Headlines

ಟ್ರ್ಯಾಕ್ಟರ್ ಸಬ್ಸಿಡಿ ಆಸೆ ತೋರಿಸಿ 80 ರೈತರಿಗೆ 1.35 ಕೋಟಿ ರೂ. ಪಂಗನಾಮ: ಕಾಫಿನಾಡಲ್ಲಿ ಬೃಹತ್ ವಂಚನೆ ಜಾಲ ಪತ್ತೆ! | Chikkamagaluru Tractor Subsidy Scam Sakharayapattana 80 Farmers Cheated 1 35 Crore Sat

ಟ್ರ್ಯಾಕ್ಟರ್ ಸಬ್ಸಿಡಿ ಆಸೆ ತೋರಿಸಿ 80 ರೈತರಿಗೆ 1.35 ಕೋಟಿ ರೂ. ಪಂಗನಾಮ: ಕಾಫಿನಾಡಲ್ಲಿ ಬೃಹತ್ ವಂಚನೆ ಜಾಲ ಪತ್ತೆ! | Chikkamagaluru Tractor Subsidy Scam Sakharayapattana 80 Farmers Cheated 1 35 Crore Sat



ಟ್ರ್ಯಾಕ್ಟರ್ ಸಬ್ಸಿಡಿ ಆಸೆ ತೋರಿಸಿ 80 ರೈತರಿಗೆ 1.35 ಕೋಟಿ ರೂ. ಪಂಗನಾಮ: ಕಾಫಿನಾಡಲ್ಲಿ ಬೃಹತ್ ವಂಚನೆ ಜಾಲ ಪತ್ತೆ! | Chikkamagaluru Tractor Subsidy Scam Sakharayapattana 80 Farmers Cheated 1 35 Crore Sat

ಚಿಕ್ಕಮಗಳೂರು ಜಿಲ್ಲೆಯಲ್ಲಿ, ಸರ್ಕಾರಿ ಸಬ್ಸಿಡಿ ಕೊಡಿಸುವ ಆಮಿಷವೊಡ್ಡಿ 80ಕ್ಕೂ ಹೆಚ್ಚು ರೈತರಿಂದ 1.35 ಕೋಟಿ ರೂ. ವಂಚಿಸಿದ್ದಾನೆ. ಟ್ರ್ಯಾಕ್ಟರ್ ಹಾಗೂ ಕೃಷಿ ಉಪಕರಣಗಳಿಗಾಗಿ ಹಣ ಪಡೆದ ಆರೋಪಿ ಗಂಗಾಧರಗೌಡ ನಾಪತ್ತೆಯಾಗಿದ್ದು, ರೈತರು ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.

ಚಿಕ್ಕಮಗಳೂರು (ಏ.16): ಕಷ್ಟಪಟ್ಟು ಭೂಮಿ ತಾಯಿಯನ್ನು ನಂಬಿ ಬದುಕುವ ರೈತರ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡ ವಂಚಕನೊಬ್ಬ, ಸರ್ಕಾರಿ ಸಬ್ಸಿಡಿ ಕೊಡಿಸುವ ಆಮಿಷವೊಡ್ಡಿ ಬರೋಬ್ಬರಿ 1.35 ಕೋಟಿ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ವಿವರ:

ಸಖರಾಯಪಟ್ಟಣದ ಸಮೀಪದ ವೈ. ಮಲ್ಲಾಪುರ ಗ್ರಾಮದ ನಿವಾಸಿ ಮಹೇಶ್ವರಪ್ಪ ಎಂ.ಬಿ. ಎಂಬುವವರು ಈ ಸಂಬಂಧ ದೂರು ನೀಡಿದ್ದಾರೆ. ಬೆಂಗಳೂರು ಮೂಲದ ಗಂಗಾಧರಗೌಡ ಕೆ. (A1) ಎಂಬ ವ್ಯಕ್ತಿ ಈ ಬೃಹತ್ ವಂಚನೆಯ ಜಾಲದ ಸೂತ್ರಧಾರ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಯು ರೈತರನ್ನು ಸಂಪರ್ಕಿಸಿ, ತಾನು ಕೃಷಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಿಂದ ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್ ಮತ್ತು ಇತರ ಕೃಷಿ ಉಪಕರಣಗಳನ್ನು ಕೊಡಿಸುವುದಾಗಿ ನಂಬಿಸಿದ್ದಾನೆ.

ವಂಚನೆಯ ಜಾಲ ಹರಡಿದ್ದು ಹೇಗೆ?

ದೂರುದಾರ ಮಹೇಶ್ವರಪ್ಪ ಅವರಿಗೆ 2024ರ ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಈ ಗಂಗಾಧರಗೌಡ ಪರಿಚಯವಾಗಿದ್ದ. ‘ನೀವು 50,000 ರೂಪಾಯಿ ಮುಂಗಡವಾಗಿ ಪಾವತಿಸಿದರೆ, 3 ಲಕ್ಷ ರೂಪಾಯಿಗಳ ಸರ್ಕಾರಿ ಸಬ್ಸಿಡಿಯೊಂದಿಗೆ ಟ್ರ್ಯಾಕ್ಟರ್ ಕೊಡಿಸುತ್ತೇನೆ’ ಎಂದು ಆಮಿಷ ಒಡ್ಡಿದ್ದ. ಇದನ್ನು ನಂಬಿದ ಮಹೇಶ್ವರಪ್ಪ ಮತ್ತು ಅವರ ಸ್ನೇಹಿತರು ಹಣ ನೀಡಲು ಮುಂದಾಗಿದ್ದಾರೆ. ಜುಲೈ 2024ರಲ್ಲಿ ಸಖರಾಯಪಟ್ಟಣಕ್ಕೆ ಭೇಟಿ ನೀಡಿದ್ದ ಆರೋಪಿ, ಅಲ್ಲಿನ ಸ್ಥಳೀಯ ರೈತರನ್ನು ನಂಬಿಸಿ ಹಣ ವಸೂಲಿ ಮಾಡಲು ಶುರು ಮಾಡಿದ್ದಾನೆ. ಮಹೇಶ್ವರಪ್ಪ ಅವರಲ್ಲದೆ ಅವರ ಗ್ರಾಮದ ಸೋಮಶೇಖರ್, ದಿನೇಶ್‌, ಕಲ್ಲೇಶಪ್ಪ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ರೈತರಿಂದ ಹಣ ಪಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಡಿಜಿಟಲ್ ಪಾವತಿ ಮೂಲಕ ವಂಚನೆ:

ವಂಚಕ ಗಂಗಾಧರಗೌಡ ಎಷ್ಟು ಚಾಣಾಕ್ಷನಾಗಿದ್ದನೆಂದರೆ, ಹಣವನ್ನು ನಗದು ರೂಪದಲ್ಲಿ ಮಾತ್ರವಲ್ಲದೆ, ವಿವಿಧ ಫೋನ್-ಪೇ (PhonePe) ನಂಬರ್‌ಗಳ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. 8125041599 ಮತ್ತು 8125159955 ಸೇರಿದಂತೆ ವಿವಿಧ ನಂಬರ್‌ಗಳಿಗೆ ರೈತರು ಲಕ್ಷಾಂತರ ರೂಪಾಯಿಗಳನ್ನು ಕಳುಹಿಸಿದ್ದಾರೆ. ಒಟ್ಟಾರೆ 80 ರೈತರಿಂದ ಸುಮಾರು 1,34,98,400 ರೂಪಾಯಿಗಳನ್ನು (ಒಂದು ಕೋಟಿ ಮುವತ್ತನಾಲ್ಕು ಲಕ್ಷದ ತೊಂಬತ್ತೆಂಟು ಸಾವಿರದ ನಾನೂರು ರೂ.) ಲೂಟಿ ಮಾಡಿದ್ದಾನೆ.

ನಾಪತ್ತೆಯಾದ ‘ಸಬ್ಸಿಡಿ’ ರಾಯಭಾರಿ:

ಹಣ ಪಡೆದ ನಂತರ ಕೆಲವು ದಿನಗಳ ಕಾಲ ರೈತರಿಗೆ ‘ಬಜೆಟ್ ಅನುಮೋದನೆಯಾಗಿಲ್ಲ’, ‘ಅಧಿವೇಶನ ನಡೆಯುತ್ತಿದೆ’ ಎಂಬಿತ್ಯಾದಿ ಸಬೂಬುಗಳನ್ನು ಹೇಳುತ್ತಾ ಕಾಲ ಕಳೆದಿದ್ದಾನೆ. ಆದರೆ ದಿನ ಕಳೆದಂತೆ ಆತನ ಫೋನ್ ಸ್ವಿಚ್ ಆಫ್ ಆಗಿದೆ. ಸಬ್ಸಿಡಿಯೂ ಇಲ್ಲ, ಟ್ರ್ಯಾಕ್ಟರ್‌ಗಳೂ ಇಲ್ಲ ಎಂಬುದು ತಿಳಿದಾಗ ರೈತರು ಕಂಗಾಲಾಗಿದ್ದಾರೆ. ತಾವು ಮೋಸ ಹೋಗಿರುವುದು ಖಚಿತವಾದ ಮೇಲೆ ಸಖರಾಯಪಟ್ಟಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಪೊಲೀಸ್ ಕ್ರಮ:

ಸದ್ಯ ಸಖರಾಯಪಟ್ಟಣ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಸೆಕ್ಷನ್ 318(2) ಮತ್ತು 318(4) (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವರ್ಗಾವಣೆಗೆ ಪ್ರೇರೇಪಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಎಎಸ್ಐ ಕೆ.ಎಂ. ಕುಮಾರ ಅವರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸರ್ಕಾರಿ ಸಬ್ಸಿಡಿಗಳು ನೇರವಾಗಿ ಬ್ಯಾಂಕ್ ಖಾತೆಗಳಿಗೆ (DBT) ಜಮೆಯಾಗುತ್ತವೆ ಅಥವಾ ಅಧಿಕೃತ ಸರ್ಕಾರಿ ಕಚೇರಿಗಳ ಮೂಲಕವೇ ಪ್ರಕ್ರಿಯೆ ನಡೆಯುತ್ತವೆ. ಇಂತಹ ಮಧ್ಯವರ್ತಿಗಳು ಅಥವಾ ಅಪರಿಚಿತ ವ್ಯಕ್ತಿಗಳು ಹಣ ಕೇಳಿದರೆ ರೈತರು ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಕೋಟಿ ಕೋಟಿ ಹಣದೊಂದಿಗೆ ನಾಪತ್ತೆಯಾಗಿರುವ ಈ ವಂಚಕ ಗಂಗಾಧರಗೌಡನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.



Source link

Leave a Reply

Your email address will not be published. Required fields are marked *