‘ಅಜಂತಾ’ ಹೊಟೆಲ್‌ನಲ್ಲಿ ಅಣ್ಣಾವ್ರ ಮೇಲೆ ಬಿದ್ದ ಫ್ಯಾನ್‌; ತಕ್ಷಣ ಡಾ ರಾಜ್‌ಕುಮಾರ್ ಹೇಳಿದ್ದೇನು? | Dr Rajkumar Living Hotel Ajantha Incident After He Shifted From Highlands

‘ಅಜಂತಾ’ ಹೊಟೆಲ್‌ನಲ್ಲಿ ಅಣ್ಣಾವ್ರ ಮೇಲೆ ಬಿದ್ದ ಫ್ಯಾನ್‌; ತಕ್ಷಣ ಡಾ ರಾಜ್‌ಕುಮಾರ್ ಹೇಳಿದ್ದೇನು? | Dr Rajkumar Living Hotel Ajantha Incident After He Shifted From Highlands



‘ಅಜಂತಾ’ ಹೊಟೆಲ್‌ನಲ್ಲಿ ಅಣ್ಣಾವ್ರ ಮೇಲೆ ಬಿದ್ದ ಫ್ಯಾನ್‌; ತಕ್ಷಣ ಡಾ ರಾಜ್‌ಕುಮಾರ್ ಹೇಳಿದ್ದೇನು? | Dr Rajkumar Living Hotel Ajantha Incident After He Shifted From Highlands

‘ನೀವು ಇಲ್ಲೆಲ್ಲಾ ಇರಬಾರ್ದು, ನಿಮ್ಗೆ ಬೇರೆ ಹೊಟೆಲ್ ನೋಡಿದೀನಿ..’ ಅಂತ ಹೇಳಿದ್ರಂತೆ. ಅದು ಎಂಜಿ ರೋಡ್‌ನ ‘ಅಜಂತಾ ಹೊಟೆಲ್. ಅವರ ಮಾತಿನಂತೆ ಡಾ ರಾಜ್‌ಕುಮಾರ್ ಅವರು ಹೈಲ್ಯಾಂಡ್‌ ಹೊಟೆಲ್‌ನಿಂದ ತಮ್ಮ ವಾಸ್ತವ್ಯವನ್ನು ಅಜಂತಾ ಹೊಟೆಲ್‌ಗೆ ಶಿಫ್ಟ್ ಮಾಡಿಕೊಂಡ್ರು. ಆದರೆ ಅಲ್ಲಿ..

ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಅವರ ಜೀವನದಲ್ಲಿ ನಡೆದ ಘಟನೆಗಳು ಅನೇಕ. ಆದರೆ, ಆಗ ಈಗಿನಂತೆ ಸೋಷಿಯಲ್ ಮೀಡಿಯಾಗಳು ಹಾಗು ಮೀಡಿಯಾಗಳು ಅಷ್ಟಾಗಿ ಇರಲಿಲ್ಲ. ಅಲ್ಲೊಂದು ಇಲ್ಲೊಂದು ಸುದ್ದಿಗೋಷ್ಠಿ, ವರ್ತಮಾನ ಪತ್ರಿಕೆಗಳು (ನ್ಯೂಸ್ ಪೇಪರ್) ಅಷ್ಟೇ ಇರೋದು. ಹಳ್ಳಿಗಳಲ್ಲಿ ಗುಂಪುಗುಂಪಾಗಿ ನಡೆಸುತ್ತಿದ್ದ ಕಟ್ಟೆ ಪುರಾಣಗಳ ಮೂಲಕ ಸಿಗುವ ಸುದ್ದಿಗಳು ಹಾಗೂ ಹರಡುತ್ತಿದ್ದ ಸುದ್ದಿಗಳಷ್ಟೇ ಇದ್ದವು.

ಹೀಗಾಗಿ, ಅಂದಿನ ಕಾಲದ ನಟರ ವೈಯಕ್ತಿಕ ಜೀವನದ ಸುದ್ದಿಗಳು ಹೆಚ್ಚಾಗಿ ಜನರಿಗೆ ತಲುಪುತ್ತಿರಲಿಲ್ಲ. ಆದರೆ, ಅಂದು ನಡೆದ ಘಟನೆಗಳನ್ನು ತಿಳಿದವರು ಇಂದು ಅದನ್ನು ಯೂಟ್ಯೂಬ್‌ಗಳು ಹಾಗೂ ಸೋಷಿಯಲ್ ಮೀಡಿಯಾಗಳ ಮೂಲಕ ಹೇಳುತ್ತಿದ್ದಾರೆ. ಈ ಮೂಲಕ ಡಾ ರಾಜ್‌ಕುಮಾರ್ ಜೀವನದಲ್ಲಿ ನಡೆದ ಹಲವು ಘಟನೆಗಳು ಇಂದು ಜನಮನವನ್ನು ತಲುಪುತ್ತಿವೆ. ಇಲ್ಲಿ ಇದೀಗ ಅಂತಹ ಒಂದು ಘಟನೆಯನ್ನು ಹೇಳಲಾಗಿದೆ, ನೋಡಿ..

ಹೈಲ್ಯಾಂಡ್ಸ್‌ ಹೊಟೆಲ್‌ನಲ್ಲಿ ಇರ್ತಾ ಇದ್ರು.. ಆದ್ರೆ ಒಬ್ಬರು ನಿರ್ಮಾಪಕರು ಬಂದು ‘ನೀವು ಇಲ್ಲೆಲ್ಲಾ ಇರಬಾರ್ದು, ನಿಮ್ಗೆ ಬೇರೆ ಹೊಟೆಲ್ ನೋಡಿದೀನಿ..’ ಅಂತ ಹೇಳಿದ್ರಂತೆ. ಅದು ಎಂಜಿ ರೋಡ್‌ನ ‘ಅಜಂತಾ ಹೊಟೆಲ್. ಅವರ ಮಾತಿನಂತೆ ಡಾ ರಾಜ್‌ಕುಮಾರ್ ಅವರು ಹೈಲ್ಯಾಂಡ್‌ ಹೊಟೆಲ್‌ನಿಂದ ತಮ್ಮ ವಾಸ್ತವ್ಯವನ್ನು ಅಜಂತಾ ಹೊಟೆಲ್‌ಗೆ ಶಿಫ್ಟ್ ಮಾಡಿಕೊಂಡ್ರು. ಆದರೆ, ಅಲ್ಲಿ ಸೀಲಿಂಗ್ ಫ್ಯಾನ್‌ನ ಪ್ಲೇಟ್ ಕೆಳಗೆ ಬಿತ್ತು. ಅದರಿಂದ ವಿಚಲಿತರಾದ ಡಾ ರಾಜ್‌ಕುಮಾರ್ ಅವರು ‘ಇದ್ಯಾಕೋ ಗ್ರಹಚಾರ ಸರಿ ಇಲ್ಲ’ ಅಂತ ಹೇಳಿ ಮತ್ತೆ ಆ ಮೊದಲು ಇದ್ದ ಹೈಲ್ಯಾಂಡ್‌ ಹೊಟೆಲ್‌ಗೇ ವಾಪಸ್ ಹೋದರಂತೆ.

ಆದರೆ, ಅಲ್ಲಿಗೇ ಅದು ನಿಲ್ಲಲಿಲ್ಲ. ಸ್ವಲ್ಪ ಕಾಲದ ಬಳಿಕ, ಡಾ ರಾಜ್‌ಕುಮಾರ್ ನಟನೆಯ ‘ಬೇಡರ ಕಣ್ಣಪ್ಪ’ ಸಿನಿಮಾದ ನಿರ್ಮಾಪಕರಾದ ಎವಿಎಂ ಪ್ರೊಡಕ್ಷನ್ ಹೌಸ್ ಓನರ್, ಚೆಟ್ಟಯಾರ್ ಅವರ ಮೂಲಕ ಅಣ್ಣಾವ್ರಿಗೆ ಮನೆಯೊಂದನ್ನು ಕೊಡಿಸಿದ್ದಾರೆ. ಚೆಟ್ಟಿಯಾರ್ ಅವರು ಡಾ ರಾಜ್‌ಕುಮಾರ್ ಬಳಿ ಬಂದು ‘ನಾನು ನಿಮ್ಗೆ ಒಂದು ಜಾಗ ನೋಡಿದೀನಿ.. ಸದಾಶಿವನಗರದಲ್ಲಿ ಒಂದು ಜಾಗ ಇದೆ, ಮನೆ ಸಮೇತ. ನೀವು ಅದನ್ನು ಕೊಂಡುಕೊಳ್ಳಿ’ ಅಂದರಂತೆ. ಅವರ ಮಾತಿನಂತೆ ಆ ಕಾಲಕ್ಕೆ ಡಾ ರಾಜ್‌ಕುಮಾರ್ ಅವರು ಚೆಟ್ಟಿಯಾರ್ ತೋರಿಸಿದ ಆ ಮನೆಯನ್ನು 15 ಲಕ್ಷ ರೂಪಾಯಿಗೆ ಕೊಂಡುಕೊಂಡಿದ್ದಾರೆ.

ಡಾ ರಾಜ್‌ಕುಮಾರ್ ಅವರು ಕೊಂಡುಕೊಂಡ ಆ ಮನೆ ತುಂಬಾ ವಿಶಾಲವಾಗಿದ್ದು ಅದನ್ನು ಎಲ್ಲರೂ ‘ದೊಡ್ಮನೆ’ ಎಂದು ಕರೆಯುತ್ತಿದ್ದರಂತೆ. ಅಂದು ಹೆಸರಾದ ಆ ಮನೆಗೆ ಇಂದೂ ಕೂಡ ದೊಡ್ಮನೆ ಎಂದೇ ಹಲವರು ಕರೆಯುತ್ತಾರೆ. ಆದರೆ, ಇಂದು ಆ ಜಾಗದಲ್ಲಿ ಆ ದೊಡ್ಮನೆ ಇಲ್ಲವೇ ಇಲ್ಲ. ಆ ಮನೆಯನ್ನು ಒಡೆದುಹಾಕಿ, ಆ ಸೈಟಿನಲ್ಲಿ ಎರಡು ಮನೆಯನ್ನು ಮಾಡಲಾಗಿದ್ದು, ಅವುಗಳಲ್ಲಿ ಒಂದು ಮನೆಯಲ್ಲಿ ಪುನೀತ್ ರಾಜ್‌ಕುಮಾರ್ ಕುಟುಂಬ ಹಾಗೂ ಇನ್ನೊಂದರಲ್ಲಿ ರಾಘವೇಂದ್ರ ರಾಜ್‌ಕುಮಾರ್ ಕುಟುಂಬ ವಾಸವಾಗಿದೆ. ಆದರೆ, ಆ ಕುಟುಂಬಕ್ಕೆ ಅದೇ ‘ದೊಡ್ಮನೆ’ ಹೆಸರು ಮುಂದುವರಿದಿದೆ.



Source link

Leave a Reply

Your email address will not be published. Required fields are marked *