Headlines

Allu Arjun: ‘ನನ್ನ ಬದುಕಿನ ಪ್ರೀತಿ ನೀನೇ’: ಮಗನ ಹುಟ್ಟುಹಬ್ಬಕ್ಕೆ ಭಾವುಕ ಪೋಸ್ಟ್ ಹಂಚಿಕೊಂಡ ಐಕಾನ್ ಸ್ಟಾರ್! | Allu Arjun Son Allu Ayaan Birthday Instagram Post Gvd

Allu Arjun: ‘ನನ್ನ ಬದುಕಿನ ಪ್ರೀತಿ ನೀನೇ’: ಮಗನ ಹುಟ್ಟುಹಬ್ಬಕ್ಕೆ ಭಾವುಕ ಪೋಸ್ಟ್ ಹಂಚಿಕೊಂಡ ಐಕಾನ್ ಸ್ಟಾರ್! | Allu Arjun Son Allu Ayaan Birthday Instagram Post Gvd



Allu Arjun: ‘ನನ್ನ ಬದುಕಿನ ಪ್ರೀತಿ ನೀನೇ’: ಮಗನ ಹುಟ್ಟುಹಬ್ಬಕ್ಕೆ ಭಾವುಕ ಪೋಸ್ಟ್ ಹಂಚಿಕೊಂಡ ಐಕಾನ್ ಸ್ಟಾರ್! | Allu Arjun Son Allu Ayaan Birthday Instagram Post Gvd

ಅಲ್ಲು ಅರ್ಜುನ್ ತಮ್ಮ ವೈಯಕ್ತಿಕ ಬದುಕಿನ ಖುಷಿಯ ಕ್ಷಣವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಮಗ ಅಲ್ಲು ಅಯಾನ್ ಹುಟ್ಟುಹಬ್ಬಕ್ಕೆ ಅವರು ಹೃದಯಸ್ಪರ್ಶಿ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.

ನಟ ಅಲ್ಲು ಅರ್ಜುನ್ ತಮ್ಮ ಮಗ ಅಲ್ಲು ಅಯಾನ್ ಹುಟ್ಟುಹಬ್ಬಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಸದ್ಯ ಅವರು ಅಟ್ಲಿ ಜೊತೆ ‘AA23’ ಚಿತ್ರೀಕರಣದಲ್ಲಿದ್ದು, ಇತ್ತೀಚೆಗೆ ‘ಪುಷ್ಪ 2: ದಿ ರೂಲ್’ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದಿದ್ದಾರೆ.

ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಶುಕ್ರವಾರ ತಮ್ಮ ವೈಯಕ್ತಿಕ ಬದುಕಿನ ಖುಷಿಯ ಕ್ಷಣವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಮಗ ಅಲ್ಲು ಅಯಾನ್ ಹುಟ್ಟುಹಬ್ಬಕ್ಕೆ ಅವರು ಹೃದಯಸ್ಪರ್ಶಿ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಮಗನ ಜೊತೆಗಿನ ಫೋಟೋ ಒಂದನ್ನು ಶೇರ್ ಮಾಡಿಕೊಂಡಿರುವ ಅವರು, ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಫೋಟೋದಲ್ಲಿ ಅಲ್ಲು ಅಯಾನ್ ನಾಲಿಗೆ ಹೊರಚಾಚಿ, ಪೀಸ್ ಸಿಂಬಲ್ ತೋರಿಸಿ ತುಂಟಾಟವಾಡಿದ್ದಾನೆ. ನಗುಮೊಗದ ಅಲ್ಲು ಅರ್ಜುನ್ ಮಗನನ್ನು ಅಪ್ಪಿಕೊಂಡಿದ್ದಾರೆ. ಈ ಫೋಟೋದ ಜೊತೆ ‘ಪುಷ್ಪ’ ನಟ, “ನನ್ನ ಬದುಕಿನ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯಗಳು. ಹ್ಯಾಪಿ ಬರ್ತ್‌ಡೇ, ನನ್ನ ಚಿನ್ನಿ ಬಾಬು” ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ

ಸಿನಿಮಾ ವಿಚಾರಕ್ಕೆ ಬಂದರೆ, ಅಲ್ಲು ಅರ್ಜುನ್ ಸದ್ಯ ತಮ್ಮ ಮುಂದಿನ ಪ್ರಾಜೆಕ್ಟ್ ‘AA23’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಭಾರತೀಯ ಚಿತ್ರರಂಗದ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಅಟ್ಲಿ ಜೊತೆ ಅವರು ಈ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ.

‘ಪುಷ್ಪ’ ಫ್ರಾಂಚೈಸ್ ಯಶಸ್ಸು

ಈ ಹಿಂದೆ ಫೆಬ್ರವರಿಯಲ್ಲಿ ನಡೆದ 70ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್‌ನಲ್ಲಿ, ಸುಕುಮಾರ್ ನಿರ್ದೇಶನದ ‘ಪುಷ್ಪ 2: ದಿ ರೂಲ್’ ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಈ ಸಂಭ್ರಮದ ಕ್ಷಣವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಸುಕುಮಾರ್ ಬಿ. ನಿರ್ದೇಶನದ ‘ಪುಷ್ಪ 2: ದಿ ರೂಲ್’ 2024ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆಗಿತ್ತು.

2021ರಲ್ಲಿ ತೆರೆಕಂಡ ‘ಪುಷ್ಪ: ದಿ ರೈಸ್’ ಚಿತ್ರದ ಮುಂದುವರಿದ ಭಾಗ ಇದಾಗಿದ್ದು, ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಜಗಪತಿ ಬಾಬು, ಸುನೀಲ್ ಮತ್ತು ರಾವ್ ರಮೇಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಪುಷ್ಪ’ ಚಿತ್ರದ ಮೂರನೇ ಭಾಗದಲ್ಲೂ ಇದೇ ತಂಡ ಮುಂದುವರೆಯುವ ನಿರೀಕ್ಷೆಯಿದೆ.



Source link

Leave a Reply

Your email address will not be published. Required fields are marked *