‘ಹೊಸ ನಟಿಯರನ್ನು ವೇಶಾವೃತ್ತಿಗೆ ತಳ್ಳುತ್ತಾರೆ..’ ಚಿತ್ರರಂಗದ ಶಾಕಿಂಗ್‌ ವಿಚಾರ ಹೇಳಿದ ತನುಶ್ರೀ ದತ್ತಾ! | Tanushree Dutta Shocking Claims Casting Couch Prostitution Bollywood Dark Side San

‘ಹೊಸ ನಟಿಯರನ್ನು ವೇಶಾವೃತ್ತಿಗೆ ತಳ್ಳುತ್ತಾರೆ..’ ಚಿತ್ರರಂಗದ ಶಾಕಿಂಗ್‌ ವಿಚಾರ ಹೇಳಿದ ತನುಶ್ರೀ ದತ್ತಾ! | Tanushree Dutta Shocking Claims Casting Couch Prostitution Bollywood Dark Side San



‘ಹೊಸ ನಟಿಯರನ್ನು ವೇಶಾವೃತ್ತಿಗೆ ತಳ್ಳುತ್ತಾರೆ..’ ಚಿತ್ರರಂಗದ ಶಾಕಿಂಗ್‌ ವಿಚಾರ ಹೇಳಿದ ತನುಶ್ರೀ ದತ್ತಾ! | Tanushree Dutta Shocking Claims Casting Couch Prostitution Bollywood Dark Side San

ನಟಿ ತನುಶ್ರೀ ದತ್ತಾ ಅವರು ಸಿನಿಮಾರಂಗಕ್ಕೆ ಬರುವ ಹೊಸಬರು ಎದುರಿಸುವ ಶೋಷಣೆಯ ಬಗ್ಗೆ ಮಾತನಾಡಿದ್ದಾರೆ. ದೊಡ್ಡ ಭರವಸೆಗಳನ್ನು ನೀಡಿ ಅವರನ್ನು ಬಲೆಗೆ ಬೀಳಿಸಿ, ಲೈಂಗಿಕವಾಗಿ ಶೋಷಿಸಲಾಗುತ್ತದೆ ಮತ್ತು ಕೆಲವರನ್ನು ವೇಶ್ಯಾವಾಟಿಕೆಗೂ ತಳ್ಳಲಾಗುತ್ತದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. 

ಮುಂಬೈ (ಮಾ.14): ನಟಿ ತನುಶ್ರೀ ದತ್ತಾ ಇತ್ತೀಚೆಗೆ ಸಿನಿಮಾರಂಗದಲ್ಲಿ ಹೊಸಬರ ಶೋಷಣೆಯ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮನರಂಜನಾ ಉದ್ಯಮಕ್ಕೆ ಬರುವ ಅನೇಕ ಹೊಸಬರು ಲೈಂಗಿಕ ಶೋಷಣೆಯನ್ನು ಎದುರಿಸುತ್ತಾರೆ ಮತ್ತು ಕೆಲವರ ಸ್ಥಿತಿ ಎಷ್ಟರ ಮಟ್ಟಿಗೆ ಹೋಗುತ್ತದೆ ಎಂದರೆ ಅವರು ವೇಶಾವೃತ್ತಿಗೆ ಇಳಿಯುವಂತೆ ಒತ್ತಾಯ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಮೇರಿ ಸಹೇಲಿ ಜೊತೆಗಿನ ಸಂವಾದದಲ್ಲಿ ಮಾತನಾಡಿದ ತನುಶ್ರೀ, ಉದ್ಯಮಕ್ಕೆ ಬರುವ ಅನೇಕ ಹೊಸಬರನ್ನು ಆರಂಭದಲ್ಲಿ ತುಂಬಾ ಹೊಗಳಲಾಗುತ್ತದೆ. ಅವರಿಗೆ ದೊಡ್ಡ ದೊಡ್ಡ ಭರವಸೆ ನೀಡಿ ಆಕರ್ಷಿಸುತ್ತಾರೆ ಎಂದು ಹೇಳಿದ್ದಾರೆ. ಮುಂದೆ ನೀವು ದೊಡ್ಡ ನಾಯಕಿ ಆಗುತ್ತಿರಿ, ಸ್ಟಾರ್‌ ನಾಯಕಿಯಾಗುವ ಎಲ್ಲಾ ಗುಣ ನಿಮ್ಮಲ್ಲಿದೆ ಎಂದು ಹೊಗುಳುತ್ತಾರೆ. ಆದರೆ, ಅವರು ನೀರುವ ಈ ಭರವಸೆಗಳು ದೊಡ್ಡ ಬಲೆ ಒಂದರ ಆರಂಭ ಎನ್ನುವುದು ನಂತರ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ತನುಶ್ರೀ ಅವರ ಪ್ರಕಾರ, ಸಿನಿಮಾದ ಅನೇಕ ಜನರು ಮೊದಲು ಹೊಸ ಕಲಾವಿದರನ್ನು ಹೊಗಳುತ್ತಾರೆ ಮತ್ತು ನಂತರ ಬೇರೆ ಬೇರೆ ಜನರನ್ನು ಭೇಟಿ ಮಾಡಲು ಕೇಳುತ್ತಾರೆ. ಅಂತಹ ವಾತಾವರಣದಲ್ಲಿ, ಕಲಾವಿದರು ಬಹಳ ಸಂಯಮ ಮತ್ತು ಎಚ್ಚರಿಕೆಯಿಂದ ಮುಂದುವರಿಯಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

‘ಇಲ್ಲಿನ ದುರಾಸೆಯ ವಿಧಾನವೇ ಬೇರೆ’ – ತನುಶ್ರೀ

ಪೋಷಕರು ಮಕ್ಕಳಾಗಿದ್ದಾಗ ನಮಗೆ ಕಲಿಸುವ ಎಚ್ಚರಿಕೆಯ ಪಾಠಗಳು ನಾವು ಬೆಳೆದಂತೆಯೂ ಅನ್ವಯಿಸುತ್ತವೆ ಎಂದು ತನುಶ್ರೀ ಹೇಳಿದ್ದಾರೆ. ಮಕ್ಕಳಿಗೆ ಅಪರಿಚಿತರ ಸುತ್ತಲೂ ಹೋಗದಂತೆ ಸಲಹೆ ನೀಡುವಂತೆಯೇ, ಉದ್ಯಮದಲ್ಲಿ ಜಾಗರೂಕರಾಗಿರುವುದು ಅಷ್ಟೇ ಮುಖ್ಯ ಎಂದು ಅವರು ಹೇಳಿದರು. ಸಿನಿಮಾರಂಗದ ದುರಾಸೆಯ ವಿಧಾನವೇ ವಿಭಿನ್ನವಾಗಿದೆ ಎಂದು ಅವರು ವಿವರಿಸಿದರು. ಅನೇಕ ಜನರು ಕಲಾವಿದರ ಮಹತ್ವಾಕಾಂಕ್ಷೆಗಳು, ಭರವಸೆಗಳು ಮತ್ತು ಕನಸುಗಳನ್ನು ಬಳಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು. ಉದ್ಯಮಕ್ಕೆ ಬರುವ ಹೊಸಬರಿಗೆ ಎಚ್ಚರಿಕೆ ಸಿಗಲಿ ಎಂಬ ಉದ್ದೇಶದಿಂದ ಈ ವಿಷಯಗಳ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.

“ಇಲ್ಲಿಗೆ ಬಹಳಷ್ಟು ಹುಡುಗರು ಮತ್ತು ಹುಡುಗಿಯರು ಬರುತ್ತಾರೆ. ಅವರನ್ನು ಬಳಸಿಕೊಳ್ಳಲಾಗುತ್ತದೆ, ಶೋಷಿಸಲಾಗುತ್ತದೆ, ಮತ್ತು ನಂತರ ಕೈಬಿಡಲಾಗುತ್ತದೆ. ಕೆಲವರು ವೇಶ್ಯಾವಾಟಿಕೆಗೆ ಇಳಿಯುತ್ತಾರೆ ಏಕೆಂದರೆ ಅವರನ್ನು ತುಂಬಾ ಶೋಷಣೆ ಮಾಡಲಾಗುತ್ತದೆ, ಜನರು ಅವರನ್ನು ಆ ವ್ಯವಹಾರಕ್ಕೆ ತಳ್ಳುತ್ತಾರೆ” ಎಂದು ನಟಿ ಹೇಳಿದರು. “ಕೆಲವು ಜನರು ಮಾನಸಿಕವಾಗಿ ತುಂಬಾ ಮುರಿದುಹೋಗಿರುತ್ತಾರೆ, ಅವರು ತಮ್ಮ ಊರುಗಳಿಗೆ ಹಿಂತಿರುಗುತ್ತಾರೆ. ಮತ್ತು ಈ ಕಥೆಗಳು ಎಂದಿಗೂ ಹೊರಬರುವುದಿಲ್ಲ. ಕೇವಲ ಯಶಸ್ಸಿನ ಕಥೆಗಳನ್ನು ಹೊರಗೆ ತೋರಿಸಲಾಗುತ್ತದೆ” ಎಂದು ಹೇಳಿದ್ದಾರೆ.

ಸಿನಿಮಾರಂಗದಲ್ಲಿ ರಾಜಿ ಮಾಡಿಕೊಳ್ಳುವುದನ್ನು ಸಮರ್ಥನೆ ಮಾಡುತ್ತಿದ್ದಳು ಎನ್ನುವ ಕಾರಣಕ್ಕೆ ಒಬ್ಬ ಪ್ರಖ್ಯಾತ ನಟಿಯ ಜೊತೆಗಿನ ಸ್ನೇಹವನ್ನೂ ನಾನು ಕೊನೆ ಮಾಡಿದ್ದೇನೆ. ಯಾರೊಂದಿಗಾದರೂ ವೈಯಕ್ತಿಕ ಸಂಬಂಧದಲ್ಲಿರಲು ಬಯಸಿದರೆ, ಅದು ಬೇರೆ ವಿಷಯ, ಆದರೆ ನಾನು ತನ್ನ ಜೀವನವನ್ನು ರಾಜಿ ಮಾಡಿಕೊಳ್ಳೋದಿಲ್ಲ. ಅಂಥ ವ್ಯವಹಾರ ನನ್ನದಲ್ಲ, ನಾನೊಬ್ಬಳು ಕಲಾವಿದೆ ಎಂದು ತನುಶ್ರಿ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *