
ಮನೆಯಲ್ಲಿ ಕಡಿಮೆ ಜಾಗವಿದ್ದರೂ ವರ್ಟಿಕಲ್ ಗಾರ್ಡನಿಂಗ್ ಮೂಲಕ ಹಸಿರು ತುಂಬಬಹುದು. ಮನಿ ಪ್ಲಾಂಟ್, ಫರ್ನ್, ಮತ್ತು ಸ್ಪೈಡರ್ ಪ್ಲಾಂಟ್‌ನಂತಹ ಗಿಡಗಳು ಮನೆಗೆ ಅಂದ ನೀಡುವುದಲ್ಲದೆ, ಗಾಳಿಯನ್ನು ಶುದ್ಧೀಕರಿಸಿ ಉತ್ತಮ ವಾತಾವರಣ ಸೃಷ್ಟಿಸುತ್ತವೆ.
ಮನೆಯಲ್ಲಿ ಜಾಗ ಕಡಿಮೆ ಇದ್ದರೂ ಹಸಿರು ತುಂಬಬೇಕು ಅಂದುಕೊಳ್ಳುವವರ ನಡುವೆ ವರ್ಟಿಕಲ್ ಗಾರ್ಡನಿಂಗ್ ಈಗ ಹೊಸ ಟ್ರೆಂಡ್ ಆಗಿದೆ. ಬಾಲ್ಕನಿ, ಗೋಡೆ, ಟೆರೇಸ್ ಅಥವಾ ಸುಮ್ಮನೆ ಖಾಲಿ ಬಿದ್ದಿರುವ ಜಾಗದಲ್ಲಿ ವರ್ಟಿಕಲ್ ಗಾರ್ಡನ್ ಮಾಡಿದರೆ ಮನೆಗೆ ಒಂದು ವಿಶೇಷ ಕಳೆ ಬರುತ್ತದೆ. ಇದಕ್ಕಾಗಿ ಸರಿಯಾದ ಗಿಡಗಳನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಇವು ಮನೆಗೆ ಹಸಿರು ತುಂಬುವುದು ಮಾತ್ರವಲ್ಲ, ಗಾಳಿಯನ್ನು ಶುದ್ಧೀಕರಿಸಿ ಒಂದು ಪಾಸಿಟಿವ್ ವಾತಾವರಣವನ್ನು ಸೃಷ್ಟಿಸುತ್ತವೆ. ವರ್ಟಿಕಲ್ ಗಾರ್ಡನ್‌ಗೆ ಸೂಕ್ತವಾದ ಕೆಲವು ಗಿಡಗಳು ಇಲ್ಲಿವೆ.
ಮನಿ ಪ್ಲಾಂಟ್
ಮನಿ ಪ್ಲಾಂಟ್ ಅನ್ನು ತುಂಬಾ ಸುಲಭವಾಗಿ ಬೆಳೆಸಬಹುದು. ಕಡಿಮೆ ಬೆಳಕಿನಲ್ಲೂ ಇದು ಚೆನ್ನಾಗಿ ಬೆಳೆಯುತ್ತದೆ. ಈ ಗಿಡವು ಗಾಳಿಯನ್ನು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ಸ್ವಲ್ಪ ಕಾಳಜಿ ವಹಿಸಿದರೆ ಸಾಕು, ಇದು ಸುಲಭವಾಗಿ ಬೆಳೆಯುತ್ತದೆ.
ಫಿಲೋಡೆಂಡ್ರಾನ್ (Philodendron)
ಫಿಲೋಡೆಂಡ್ರಾನ್ ಗಿಡದ ಹೃದಯಾಕಾರದ ಎಲೆಗಳು ನಿಮ್ಮ ವರ್ಟಿಕಲ್ ಗಾರ್ಡನ್‌ಗೆ ಒಂದು ಟ್ರಾಪಿಕಲ್ ಲುಕ್ ನೀಡುತ್ತವೆ. ಈ ಗಿಡವನ್ನು ಮನೆಯ ಒಳಗೆ ಮತ್ತು ಹೊರಗೆ ಎರಡೂ ಕಡೆ ಬೆಳೆಸಬಹುದು. ಇದಕ್ಕೆ ಹೆಚ್ಚು ನೀರು ಬೇಕಾಗುವುದಿಲ್ಲ.
ಇಂಗ್ಲಿಷ್ ಐವಿ (English Ivy)
ಇಂಗ್ಲಿಷ್ ಐವಿ ನೋಡಲು ಬಹಳ ಸುಂದರವಾದ ಗಿಡ. ಬಿಸಿಲು ಮತ್ತು ಸ್ವಲ್ಪ ನೆರಳಿರುವ ಜಾಗಗಳಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಈ ಗಿಡವು ಮನೆಗೆ ಒಂದು ಅಂದವಾದ, ಏಸ್ತೆಟಿಕ್ ಲುಕ್ ಕೊಡುತ್ತದೆ.
ಫರ್ನ್ (Fern)
ಫರ್ನ್ ಗಿಡದ ಮೃದುವಾದ ಮತ್ತು ದಟ್ಟವಾದ ಎಲೆಗಳು ವರ್ಟಿಕಲ್ ಗಾರ್ಡನ್‌ಗೆ ಸಾಫ್ಟ್ ಮತ್ತು ಎಲಿಗೆಂಟ್ ಲುಕ್ ನೀಡುತ್ತವೆ. ಇದು ತೇವಾಂಶವನ್ನು ಇಷ್ಟಪಡುವ ಗಿಡವಾದ್ದರಿಂದ, ಇದನ್ನು ಬಾತ್‌ರೂಮ್ ಅಥವಾ ನೆರಳಿರುವ ಬಾಲ್ಕನಿಯಲ್ಲಿ ಬೆಳೆಸಬಹುದು. ಫರ್ನ್ ಗಿಡವು ಮನೆಯ ವಾತಾವರಣಕ್ಕೆ ತಂಪು ಮತ್ತು ಉಲ್ಲಾಸವನ್ನು ನೀಡುತ್ತದೆ.
ಸ್ಪೈಡರ್ ಪ್ಲಾಂಟ್ (Spider Plant)
ಉದ್ದನೆಯ, ಗೆರೆಗಳಿರುವ ಎಲೆಗಳನ್ನು ಹೊಂದಿರುವ ಸ್ಪೈಡರ್ ಪ್ಲಾಂಟ್ ವರ್ಟಿಕಲ್ ಗಾರ್ಡನ್‌ನ ಪ್ರಮುಖ ಆಕರ್ಷಣೆಯಾಗಬಲ್ಲದು. ಗಾಳಿಯನ್ನು ಶುದ್ಧೀಕರಿಸುವ ಗುಣಕ್ಕೆ ಹೆಸರುವಾಸಿಯಾದ ಈ ಗಿಡ, ಮಕ್ಕಳು ಮತ್ತು ಸಾಕುಪ್ರಾಣಿಗಳಿಗೂ ಸುರಕ್ಷಿತವಾಗಿದೆ.
ಪೋಥೋಸ್ ನಿಯಾನ್ (Pothos Neon)
ನಿಯಾನ್ ಹಸಿರು ಬಣ್ಣದ ಈ ಗಿಡವು ನಿಮ್ಮ ವರ್ಟಿಕಲ್ ಗಾರ್ಡನ್‌ಗೆ ಉತ್ತಮ ಕಲರ್ ಕಾಂಟ್ರಾಸ್ಟ್ ನೀಡುತ್ತದೆ. ಇದರ ಹೊಳೆಯುವ ಎಲೆಗಳು ಕಡಿಮೆ ಬೆಳಕಿನಲ್ಲೂ ಸುಂದರವಾಗಿ ಕಾಣಿಸುತ್ತವೆ.