ಲೀಟರ್ ಡೀಸೆಲ್‌ಗೆ 520 ರೂಪಾಯಿ! ಪಾಕಿಸ್ತಾನದಲ್ಲಿ ಇತಿಹಾಸದಲ್ಲೇ ಕಾಣದ ತೈಲ ದರ ಏರಿಕೆ, | Pakistan Petrol Diesel Price Hike 500 Rupees Iran War Impact San

ಲೀಟರ್ ಡೀಸೆಲ್‌ಗೆ 520 ರೂಪಾಯಿ! ಪಾಕಿಸ್ತಾನದಲ್ಲಿ ಇತಿಹಾಸದಲ್ಲೇ ಕಾಣದ ತೈಲ ದರ ಏರಿಕೆ, | Pakistan Petrol Diesel Price Hike 500 Rupees Iran War Impact San



ಲೀಟರ್ ಡೀಸೆಲ್‌ಗೆ 520 ರೂಪಾಯಿ! ಪಾಕಿಸ್ತಾನದಲ್ಲಿ ಇತಿಹಾಸದಲ್ಲೇ ಕಾಣದ ತೈಲ ದರ ಏರಿಕೆ, | Pakistan Petrol Diesel Price Hike 500 Rupees Iran War Impact San

ಇರಾನ್ ಮೇಲಿನ ಯುದ್ಧದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಉಂಟಾದ ಏರಿಳಿತದಿಂದ ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕ್ರಮವಾಗಿ ಶೇ. 42.7 ಮತ್ತು ಶೇ. 54.9 ರಷ್ಟು ದಾಖಲೆ ಮಟ್ಟದಲ್ಲಿ ಏರಿಕೆಯಾಗಿವೆ. 

ಇಸ್ಲಾಮಾಬಾದ್ (ಏ.3): ಇರಾನ್ ಮೇಲೆ ನಡೆಯುತ್ತಿರುವ ಯುದ್ಧದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಉಂಟಾಗಿರುವ ಭಾರಿ ಏರಿಳಿತಕ್ಕೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಗುರುವಾರ ಅಲ್ಲಿನ ಸರ್ಕಾರ ಇಂಧನ ದರಗಳನ್ನು ಅತಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಮಾಡಿದ್ದು, ಪೆಟ್ರೋಲ್ ದರದಲ್ಲಿ ಶೇ. 42.7 ಮತ್ತು ಡೀಸೆಲ್ ದರದಲ್ಲಿ ಬರೋಬ್ಬರಿ ಶೇ. 54.9 ರಷ್ಟು ಹೆಚ್ಚಳ ಮಾಡಲಾಗಿದೆ.

ಪಾಕಿಸ್ತಾನದ ಪೆಟ್ರೋಲಿಯಂ ಸಚಿವ ಅಲಿ ಪರ್ವೈಜ್ ಮಲಿಕ್ ಪತ್ರಿಕಾಗೋಷ್ಠಿಯಲ್ಲಿ ಈ ಹೊಸ ದರಗಳನ್ನು ಘೋಷಿಸಿದ್ದಾರೆ: ಪೆಟ್ರೋಲ್ ಪ್ರತಿ ಲೀಟರ್‌ಗೆ 458.40 ಪಾಕಿಸ್ತಾನಿ ರೂಪಾಯಿ ($1.64) ಏರಿಕೆಯಾಗಿದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ 520.35 ಪಾಕಿಸ್ತಾನಿ ರೂಪಾಯಿ ($1.86) ಏರಿಕೆ ಕಂಡಿದೆ. ಈ ಹೊಸ ದರಗಳು ಶುಕ್ರವಾರದಿಂದಲೇ ಜಾರಿಗೆ ಬಂದಿವೆ.

“ಅಂತರಾಷ್ಟ್ರೀಯ ಮಾರುಕಟ್ಟೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಜನ ಸಾಮಾನ್ಯರಿಗೆ ರಕ್ಷಣೆ ನೀಡಲು ಸರ್ಕಾರ ಪ್ರಯತ್ನಿಸಿದೆಯಾದರೂ, ಸದ್ಯಕ್ಕೆ ಯುದ್ಧ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ನಮ್ಮಲ್ಲಿ ಸಂಪನ್ಮೂಲಗಳು ಸೀಮಿತವಾಗಿರುವುದರಿಂದ ಈ ಬೆಲೆ ಏರಿಕೆಯ ಹೊರೆಯನ್ನು ವರ್ಗಾಯಿಸುವುದು ಅನಿವಾರ್ಯವಾಗಿದೆ,” ಎಂದು ಸಚಿವ ಪರ್ವೈಜ್ ಮಲಿಕ್ ತಿಳಿಸಿದ್ದಾರೆ.

ಹೋರ್ಮುಜ್ ಜಲಸಂಧಿ ಸಂಕಷ್ಟ

ಫೆಬ್ರವರಿ 28 ರಿಂದ ಇರಾನ್ ಮೇಲೆ ನಡೆಯುತ್ತಿರುವ ಯುದ್ಧವು ಇಡೀ ಮಧ್ಯಪ್ರಾಚ್ಯವನ್ನು ಸಂಘರ್ಷಕ್ಕೆ ತಳ್ಳಿದೆ. ಇರಾನ್‌ನ ಪ್ರತಿದಾಳಿಗಳಿಂದಾಗಿ ವಿಶ್ವದ ಶೇ. 20ರಷ್ಟು ಇಂಧನ ಪೂರೈಕೆಯಾಗುವ ಪ್ರಮುಖ ಕೊಂಡಿ ‘ಹೋರ್ಮುಜ್ ಜಲಸಂಧಿ’ (Strait of Hormuz) ಮೂಲಕ ಹಡಗುಗಳ ಸಂಚಾರ ಸ್ಥಗಿತಗೊಂಡಿದೆ. ಏಷ್ಯಾ ಖಂಡಕ್ಕೆ ಪೂರೈಕೆಯಾಗುವ ಹೆಚ್ಚಿನ ತೈಲ ಇದೇ ಮಾರ್ಗವಾಗಿ ಬರಬೇಕಿದೆ.

ಏಷ್ಯಾದ ಇತರ ದೇಶಗಳ ಮೇಲೂ ಪ್ರಭಾವ

ಪಾಕಿಸ್ತಾನ ಮಾತ್ರವಲ್ಲದೆ ಏಷ್ಯಾದ ಇತರ ರಾಷ್ಟ್ರಗಳೂ ಈ ಬಿಕ್ಕಟ್ಟಿನಿಂದ ಕಂಗಾಲಾಗಿವೆ. ಬಾಂಗ್ಲಾದೇಶವು ಅಡುಗೆ ಅನಿಲ (LPG) ಮತ್ತು ಸಿಎನ್‌ಜಿ (CNG) ದರವನ್ನು ಶೇ. 29ರಷ್ಟು ಹೆಚ್ಚಿಸಿದೆ. ಇತ್ತೀಚೆಗಷ್ಟೇ ತೈಲ ಬೆಲೆಯನ್ನು ಶೇ. 20ರಷ್ಟು ಹೆಚ್ಚಿಸಿದ್ದ ಪಾಕಿಸ್ತಾನಕ್ಕೆ ಇದು ಎರಡನೇ ದೊಡ್ಡ ಹೊಡೆತವಾಗಿದೆ. ಪಾಕಿಸ್ತಾನದ 240 ಮಿಲಿಯನ್ ಜನಸಂಖ್ಯೆಯಲ್ಲಿ ಶೇ. 25ರಷ್ಟು ಜನರು ಈಗಾಗಲೇ ಬಡತನದಲ್ಲಿದ್ದಾರೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಈ ಬೆಲೆ ಏರಿಕೆಯು ಜನರ ಜೀವನಮಟ್ಟವನ್ನು ಮತ್ತಷ್ಟು ಹದಗೆಡಿಸಲಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಕೂಡ ಎಚ್ಚರಿಕೆ ನೀಡಿದ್ದು, ಇಂಧನ ಬೆಲೆ ಏರಿಕೆ ಮಾತ್ರವಲ್ಲದೆ, ಆಹಾರ ಮತ್ತು ರಸಗೊಬ್ಬರಗಳ ಬೆಲೆ ಏರಿಕೆಯಿಂದ ಪಾಕಿಸ್ತಾನದಂತಹ ದೇಶಗಳು ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಿವೆ ಎಂದು ತಿಳಿಸಿದೆ.



Source link

Leave a Reply

Your email address will not be published. Required fields are marked *