Headlines

ಪಂಚಗಂಗಾ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುವ ಕರಾವಳಿಗರಿಗೆ ಗುಡ್‌ನ್ಯೂಸ್‌ ನೀಡಿದ ರೈಲ್ವೇಸ್‌!

ಪಂಚಗಂಗಾ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುವ ಕರಾವಳಿಗರಿಗೆ ಗುಡ್‌ನ್ಯೂಸ್‌ ನೀಡಿದ ರೈಲ್ವೇಸ್‌!

ಪಂಚಗಂಗಾ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುವ ಕರಾವಳಿಗರಿಗೆ ಗುಡ್‌ನ್ಯೂಸ್‌ ನೀಡಿದ ರೈಲ್ವೇಸ್‌!

ಬೆಂಗಳೂರು (ಫೆ.25): ಕೆಎಸ್‌ಆರ್ ಬೆಂಗಳೂರು-ಕಾರವಾರ-ಕೆಎಸ್‌ಆರ್ ಬೆಂಗಳೂರು ನಡುವೆ ಪ್ರತಿದಿನ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ (ರೈಲು ಸಂಖ್ಯೆ 16595/596) ಅಳವಡಿಸಲಾಗಿರುವ ಐದು ಹೆಚ್ಚುವರಿ ಬೋಗಿಗಳ ಸೇವೆಯನ್ನು ಮೇ ತಿಂಗಳ ಅಂತ್ಯದವರೆಗೆ ಮುಂದುವರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಮೊದಲು ಈ ರೈಲು 14 ಎಲ್‌ಎಚ್‌ಬಿ (LHB) ಬೋಗಿಗಳೊಂದಿಗೆ ಸಂಚರಿಸುತ್ತಿತ್ತು. ಬೆಳಗಿನ ರೈಲು ರದ್ದಾದ ಬಳಿಕ ಪಂಚಗಂಗಾ ಎಕ್ಸ್‌ಪ್ರೆಸ್‌ಗೆ ಐದು ಬೋಗಿಗಳು ಸೇರ್ಪಡಿಸಲಾಗಿತ್ತು. ಆದರೆ ಈಗ ಪರಿಷ್ಕೃತ ಆದೇಶದ ಪ್ರಕಾರ, ರೈಲು ಒಟ್ಟು 19 ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚರಿಸಲಿದೆ.

ಏಪ್ರಿಲ್ 16 ರಿಂದ ಬೆಂಗಳೂರಿನಿಂದ ಹೊರಡುವ ರೈಲಿನಲ್ಲಿ ಮತ್ತು ಏಪ್ರಿಲ್ 17 ರಿಂದ ಕಾರವಾರದಿಂದ ಹೊರಡುವ ರೈಲಿನಲ್ಲಿ, ಪ್ರಸ್ತುತ ಇರುವ ‘ಕಾಂಪೋಸಿಟ್ ಕೋಚ್’ (ಪ್ರಥಮ ದರ್ಜೆ ಎಸಿ ಮತ್ತು 2-ಟೈರ್ ಎಸಿ ಒಳಗೊಂಡ ಬೋಗಿ) ಬದಲಿಗೆ ಶಾಶ್ವತವಾಗಿ ಪ್ರಥಮ ದರ್ಜೆ ಎಸಿ (1st AC) ಬೋಗಿಯನ್ನು ಅಳವಡಿಸಲಾಗುವುದು. ಈ ತಾತ್ಕಾಲಿಕ ಬೋಗಿಗಳ ಹೆಚ್ಚಳವು ಬೆಂಗಳೂರಿನಿಂದ ಹೊರಡುವ ರೈಲಿಗೆ ಮೇ 31 ರವರೆಗೆ ಮತ್ತು ಕಾರವಾರದಿಂದ ಹೊರಡುವ ರೈಲಿಗೆ ಜೂನ್ 1 ರವರೆಗೆ ಅನ್ವಯವಾಗಲಿದೆ.

ಪರಿಷ್ಕೃತ ತಾತ್ಕಾಲಿಕ ಬೋಗಿಗಳ ವಿವರ ಹೀಗಿದೆ

ಪ್ರಥಮ ದರ್ಜೆ ಎಸಿ (1st AC) – 1 ಬೋಗಿ

2-ಟೈರ್ ಎಸಿ (2-tier AC) – 1 ಬೋಗಿ

3-ಟೈರ್ ಎಸಿ (3-tier AC) – 1 ಬೋಗಿ

3-ಟೈರ್ ಎಕಾನಮಿ (3-tier Economy) – 2 ಬೋಗಿ

ಸೆಕೆಂಡ್ ಕ್ಲಾಸ್ ಸ್ಲೀಪರ್ (Sleeper) – 8 ಬೋಗಿ

ಜನರಲ್ ಸೆಕೆಂಡ್ ಕ್ಲಾಸ್ (General) – 4 ಬೋಗಿ

ಲಗೇಜ್-ಕಮ್-ಬ್ರೇಕ್ ವ್ಯಾನ್ – 1 ಬೋಗಿ

ಜನರೇಟರ್ ಕಾರ್ – 1 ಬೋಗಿ

Source link

Leave a Reply

Your email address will not be published. Required fields are marked *