Headlines

ಬಿಗ್ ಬಾಸ್ ಮನೆಯ ಇಬ್ಬರು ಹುಡ್ಗೀರೂ ನನ್ನ ಮದುವೆಯಾಗಬೇಕು; ಸ್ಪರ್ಧಿಗಳಿದ್ದ ರೆಸಾರ್ಟ್‌ಗೆ ನುಗ್ಗಿದ ಆಗಂತುಕ! | Bigg Boss Couple Adhila And Noora File Police Complaint Against Stalker Sat

ಬಿಗ್ ಬಾಸ್ ಮನೆಯ ಇಬ್ಬರು ಹುಡ್ಗೀರೂ ನನ್ನ ಮದುವೆಯಾಗಬೇಕು; ಸ್ಪರ್ಧಿಗಳಿದ್ದ ರೆಸಾರ್ಟ್‌ಗೆ ನುಗ್ಗಿದ ಆಗಂತುಕ! | Bigg Boss Couple Adhila And Noora File Police Complaint Against Stalker Sat



ಬಿಗ್ ಬಾಸ್ ಮನೆಯ ಇಬ್ಬರು ಹುಡ್ಗೀರೂ ನನ್ನ ಮದುವೆಯಾಗಬೇಕು; ಸ್ಪರ್ಧಿಗಳಿದ್ದ ರೆಸಾರ್ಟ್‌ಗೆ ನುಗ್ಗಿದ ಆಗಂತುಕ! | Bigg Boss Couple Adhila And Noora File Police Complaint Against Stalker Sat

ಬಿಗ್ ಬಾಸ್ ಮಹಿಳಾ ಸ್ಪರ್ಧಿಗಳನ್ನು ಮದುವೆಯಾಗುವುದಾಗಿ ವ್ಯಕ್ತಿಯೊಬ್ಬ ಪೀಡಿಸುತ್ತಿದ್ದ. ಸಾಮಾಜಿಕ ಜಾಲತಾಣದಿಂದ ಆರಂಭವಾದ ಈ ಕಿರುಕುಳವು, ಅವರು ತಂಗಿದ್ದ ರೆಸಾರ್ಟ್‌ಗೆ ನುಗ್ಗಿದ್ದಾನೆ. ತಮ್ಮ ಸುರಕ್ಷತೆಗೆ ಹೆದರಿ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಹೋಗುವ ಸ್ಪರ್ಧಿಗಳು ಅವರ ಸೌಂದರ್ಯ, ಮಾತುಗಳು, ಟಾಸ್ಕ್‌ನ ಪ್ರದರ್ಶನಗಳ ಮೂಲಕ ನಾಡಿನಾದ್ಯಂತ ಪ್ರಸಿದ್ಧಿ ಆಗುತ್ತಾರೆ. ಹೀಗೆ ಬಿಗ್ ಬಾಸ್ ಮನೆಯೊಳಗಿರುವ ಸ್ಪರ್ಧಿಗಳಿಗೆ ಹುಚ್ಚು ಅಭಿಮಾನಿಗಳೂ ಹುಟ್ಟಿಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬ ಯುವಕ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿಬಂದ ಇಬ್ಬರು ನಟಿಯರನ್ನ ಮದುವೆ ಮಾಡಿಕೊಳ್ಳಬೇಕು ಎಂದು ದುಂಬಾಲು ಬಿದ್ದಿದ್ದಾನೆ. ಮುಂದುವರೆದು ಬಿಗ್ ಬಾಸ್ ಸ್ಪರ್ಧಿಗಳು ತಂಗಿದ್ದ ರೆಸಾರ್ಟ್‌ಗೆ ನುಗ್ಗಿದ್ದು, ಭಯಗೊಂಡ ನಟಿಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಬಿಗ್ ಬಾಸ್ ಸೀಸನ್ 7ರ ಮೂಲಕ ಕೇರಳದಲ್ಲಿ ಸಂಚಲನ ಮೂಡಿಸಿದ್ದ ಹಾಗೂ ತಮ್ಮ ಧೈರ್ಯದ ನಡೆಗಳಿಂದಲೇ ಮನೆಮಾತಾಗಿದ್ದ ಸಲಿಂಗಿ ಜೋಡಿ ಆದಿಲಾ ಮತ್ತು ನೂರಾ (Adila and Noora) ಅವರಿಗೆ ಇದೀಗ ಹೊಸ ಸಂಕಷ್ಟ ಎದುರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಈ ಜೋಡಿಗೆ ವ್ಯಕ್ತಿಯೊಬ್ಬ ಕಳೆದ ಕೆಲವು ಸಮಯದಿಂದ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು, ‘ನಾನು ನಿಮ್ಮಿಬ್ಬರನ್ನೂ ಒಟ್ಟಿಗೆ ಮದುವೆಯಾಗಬೇಕು’ ಎಂದು ಪೀಡಿಸುತ್ತಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಹನೆ ಮೀರಿದಾಗ ಈ ಜೋಡಿ ಇದೀಗ ಪೊಲೀಸರ ಮೊರೆ ಹೋಗಿದೆ.

ಏನಿದು ವಿಚಿತ್ರ ಪ್ರಕರಣ?

ಆದಿಲಾ ಮತ್ತು ನೂರಾ ಅವರು ಸಲಿಂಗ ಕಾಮಿಗಳಾಗಿದ್ದು (Lesbian Couple), ಸಮಾಜದ ವಿರೋಧದ ನಡುವೆಯೂ ಒಂದಾಗಿ ಬದುಕುತ್ತಿದ್ದಾರೆ. ಬಿಗ್ ಬಾಸ್ ಶೋಗೆ ಹೋಗುವ ಮುನ್ನ ಅನೇಕ ನೆಗೆಟಿವ್ ಕಮೆಂಟ್‌ಗಳನ್ನು ಎದುರಿಸಿದ್ದ ಇವರು, ಶೋ ನಂತರ ಜನರ ಪ್ರೀತಿ ಗಳಿಸಿದ್ದರು. ಆದರೆ, 2024ರ ನವೆಂಬರ್ ತಿಂಗಳಿನಿಂದ ವ್ಯಕ್ತಿಯೊಬ್ಬ ಇವರನ್ನು ಹಿಂಬಾಲಿಸಲು ಶುರುಮಾಡಿದ್ದ. ಆರಂಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮೆಸೇಜ್ ಕಳುಹಿಸುತ್ತಿದ್ದ ಆತ, ನಂತರ ಇವರು ಹೋಗುವ ಕಡೆಗಳಲ್ಲೆಲ್ಲ ಪ್ರತ್ಯಕ್ಷನಾಗಲು ಶುರುಮಾಡಿದ್ದ. ಆತನ ವಿಚಿತ್ರ ಮತ್ತು ಅಸಹ್ಯಕರ ಬೇಡಿಕೆ ಏನೆಂದರೆ, ಆತ ಈ ಇಬ್ಬರನ್ನೂ ಒಟ್ಟಿಗೆ ಮದುವೆಯಾಗಬೇಕಂತೆ!

ರೆಸಾರ್ಟ್‌ಗೆ ನುಗ್ಗಿದ ಆಗಂತುಕ

ಈ ಬಗ್ಗೆ ಮಾತನಾಡಿರುವ ಆದಿಲಾ ಮತ್ತು ನೂರಾ, ‘ಆರಂಭದಲ್ಲಿ ನಾವು ಅವನ ಮೆಸೇಜ್‌ಗಳನ್ನು ನಿರ್ಲಕ್ಷಿಸಿದೆವು. ಏಕೆಂದರೆ ಸೋಶಿಯಲ್ ಮೀಡಿಯಾದಲ್ಲಿ ಇಂತಹ ಹುಚ್ಚು ಸಂದೇಶಗಳನ್ನು ಕಳುಹಿಸುವವರು ಬಹಳಷ್ಟು ಜನರಿರುತ್ತಾರೆ. ಆದರೆ, ಈ ವ್ಯಕ್ತಿ ಅಲ್ಲಿಗೇ ನಿಲ್ಲಲಿಲ್ಲ. ನಾವು ಬಿಗ್ ಬಾಸ್‌ಗೆ ಹೋಗುವ ಮುನ್ನ ಕೊಲ್ಯಾಬರೇಷನ್ ಕೆಲಸಕ್ಕೆಂದು ಹೋದಾಗ ಅಲ್ಲೂ ಬಂದು ನಮ್ಮ ಬಗ್ಗೆ ವಿಚಾರಿಸಿದ್ದ. ಶೋ ಮುಗಿದ ನಂತರ ಫ್ಯಾನ್ ಮೀಟಪ್‌ಗೂ ಬಂದಿದ್ದ. ಈಗ ನಾವು ಪ್ರಮೋಷನ್ ಕೆಲಸಕ್ಕಾಗಿ ಒಂದು ರೆಸಾರ್ಟ್‌ನಲ್ಲಿದ್ದೇವೆ. ಆತ ನಮ್ಮನ್ನು ಹಿಂಬಾಲಿಸಿಕೊಂಡು ಇಲ್ಲಿಗೂ ಬಂದಿದ್ದಾನೆ. ಇದು ನಮ್ಮ ಸುರಕ್ಷತೆಯ ಪ್ರಶ್ನೆಯಾದ್ದರಿಂದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆವು’ ಎಂದು ವಿವರಿಸಿದ್ದಾರೆ.

ಕಾನೂನು ಹೋರಾಟಕ್ಕೆ ನಿರ್ಧಾರ

ಆಗಂತುಕನ ಕಾಟ ಮಿತಿಮೀರಿದ ಹಿನ್ನೆಲೆಯಲ್ಲಿ ಈ ಜೋಡಿ ಆತನ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದೆ. ‘ನಮ್ಮ ದೇಶದ ಕಾನೂನು ಈಗ ತುಂಬಾ ಪ್ರಬಲವಾಗಿದೆ. ಸೈಬರ್ ಬುಲ್ಲಿಯಿಂಗ್ (Cyber Bullying) ಅಥವಾ ಹೆಣ್ಣುಮಕ್ಕಳಿಗೆ ಈ ರೀತಿ ಕಿರುಕುಳ ನೀಡುವವರು ಎಚ್ಚರಿಕೆಯಿಂದ ಇರಿ. ನಾವು ಸುಮ್ಮನಿರುವುದಿಲ್ಲ, ಕಾನೂನು ಪ್ರಕಾರವೇ ಹೋರಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ತಮ್ಮ ಸಂಬಂಧದ ವಿಚಾರವಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದ ಆದಿಲಾ ಮತ್ತು ನೂರಾ, ಈಗ ಒಬ್ಬ ಸೈಕೋ ಕಾಮುಕನ ಕಾಟಕ್ಕೆ ರೋಸಿಹೋಗಿದ್ದಾರೆ. ಪೊಲೀಸರು ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಸೆಲೆಬ್ರಿಟಿಗಳ ಖಾಸಗಿ ಬದುಕಿಗೆ ಕನ್ನ ಹಾಕುವ ಮತ್ತು ಅವರನ್ನು ಹಿಂಬಾಲಿಸುವ ಇಂತಹ ಘಟನೆಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ.



Source link

Leave a Reply

Your email address will not be published. Required fields are marked *