Headlines

ಪರ ಪುರುಷನ ಜೊತೆ ಮಲಗಿದ್ರೆ ಮಾತ್ರ ಮನೆಯೊಳಗೆ ಪ್ರವೇಶ: ದೂರಿನಲ್ಲಿ ಮಹಿಳೆ ಶಾಕಿಂಗ್​ ವಿಷ್ಯ ಬಯಲು | Daughter In Law For Dowry Told Keep Her In The House Only If She Got Halala Suc

ಪರ ಪುರುಷನ ಜೊತೆ ಮಲಗಿದ್ರೆ ಮಾತ್ರ ಮನೆಯೊಳಗೆ ಪ್ರವೇಶ: ದೂರಿನಲ್ಲಿ ಮಹಿಳೆ ಶಾಕಿಂಗ್​ ವಿಷ್ಯ ಬಯಲು | Daughter In Law For Dowry Told Keep Her In The House Only If She Got Halala Suc



ಪರ ಪುರುಷನ ಜೊತೆ ಮಲಗಿದ್ರೆ ಮಾತ್ರ ಮನೆಯೊಳಗೆ ಪ್ರವೇಶ: ದೂರಿನಲ್ಲಿ ಮಹಿಳೆ ಶಾಕಿಂಗ್​ ವಿಷ್ಯ ಬಯಲು | Daughter In Law For Dowry Told Keep Her In The House Only If She Got Halala Suc

ಉತ್ತರ ಪ್ರದೇಶದಲ್ಲಿ ವರದಕ್ಷಿಣೆ ಕಿರುಕುಳದಿಂದ ತ್ರಿವಳಿ ತಲಾಖ್‌ಗೆ ಒಳಗಾದ ಮಹಿಳೆಗೆ, ಮರಳಿ ಮನೆಗೆ ಸೇರಿಸಿಕೊಳ್ಳಲು ‘ಹಲಾಲಾ’ ಸಂಪ್ರದಾಯ ಪಾಲಿಸುವಂತೆ ಷರತ್ತು ವಿಧಿಸಲಾಗಿದೆ. ಈ ಸಂಪ್ರದಾಯದ ಹೆಸರಿನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಉತ್ತರ ಪ್ರದೇಶದಲ್ಲೊಂದು ಶಾಕಿಂಗ್​ ಎನ್ನುವಂಥ ಘಟನೆ ನಡೆದಿದೆ. ಇಂಥ ಘಟನೆ ಸಾಮಾನ್ಯವಾಗಿದ್ದರೂ, ಮಹಿಳೆಯೊಬ್ಬಳು ಧೈರ್ಯದಿಂದ ಮುಂದೆ ಬಂದು ಮತೌಂಧ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರಿಂದ ಇದು ಇಷ್ಟೊಂದು ಪ್ರಮಾಣದಲ್ಲಿ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಆ ದೂರಿನಲ್ಲಿ ಮಹಿಳೆ ತನ್ನ ಪತಿಯ ಮನೆಯವರು ಪರ ಪುರುಷನ ಜೊತೆ ಮಲಗಿಬಂದರೆ ಮಾತ್ರ ಮನೆಯೊಳಗೆ ಪ್ರವೇಶ ಎಂದು ಹೇಳುತ್ತಿದ್ದಾರೆ. ಈ ನೆಪದಲ್ಲಿ ಹಲವು ಪುರುಷರಿಂದ ಲೈಂ*ಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಮಹಿಳೆ ಹೇಳಿದ್ದಾಳೆ. ಅಂದಹಾಗೆ ಇದು ಇಸ್ಲಾಂನಲ್ಲಿ ಇರುವ ‘ಹಾಲಾಲಾ’ ಎನ್ನುವ ಸಂಪ್ರದಾಯ ಎಂದು ಆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಸಂಪ್ರದಾಯದ ಹೆಸರಿನಲ್ಲಿ ಈ ರೀತಿಯ ಶೋಷಣೆ ಮಾಡುತ್ತಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ.

15ನೇ ವಯಸ್ಸಲ್ಲಿ ಮದುವೆ

15 ವರ್ಷದವಳಿರುವಾಗಲೇ ನನ್ನನ್ನು ಮದುವೆ ಮಾಡಲಾಯಿತು. ಕಳೆದ ಜೂನ್​ನಲ್ಲಿ ನನ್ನ ಮದುವೆಯನ್ನು ಮಾಡಲಾಯಿತು. ನನ್ನ ತಂದೆ ಸಾಮರ್ಥ್ಯಕ್ಕೆ ತಕ್ಕಂತೆ ಎಲ್ಲವನ್ನೂ ಒದಗಿಸಿದ್ದರು. ಆದರೆ ಪತಿಯ ಮನೆಯವರು ಅಷ್ಟರಿಂದ ತೃಪ್ತರಾಗಲಿಲ್ಲ. ಅವರು ವರದಕ್ಷಿಣೆಯಾಗಿ ಹೀರೋ ಹೋಂಡಾ ಬೈಕ್ ಅನ್ನು ಕೇಳುತ್ತಿದ್ದರು. ಆದರೆ ಅದನ್ನು ನೀಡಲು ನಾನು ಅಸಮರ್ಥಳಾಗಿದ್ದರಿಂದ ನನ್ನ ಅತ್ತೆ ಮತ್ತು ಪತಿ ಎಲ್ಲರೂ ಸೇರಿ ನನ್ನನ್ನು ವರದಕ್ಷಿಣೆ ತರುವಂತೆ ಹಿಂಸಿಸತೊಡಗಿದರು. ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸತೊಡಗಿದರು ಎಂದು ಆಕೆ ಹೇಳಿಕೊಂಡಿದ್ದಾಳೆ. ನಾನು ಅವರ ಬೇಡಿಕೆ ಈಡೇರಿಸದೇ ಇದ್ದ ಕಾರಣದಿಂದ ಉಪವಾಸವಿಟ್ಟರು. ವಿಷಯವು ಹಲವಾರು ಬಾರಿ ಉಲ್ಬಣಗೊಂಡಾಗ, ಪೊಲೀಸರು ಮಧ್ಯೆ ಪ್ರವೇಶ ಮಾಡಿ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿದರು, ಆದರೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ಥಳಿಸಿ ಅತ್ತೆಯಂದಿರ ಮನೆಯಿಂದ ಹೊರಗೆ ಹಾಕಲಾಯಿತು. “ನಿಮ್ಮ ಮನೆಯವರಿಗೆ ಕರೆ ಮಾಡಿ, ಎರಡು ಲಕ್ಷ ರೂಪಾಯಿ ಮತ್ತು ಒಂದು ಹೀರೋ ಹೋಂಡಾ ಬೈಕ್ ತಂದುಕೊಡು, ನಿನಗೆ ತ್ರಿಬಲ್​ ತಲಾಖ್​ ನೀಡಿಯಾಗಿದೆ ಎದರು.

ಹಲಾಲಾ ಷರತ್ತು

ಆಕೆಯ ಅತ್ತೆಯ ಮನೆಯವರು ಹಿಂತಿರುಗಲು ಹಲಾಲಾ (ಹಲಾಲಾ) ಷರತ್ತನ್ನು ವಿಧಿಸಿದರು. ಕೊನೆಗೆ ಪತಿ ಎರಡು ಬಾರಿ ತ್ರಿವಳಿ ತಲಾಖ್​ (Tribble Talaq) ನೀಡಿದ. ಆ ಬಳಿಕ ನಾನು ಹಾಗೆ ಮಾಡದಂತೆ ಬೇಡಿಕೊಂಡೆ. ಆದರೆ ನಮ್ಮಲ್ಲಿರುವ ಸಂಪ್ರದಾಯದಂತೆ ಹಲಾಲಾ ನಡೆದರೆ ಮಾತ್ರ ವಾಪಸ್​ ಕರೆಸಿಕೊಳ್ಳುವುದಾಗಿ ಹೇಳಿದರು ಎಂದಿದ್ದಾಳೆ. ಹಲಾಲಾ ಅನ್ನು ನಿಕಾಹ್ ಹಲಾಲಾ (Nikah Halala) ಎಂದೂ ಕರೆಯಲಾಗುತ್ತದೆ. ಇಸ್ಲಾಮಿಕ್ ಕಾನೂನಿನಡಿ, ತ್ರಿವಳಿ ತಲಾಖ್‌ನಿಂದ ವಿಚ್ಛೇದನ ಪಡೆದ ಮಹಿಳೆಯೊಬ್ಬಳು ತನ್ನ ಮೊದಲ ಪತಿಯನ್ನು ಮರುಮದುವೆಯಾಗಲು ಅನುಸರಿಸುವ ಪ್ರಕ್ರಿಯೆ ಇದಾಗಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದರೆ, ಆಕೆ ಬೇರೊಬ್ಬನ ಜೊತೆ ದೈಹಿಕ ಸಂಬಂಧ ನಡೆಸಿ ಬರಬೇಕು.

ಅತ್ಯಾ*ಚಾರದ ಶಿಕ್ಷೆ?

ಹಾಗೆ ತನ್ನಿಂದ ಸಾಧ್ಯವಾಗದ ಕಾರಣ, ನನ್ನ ಮೇಲೆ ಕೆಲವು ಪುರುಷರಿಂದ ಅತ್ಯಾ*ಚಾರ ಮಾಡಿಸಲಾಯಿತು ಎಂದಿರುವ ಮಹಿಳೆ, ಇದೀಗ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಇಂಥ ವಿಷಯಗಳ ಮೇಲೆ ಕಠಿಣ ಕಾನೂನು ಇದ್ದರು ಕೂಡ, ಇಂಥ ಘಟನೆಗಳು ನಡೆಯುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಪೊಲೀಸರು, ಮಹಿಳೆಯ ಪತಿ ಮತ್ತು ಇತರ ನಾಲ್ವರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆ ಸೇರಿದಂತೆ ಗಂಭೀರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.



Source link

Leave a Reply

Your email address will not be published. Required fields are marked *