Headlines

ದಂಪತಿ ಮೇಲೆ ಬಿದ್ದ ಕಾಂಕ್ರೀಟ್ ಮೆಟ್ಟಿಲು: ಹೊಸ ಮನೆ ಕನಸು ನನಸಾಗುವ ಮೊದಲೇ ಇಬ್ಬರೂ ಸಾವು | Raichur Couple Died After Staircase Of Under Construction House Fell On Them

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ನಿರ್ಮಾಣ ಹಂತದ ಮನೆಯ ಮೆಟ್ಟಿಲು ಕುಸಿದು ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗೋಡೆ ಪ್ಲಾಸ್ಟರ್ ಕೆಲಸಕ್ಕೆ ಮುಂದಾಗಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯ ಕನಸು ನನಸಾಗುವ ಮೊದಲೇ ದಂಪತಿ ಸಾವು: 

ರಾಯಚೂರು: ನಿರ್ಮಾಣ ಹಂತದ ಮನೆಯ ಮೆಟ್ಟಿಲು ಬಿದ್ದು ದಂಪತಿ ಸಾವಿಗೀಡಾದಂತಹ ಘಟನೆ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ನಡೆದಿದೆ. ಕಾಂಕ್ರೀಟ್ ಮೆಟ್ಟಿಲು ಮೇಲಿನಿಂದ ಬಿದ್ದ ರಭಸಕ್ಕೆ ಗಂಡ – ಹೆಂಡತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತರನ್ನು ಪತ್ನಿ 33 ವರ್ಷದ ಶಿವಮ್ಮ ಹಾಗೂ ಪತಿ 35 ವರ್ಷದ ದ್ಯಾವಪ್ಪ ಸೂಗುರು ಎಂದು ಗುರುತಿಸಲಾಗಿದೆ.

ಕಳೆದ ಕೆಲ ದಿನಗಳಿಂದ ದಂಪತಿ ಮನೆ ಕಟ್ಟುತ್ತಿದ್ದು, ಎಂದಿನಂತೆ ಇವತ್ತು ಮನೆಯ ಗೋಡೆ ಪ್ಲಾಸ್ಟರ್ ಕೆಲಸಕ್ಕೆ ದಂಪತಿ ಮುಂದಾಗಿದ್ದರು ಈ ವೇಳೆ ಏಕಾಏಕಿಯಾಗಿ ಮನೆಯ ಮೆಟ್ಟಿಲು ಕುಸಿದು ದಂಪತಿ ಸಾವಿಗೀಡಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಂಪತಿಯ ಮೃತದೇಹವನ್ನು ಲಿಂಗಸೂಗೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬ್ಯಾಡಗಿ ಮೆಣಸಿನಕಾಯಿ ಮೇಲೆ ಯುದ್ಧದ ಕಾರ್ಮೋಡ: ರಫ್ತು ಬಂದ್, ಆತಂಕದಲ್ಲಿ ಬೆಳೆಗಾರರು

Source link

Leave a Reply

Your email address will not be published. Required fields are marked *