ದೇವರ ಗುಡಿಯಲ್ಲಿರುವ ಎರಡು ಕಾಣಿಕೆ ಪೆಟ್ಟಿಗೆಯಲ್ಲಿ ಎರಡು ಚೀಟಿಯಲ್ಲಿ ಮುಂದಿನ ವರ್ಷ ಬರುವ ಜಾತ್ರೆಯ ಒಳಗಾಗಿ ನಮ್ಮ ಅತ್ತೆ ಸಾಯಲಿ ಎಂಬ ವಿಚಿತ್ರ ಬೇಡಿಕೆ ಬರೆದು ಹಾಕಿದ್ದಾರೆ. ಇದು ಸ್ಥಳೀಯರ ಆತಂಕಕ್ಕೂ ಕಾರಣವಾಗಿದೆ ಎಂದು ಹುಲಿಕಾಂತೇಶ್ವರ ಕಮೀಟಿಯ ಸದಸ್ಯ ಶಂಕರ ಸುತಾರ ಎಂದಿದ್ದಾರೆ.

ಇನ್ನು, ಹಿಂದಿನ ಕಾಲದ ಭಕ್ತರು ನಮ್ಮ ಮನೆಯ ಸದಸ್ಯರು ಎಲ್ಲರೂ ಕೂಡಿ ನೂರಾರು ವರ್ಷಗಳ ಕಾಲ ಬಾಳಿ ಬದುಕಲಿ ಎಂಬ ಹತ್ತು ಹಲವು ರೀತಿಯ ಬೇಡಿಕೆಗಳನ್ನು ದೇವರಲ್ಲಿ ಇಡುತ್ತಿದ್ದರು. ಆದರೆ,ಈಗ ಅತ್ತೆ ಸಾಯಲಿ ಎಂದು ಹುಚ್ಚರಂತೆ ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. ಹಿರಿಯರಲ್ಲಿ ಭಯ, ಭಕ್ತಿ ಇಲ್ಲದಿರುವವರು ಈ ರೀತಿ ಮಾಡಿದ್ದಾರೆ ಎಂದು ಹುಲಿಕಾಂತೇಶ್ವರ ಕಮೀಟಿಯ ಅಧ್ಯಕ್ಷ ರಾಮಕೃಷ್ಣ ದಳವಾಯಿ ಬೇಸರ ವ್ಯಕ್ತಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *