Poli Papanna ಬೆಂಗಳೂರಿನ ಪೋಲಿ ಪಾಪಣ್ಣ ಇನ್ಸ್‌ಪೆಕ್ಟರ್, ಮಹಿಳಾ ರೌಡಿ ಶೀಟರ್‌ನ್ನೇ ಮಂಚ ಕರೆದ ಆಡಿಯೋ ರಿಲೀಸ್ | Police Inspector Caught In Audio Scandal Accused Of Harassing Female Rowdy Sheeter

Poli Papanna ಬೆಂಗಳೂರಿನ ಪೋಲಿ ಪಾಪಣ್ಣ ಇನ್ಸ್‌ಪೆಕ್ಟರ್, ಮಹಿಳಾ ರೌಡಿ ಶೀಟರ್‌ನ್ನೇ ಮಂಚ ಕರೆದ ಆಡಿಯೋ ರಿಲೀಸ್ | Police Inspector Caught In Audio Scandal Accused Of Harassing Female Rowdy Sheeter



Poli Papanna ಬೆಂಗಳೂರಿನ ಪೋಲಿ ಪಾಪಣ್ಣ ಇನ್ಸ್‌ಪೆಕ್ಟರ್, ಮಹಿಳಾ ರೌಡಿ ಶೀಟರ್‌ನ್ನೇ ಮಂಚ ಕರೆದ ಆಡಿಯೋ ರಿಲೀಸ್ | Police Inspector Caught In Audio Scandal Accused Of Harassing Female Rowdy Sheeter

ಬೆಂಗಳೂರಿನ ಪೋಲಿ ಪಾಪಣ್ಣ ಇನ್ಸ್‌ಪೆಕ್ಟರ್, ಮಹಿಳಾ ರೌಡಿ ಶೀಟರ್‌ನ್ನೇ ಮಂಚ ಕರೆದ ಆಡಿಯೋ ರಿಲೀಸ್ ಆಗಿದೆ. ಮಹಿಳಾ ರೌಡಿ ಶೀಟರ್‌ಗೆ ಮುದ್ದು ಬಂಗಾರಿ, ಚಿನ್ನು ಎಂದು ಕರೆದು ಮನೇಲಿ ಯಾರೂ ಇಲ್ಲ ಬಾ ಎಂದು ಕರೆಯುವ ಆಡಿಯೋ ಬಿಡುಗಡೆಯಾಗಿದೆ.

ಬೆಂಗಳೂರು (ಮಾ.25) ಮೂಡುಬಿದಿರೆ ಇನ್ಸ್‌ಪೆಕ್ಟರ್ ಆಡಿಯೋ ಹಾಗೂ ವಿಡಿಯೋ ವೈರಲ್ ಆಗಿ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೇ ಇದೀಗ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಇನ್ಸ್‌ಪೆಕ್ಟರ್ ಪಾಪಣ್ಣನ ಕಾಮಕಾಂಡ ಆಡಿಯೋಗಳು ಹೊರಬಂದಿದೆ. ಮಹಿಳಾ ರೌಡಿ ಶೀಟರ್ ಯಶಸ್ವಿನಿ ಜೊತೆ ಸಿಕ್ಕಾ ಪಟ್ಟೆ ಲವ್ ಶುರುವಾಗಿದೆ. ಪದೇ ಪದೇ ಫೋನ್ ಮಾಡಿ ಮಹಿಳಾ ರೌಡಿ ಶೀಟರ್‌ ಕಿರುಕುಳ ನೀಡಿದ್ದು ಮಾತ್ರವಲ್ಲ, ಆಕೆಯನ್ನು ಮಂಚಕ್ಕೆ ಕರೆದ ಆಡಿಯೋಗಳು ವೈರಲ್ ಆಗಿದೆ. ಪೋಲಿ ಪಾಪಣ್ಣನ ವಿರುದ್ಧ ಮಹಿಳಾ ರೌಡಿ ಶೀಟರ್ ದೂರು ನೀಡಿದ್ದಾರೆ.

ಪೋಲಿ ಪಾಪಣ್ಣನ ಆಡಿಯೋದಲ್ಲಿ ಏನಿದೆ?

ಇನ್ಸ್‌ಪೆಕ್ಟರ್ ಪೋಲಿ ಪಾಪಣ್ಣ ಮಹಿಳಾ ರೌಡಿ ಶೀಟರ್ ಯಶಸ್ವಿನ ಜೊತೆ ಫೋನ್ ಮೂಲಕ ಮಾತನಾಡಿದ ಆಡಿಯೋ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ. ಎನು ಮಾಡುತ್ತಿದ್ದೆಯಾ ಡಾರ್ಲಿಂಗ್, ಮುದ್ದು ಚಿನ್ನ, ಬಂಗಾರಿ ನಿನಗೆ ಟೆನ್ಶನ್ ಕೊಡಲ್ಲ. ಎಲ್ಲಿದ್ದೀಯಾ, ಇವತ್ತು ಮನೆಯಲ್ಲಿ ಯಾರು ಇಲ್ಲ ಮನೆಗೆ ಬಾ ಎಂದು ಕರೆಯುವ ಆಡಿಯೋಗಳು ಬಹಿರಂಗವಾಗಿದೆ. ನೀನು ತುಂಬಾ ಚೆನ್ನಾಗಿದ್ದಿಯಾ, ನನ್ನ ಜೊತೆ ಬಂದು ಮಲಗು ಎಂದು ಹೇಳಿರುವ ಆಡಿಯೋಗಳು ವೈರಲ್ ಆಗಿದೆ. ನನ್ನನ್ನು ಪಾಪಣ್ಣ ಸಾರ್ ಎಂದು ಕರೆಯಬೇಡು, ನಾನು ಪೊಲೀಸ್ ಇನ್ಸ್‌ಪೆಕ್ಟರ್ ರೀತಿ ನಿನ್ನ ಜೊತೆ ನಡೆದುಕೊಂಡಿದ್ದೀನಾ ಎಂದು ಪೋಲಿ ಪಾಪಣ್ಣ ಹೇಳುತ್ತಿರುವ ಆಡಿಯೋ ಕೋಲಾಹಲ ಸೃಷ್ಟಿಸಿದೆ.

ಲವ್ ಯು ಚಿನ್ನಾ, ಬಂಗಾರಿ ಬಾರೇ ಇಲ್ಲಿ

ಪೋಲಿ ಪಾಪಣ್ಣ ಫೋನ್ ಕಾಲ್ ಮಾತ್ರವಲ್ಲ, ಮೆಸೇಜ್ ಮೂಲಕವೂ ಕಿರುಕುಳ ನೀಡಿದ್ದಾರೆ. ಲವ್ ಯು ಚಿನ್ನಾ, ಬಂಗಾರಿ ಬಾರೇ ಇಲ್ಲಿ ಎಂದು ಮೆಸೇಜ್ ಮಾಡಿದ್ದಾನೆ. ಅಸಭ್ಯ ಮೆಸೇಜ್ ಮಾಡಿರುವ ಹಲವು ಸ್ಕ್ರೀನ್‌ಶಾಟ್‌ಗಳು ಬಹಿರಂಗವಾಗಿದೆ. ನೀನು ಸಹಕರಿಸಿದರೆ ಕೇಸ್ ನೋಡಿಕೊಳ್ಳುತ್ತೇನೆ ಎಂದು ಮೆಸೇಜ್ ಮಾಡಿದ್ದಾರೆ.

ಯಶಸ್ವಿನಿಯಿಂದ ಪೊಲೀಸ್ ಕಮಿಷನರ್‌ಗೆ ದೂರು

ಮಹಿಳಾ ರೌಡಿ ಶೀಟರ್ ಯಶಸ್ವಿನಿ ಕೋಣನಕುಂಟೆ ಇನ್ಸ್‌ಪೆಕ್ಟರ್ ಪೋಲಿ ಪಾಪಣ್ಣ ವಿರುದ್ಧ ಪೊಲೀಸ್ ಕಮಿಷನರ್‌ಗೆ ದೂರು ದಾಖಲಿಸಿದ್ದಾರೆ.ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡುತ್ತಾರೆ. ಮನೆಗೆ ಬರ್ಲಾ ಎಂದು ಕೇಳುತ್ತಾರೆ. ನಾನು ನಿನಗೆ ಇನ್ಸ್‌ಪೆಕ್ಟರ್ ಅಲ್ಲ ಬಂಗಾರಿ ನಾನು ತುಂಬಾ ಕ್ಲೋಸ್ ಫ್ರೆಂಡ್ ಎಂದು ಹೇಳುತ್ತಾರೆ. ನನ್ನ ಮೇಲೆ ರೌಡಿ ಶೀಟರ್ ತೆರೆದು ಇದೀಗ ಕ್ಲೋಸ್ ಫ್ರೆಂಡ್ ಎಂದು ಹೇಳುತ್ತಾರೆ. ಕಿರುಕಳ ನೀಡುತ್ತಿದ್ದಾರೆ. ಪಾಪಣ್ಣ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.



Source link

Leave a Reply

Your email address will not be published. Required fields are marked *