Headlines

Woman video ಊಟ ಮಾಡಿ ಆಟ ಆಡಿ ಬೇರೆ ಮದುವೆಯಾದ ಪೊಲೀಸಪ್ಪ, ದುರಂತ ಅಂತ್ಯಕಂಡ ಮಹಿಳೆ ಕೊನೆ ವಿಡಿಯೋ | Agra Woman Records Final Video Before End Her Life Up Police Constable Arrested

Woman video ಊಟ ಮಾಡಿ ಆಟ ಆಡಿ ಬೇರೆ ಮದುವೆಯಾದ ಪೊಲೀಸಪ್ಪ, ದುರಂತ ಅಂತ್ಯಕಂಡ ಮಹಿಳೆ ಕೊನೆ ವಿಡಿಯೋ | Agra Woman Records Final Video Before End Her Life Up Police Constable Arrested



Woman video ಊಟ ಮಾಡಿ ಆಟ ಆಡಿ ಬೇರೆ ಮದುವೆಯಾದ ಪೊಲೀಸಪ್ಪ, ದುರಂತ ಅಂತ್ಯಕಂಡ ಮಹಿಳೆ ಕೊನೆ ವಿಡಿಯೋ | Agra Woman Records Final Video Before End Her Life Up Police Constable Arrested

ಊಟ ಮಾಡಿ ಆಟ ಆಡಿ ಬೇರೆ ಮದುವೆಯಾದ ಪೊಲೀಸಪ್ಪ, ದುರಂತ ಅಂತ್ಯಕಂಡ ಮಹಿಳೆ ಕೊನೆ ವಿಡಿಯೋ, ಕಳೆದ ನಾಲ್ಕು ವರ್ಷದಿಂದ ಪತ್ನಿ ರೀತಿ ನನ್ನ ಇಟ್ಟುಕೊಂಡಿದ್ದ. ಆತ ಪೊಲೀಸ್ ಆಗಿದ್ದ ಕಾರಣ ನನಗೆ ಯಾರಿಂದಲೂ ನೆರವು ಸಿಗಲಿಲ್ಲ ಎಂದು ದುರಂತ ಅಂತ್ಯಕಂಡಿದ್ದಾಳೆ.

ಆಗ್ರ (ಮಾ.13) ಪೊಲೀಸ್ ಕಾನ್ಸ್‌ಸ್ಟೇಬಲ್‌ಗೆ ತನು ಮನ ದೇಹ ಎಲ್ಲವನ್ನೂ ಅರ್ಪಿಸಿದ್ದ ಫ್ಯಾಶನ್ ಡಿಸೈನರ್ ಮಹಿಳೆ ದುರಂತ ಅಂತ್ಯಕಂಡಿದ್ದಾಳೆ. ಕೊನೆಯ ವಿಡಿಯೋ ಪೋಸ್ಟ್ ಮಾಡಿ ಕಳೆದ ನಾಲ್ಕು ವರ್ಷದಿಂದ ಘಟನೆ ಬಿಚ್ಚಿಟ್ಟಿದ್ದಾಳೆ. ಪತ್ನಿಯಂತೆ ನೋಡಿಕೊಂಡಿದ್ದ, ಕಳೆದ ನಾಲ್ಕು ವರ್ಷದಿಂದ ಜೊತೆಯಾಗಿದ್ದೆವು. ನಾವು ಗಂಡ ಹೆಂಡತಿಯಂತೆ ಎಲ್ಲಾ ದೈಹಿಕ ಸಂಬಂಧ ಇಟ್ಟುಕೊಂಡಿದ್ದೆವು. ಆದರೆ ಈಗ ಪೊಲೀಸ್ ಬೇರೆ ಮದುವೆಯಾಗುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆ ಬದುಕು ಅಂತ್ಯಗೊಳಿಸಿದ ಘಟನೆ ಆಗ್ರಾದಲ್ಲಿ ನಡೆದಿದೆ.

ಕೊನೆಯ ವಿಡಿಯೋ ಮಾಡಿ ಸಾವು

ಆಗ್ರ ಮಹಿಳೆ ಫ್ಯಾಶನ ಡಿಸೈನರ್ ಆಗಿ ವೃತ್ತಿಯಲ್ಲಿದ್ದಳು. ಪೊಲೀಸ್ ಪೇದೆಯ ಮೇಲೆ ಗಂಭೀರ ಆರೋಪ ಮಾಡುತ್ತಾ ಮಹಿಳೆ ಕೊನೆಯ ವಿಡಿಯೋ ಮಾಡಿದ್ದಾಳೆ. ಬಳಿಕ ದುರಂತ ಅಂತ್ಯಕಂಡಿದ್ದಾಳೆ. ಮದುವೆಯಾಗುತ್ತೇನೆ ಎಂದು ಹೇಳಿಕೊಂಡೆ ಸಂಬಂಧ ಬೆಳೆಸಿದ್ದ. ದೈಹಿಕವಾಗಿ ಬಳಸಿಕೊಂಡಿದ್ದಾನೆ. ಕಳೆದ ನಾಲ್ಕು ವರ್ಷದಿಂದ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದೆವು ಎಂದು ಮಹಿಳೆ ವಿಡಿಯೋದಲ್ಲಿ ಹೇಳಿದ್ದಾರೆ. ತಾಜ್‌ಗಂಜ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೇದೆ ಜಿವಿ ಗೌತಮ್ ಮೇಲೆ ಗಂಭೀರ ಆರೋಪ ಮಾಡಿದ ಮಹಿಳೆ ದುರಂತ ಅಂತ್ಯಕಂಡಿದ್ದಾಳೆ. ನಾವಿಬ್ಬರು ಗಂಡ ಹೆಂಡತಿ ರೀತಿಯಲ್ಲೇ ಕಳೆದ ನಾಲ್ಕು ವರ್ಷದಿಂದ ಕಳೆದಿದ್ದೇವೆ. ಆದರೆ ಇದೀಗ ಮದುವೆಯಾಗಲ್ಲ ಎಂದು ಬೇರೆ ಮಹಿಳೆ ಜೊತೆ ಮದುವೆಯಾಗುತ್ತಿದ್ದಾನೆ ಎಂದು ಆರೋಪಿಸಿ ಸಾವು ಕಂಡಿದ್ದಾಳೆ.

ಪೊಲೀಸರಿಂದಲೂ ನೆರವು ಸಿಗಲಿಲ್ಲ, ಕಣ್ಣೀರಿಟ್ಟ ಯುವತಿ

ಜಿವಿ ಗೌತಮ್ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ. ಹೀಗಾಗಿ ಪೊಲೀಸ್ ಠಾಣೆಗೆ ತೆರಳಿ ನೆರವು ಕೇಳಿದರೂ ನನಗೆ ಸಿಗಲಿಲ್ಲ. ಎಲ್ಲರೂ ಪೊಲೀಸ್ ಪೇದೆಯ ಪರವಾಗಿ ನಿಂತಿದ್ದರು. ನನಗೆ ನ್ಯಾಯ ಸಿಗಲಿಲ್ಲ. ಪೊಲೀಸರೆ ನ್ಯಾಯ ಕೊಡಿಸದಿದ್ದರೆ, ನಾನು ಬದುಕುವುದು ಹೇಗೆ, ನನ್ನ ಸಾವಿಗೆ ಜಿವಿ ಗೌತಮ್ ಹಾಗೂ ಆತನ ಮನೆಯವರು ಕಾರಣ ಎಂದು ವಿಡಿಯೋದಲ್ಲಿ ಯುವತಿ ಹೇಳಿದ್ದಾಳೆ. ಕಣ್ಣೀರಿಡುತ್ತಲೆ ವಿಡಿಯೋ ಮಾಡಿ ಸಾವು ಕಂಡಿದ್ದಾಳೆ.

ಸಿಎಂ ಯೋಗಿ ಹಾಗೂ ಪ್ರಧಾನಿ ಮೋದಿಗೆ ಮನವಿ

ಯುವತಿ ಮಾಡಿದ ಕೊನೆಯ ವಿಡಿಯೋದಲ್ಲಿ ನ್ಯಾಯಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾಳೆ. ನಾನು ಬದುಕಿರುವಾಗ ನನಗೆ ನ್ಯಾಯ ಸಿಗಲಿಲ್ಲ. ನಾನು ಸತ್ತ ಮೇಲಾದರೂ ನ್ಯಾಯ ಸಿಗುತ್ತೆ ಎಂಬ ಭರವಸೆಯಲ್ಲಿದ್ದೇನೆ. ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಈ ಪ್ರಕರಣದಲ್ಲಿ ನ್ಯಾಯಕೊಡಿಸಬೇಕು ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾಳೆ.

ಮೂಲತಃ ಕಾಸಗಂಜ್ ಜಿಲ್ಲೆಯ ಈ ಮಹಿಳೆ ಮೊದಲ ಮದುವೆಯಾಗಿ ಡಿವೋರ್ಸ್ ಪಡೆದಿದ್ದಳು. ಖಾಸಗಿ ಕಂಪನಿಯಲ್ಲಿ ಡಿಸೈನರ್ ಆಗಿ ಕೆಲಸ ಮಾಡುತಿದ್ದ ಮಹಿಳೆಗೆ ಪೊಲೀಸ್ ಪೇದೆ ಜಿವಿ ಗೌತಮ್ ಪರಿಚಯವಾಗಿದೆ. ಈಕೆ ಡಿವೋರ್ಸಿ ಅನ್ನೋದು ಗೊತ್ತಾಗುತ್ತಿದ್ದಂತೆ ಈಕೆಯನ್ನು ಬಳಸಿಕೊಳ್ಳಲು ಮುಂದಾಗಿದ್ದಾನೆ. ಇದರಂತೆ ಈಕೆಯ ಜೊತೆ ಪ್ರೀತಿಯ ನಾಟಕವಾಡಿದ್ದಾನೆ. ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ. ಬಳಿಕ ನಾಲ್ಕು ವರ್ಷದಿಂದ ಲೀವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದು ನಿರಂತರವಾಗಿ ದೈಹಿಕವಾಗಿ ಬಳಸಿಕೊಂಡಿದ್ದಾನೆ. ಆದರೆ ಮದುವೆಯಾಗಲು ಒತ್ತಾಯಿಸುತ್ತಿದ್ದಂತೆ ವರಸೆ ಬದಲಿಸಿದ್ದಾನೆ. ಮನೆಯವರ ಒಪ್ಪಿಗೆ ಇಲ್ಲ ಎಂದು ಜಾರಿಕೊಂಡಿದ್ದಾನೆ. ಇದೀಗ ಪೊಲೀಸ್ ಪೇದೆಗೆ ಬೇರೆ ಯುವತಿ ಜೊತೆ ಮದುವೆ ಫಿಕ್ಸ್ ಆಗಿದೆ.ಇದರ ಬೆನ್ನಲ್ಲೇ ಈ ಯುವತಿ ದುರಂತ ಅಂತ್ಯಕಂಡಿದ್ದಾಳೆ.

Scroll to load tweet…



Source link

Leave a Reply

Your email address will not be published. Required fields are marked *