
ಇಸ್ರೇಲ್ ದಾಳಿಯಲ್ಲಿ ಇರಾನ್ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಮತ್ತು ಇರಾನ್ ರೆವಲ್ಯೂಷ್ನರಿ ಗಾರ್ಡ್ಸ್ (ಐಆರ್‌ಜಿಸಿ) ಕಮಾಂಡರ್ ಮೊಹಮ್ಮದ್ ಪಕ್‌ಪೂರ್ ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಿದೆ.
ಟೆಹ್ರಾನ್/ಜೆರುಸಲೇಂ: ಇಸ್ರೇಲ್ ದಾಳಿಯಲ್ಲಿ ಇರಾನ್ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಮತ್ತು ಇರಾನ್ ರೆವಲ್ಯೂಷ್ನರಿ ಗಾರ್ಡ್ಸ್ (ಐಆರ್‌ಜಿಸಿ) ಕಮಾಂಡರ್ ಮೊಹಮ್ಮದ್ ಪಕ್‌ಪೂರ್ ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಿದೆ.
ಕಳೆದ ವರ್ಷ ಮಾಜಿ ಕಮಾಂಡರ್ ಹುಸೇನ್ ಸಲಾಮಿ ಹತ್ಯೆ
ಕಳೆದ ವರ್ಷ ಮಾಜಿ ಕಮಾಂಡರ್ ಹುಸೇನ್ ಸಲಾಮಿ ಹತ್ಯೆಯ ಬಳಿಕ ಪಕ್‌ಪೂರ್ ಜೂನ್‌ನಲ್ಲಿ ಆ ಸ್ಥಾನಕ್ಕೇರಿದರು. ಇವರಿಗೆ ಐಆರ್‌ಜಿಸಿಯ ಸಾಮರ್ಥ್ಯ, ಸಿದ್ಧತೆ ಮತ್ತು ಆಂತರಿಕ ಒಗ್ಗಟ್ಟು ಹೆಚ್ಚಿಸುವ ಜವಾಬ್ದಾರಿ ನೀಡಲಾಗಿತ್ತು.
ಅಮೆರಿಕಕ್ಕೆ ಎಚ್ಚರಿಸಿದ್ದರು
ಕಳೆದ ವಾರವಷ್ಟೇ ಪಾಕ್‌ಪೂರ್, ‘ಯಾವುದೇ ತಪ್ಪು ಹೆಜ್ಜೆ ಇಡಬೇಡಿ. ನಮ್ಮ ಸೇನೆ ಟ್ರಿಗರ್ ಮೇಲೆ ಬೆರಳಿಟ್ಟು ಸನ್ನದ್ಧವಾಗಿದೆ’ ಎಂದು ಅಮೆರಿಕಕ್ಕೆ ಎಚ್ಚರಿಸಿದ್ದರು. ಇದೀಗ ಶನಿವಾರದ ದಾಳಿಯಲ್ಲಿ ಇವರ ಹತ್ಯೆಯಾಗಿದೆ.