ಥಿಯೇಟರ್ ಬಳಿಕ ಧುರಂಧರ್ ಮೂವಿ ಓಟಿಟಿನಲ್ಲೂ ಟ್ರೆಂಡ್ ಸೃಷ್ಟಿ ಮಾಡಿದೆ. ಪಾಕಿಸ್ತಾನದಲ್ಲಿ ಬ್ಯಾನ್ ಆಗಿದ್ದ ಧುರಂಧರ್ ಈಗ ಓಟಿಟಿನಲ್ಲಿ ಬಂದ ಮೇಲೂ ಪಾಕ್ನಲ್ಲೂ ಮೋಡಿ ಮಾಡ್ತಾ ಇದೆ. ಬರೀ ಓಟಿಟಿ ಅಲ್ಲ ಪಾಕ್ ಬೀದಿ ಬೀದಿಯಲ್ಲಿ ಧುರಂಧರ್ ಹವಾ ಕ್ರಿಯೇಟ್ ಆಗಿದೆ.

ಪಾಕಿಸ್ತಾನದಲ್ಲಿ ಧುರಂಧರ್ ಮೇನಿಯಾ ಜೋರು..!

ಯೆಸ್, ರಣವೀರ್ ಸಿಂಗ್ ನಟನೆಯ, ಆದಿತ್ಯ ಧರ್ ನಿರ್ದೇಶನದ ಧುರಂಧರ್ ಮೂವಿ ಥಿಯೇಟರ್ ಅಂಗಳದಲ್ಲಿ ಕಮಾಲ್ ಮಾಡಿ 1,350 ಕೋಟಿ ಗಳಿಕೆ ಮಾಡಿತ್ತು. ಕಳೆದ ಜನವರಿ 30ಕ್ಕೆ ಓಟಿಟಿನಲ್ಲಿ ರಿಲೀಸ್ ಆದ ಧುರಂಧರ್ ಅಲ್ಲೂ ಟ್ರೆಂಡ್ ಸೃಷ್ಟಿ ಮಾಡಿದೆ. ಅಸಲಿಗೆ ಈ ಸಿನಿಮಾ ರಿಲೀಸ್ನ ಪಾಕಿಸ್ತಾನದಲ್ಲಿ ಬ್ಯಾನ್ ಮಾಡಲಾಗಿತ್ತು. ಆದ್ರೆ ಈಗ ಓಟಿಟಿ ಮೂಲಕ ಪಾಕ್ ಜನತೆಯನ್ನ ತಲುಪಿದೆ. ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಕಳೆದೊಂದು ವಾರದಿಂದ ಧುರಂಧರ್ ಮೂವಿ ನಂ.1 ಸ್ಥಾನದಲ್ಲಿದೆ.

50 ರೂಪಾಯಿಗೆ ಪಾಕಿಸ್ತಾನದಲ್ಲಿ ಧುರಂಧರ್ ಡಿವಿಡಿ ಸೇಲ್

ಹೌದು ಇತ್ತೀಚಿಗೆ ವಿದೇಶಿ ಯುಟ್ಯೂಬರ್ ಒಬ್ರು ವ್ಲಾಗ್ ಮಾಡ್ತಾ ಡಿವಿಡಿ ಅಂಗಡಿಯೊಂದನ್ನ ತೋರಿಸಿದ್ದಾರೆ. ಅದ್ರಲ್ಲಿ ಡಿವಿಡಿ ಪಾರ್ಲರ್ ಓನರ್ ಧುರಂಧರ್ ಪೈರಸಿ ಕಾಪಿ ಮಾರ್ತಾ ಇದ್ದಾನೆ. ಎಷ್ಟು ಹಣ ಅಂತ ಕೇಳಿದ್ರೆ, 50 ರೂಪಾಯಿ ಅಂತಾನೆ. ಪಾಕ್‌ನ 50ರೂ ಅಂದ್ರೆ ನಮ್ಮ ಭಾರತದ 16 ರೂಪಾಯಿಗೆ ಸಮ. ಇದನ್ನ ಹಂಚಿಕೊಂಡಿರೋ ಯುಟ್ಯೂಬರ್ ಭಾರತದ ಧುರಂಧರ್ ಪಾಕ್ನಲ್ಲಿ ಸಿಕ್ಕಿದ್ದಾನೆ ನೋಡಿ ಅಂತ ಈ ವಿಡಿಯೋ ಹಂಚಿಕೊಂಡಿದ್ದಾರೆ. ಒಟ್ನಲ್ಲಿ ಪಾಕ್ ಮಂದಿ ಧುರಂಧರ್ ಪೈರಸಿ ಮಾರಿ ದುಡ್ಡು ಮಾಡ್ತಾ ಇದ್ದಾರೆ.

ಪಾಕ್ ನೆಲಕ್ಕೆ ಹೋಗುವ ಗೂಢಚಾರಿ ಧುರಂಧರ್..!

ಧುರಂಧರ್ ಸಿನಿಮಾ ನೋಡಿದವರಿಗೆಲ್ಲಾ ಅದರ ಕಥೆ ಗೊತ್ತೇ ಇದೆ. ಧುರಂಧರ್ ಅನ್ನೋದು ಒಂದು ಗೂಡಚಾರಿ ಸೀಕ್ರೇಟ್ ಆಪರೇಷನ್ ಹೆಸರು. ಭಾರತದಿಂದ ಪಾಕಿಸ್ತಾನಕ್ಕೆ ಹೋಗುವ ನಾಯಕ ಅಲ್ಲಿನ ಮಾಫಿಯಾ, ಸೇನೆ, ಸರ್ಕಾರದ ಮಸಲತ್ತುಗಳನ್ನ ಭಾರತಕ್ಕೆ ರವಾನಿಸ್ತಾ ಇರ್ತಾನೆ. ಅಷ್ಟೇ ಅಲ್ಲ ರೆಹಮಾನ್ ಡಕಾಯಿತ್ ಅನ್ನೋ ಗ್ಯಾಂಗ್‌ಸ್ಟರ್‌ನ ಉಪಾಯದಿಂದ ಸಂಹರಿಸ್ತಾನೆ. ಹಲವು ಸೀಕ್ರೆಟ್ ಆಪರೇಷನ್ಗಳ ನೈಜ ಕಥೆಯನ್ನ ಆಧರಿಸಿ ಈ ಸಿನಿಮಾ ರೆಡಿಮಾಡಲಾಗಿದೆ.

ಭಾರತದ ಗೂಢಚಾರಿ ಮುಸಲ್ಮಾನನಾಗಿ ಬದಲಾಗಿ ಹೇಗೆ ಪಾಕಿಗಳನ್ನ ಮಂಗ ಮಾಡ್ತಾನೆ ಅನ್ನೋ ಕಥೆ ಇದ್ರಲ್ಲಿದೆ. ಇದನ್ನ ಪಾಕಿಸ್ತಾನಿ ಮಂದಿ ಭಯಂಕರ ಕುತೂಹಲದಿಂದ ನೋಡ್ತಾ ಇದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಪಾಕಿಸ್ತಾನದಲ್ಲಿ ನಂ.1 ಸ್ಥಾನದಲ್ಲಿರೋ ಧುರಂಧರ್, ಬೀದಿ ಬೀದಿಯಲ್ಲೂ ಪೈರಸಿ ಆಗಿ ಬಿಕರಿ ಆಗ್ತಾ ಇದೆ. ಇನ್ನೇನು ಮುಂದಿನ ತಿಂಗಳ 19ನೇ ತಾರೀಖು ಧುರಂಧರ್-2 ರಿಲೀಸ್ ಆಗಲಿದೆ. ಅದನ್ನ ನೋಡ್ಲಿಕ್ಕೆ ಭಾರತೀಯರಷ್ಟೇ ಅಲ್ಲ ಪಾಕ್ ಮಂದಿ ಕೂಡ ಕಾತುರದಿಂದ ಕಾಯ್ತಾ ಇದ್ದಾರೆ..!

ಅಮೀತ್ ದೇಸಾಯಿ, ಏಷ್ಯಾನೆಟ್ ಸುವರ್ಣ ನ್ಯೂಸ್.

Source link
ಪಾಕಿಸ್ತಾನದಲ್ಲಿ ಧುರಂಧರ್ ಮೇನಿಯಾ ಜೋರು! ಧುರಂಧರ್ DVD ಮಾರಿ ಬದುಕ್ತಾ ಇದ್ದಾರೆ ಪಾಕ್ ಮಂದಿ..!