
Breaking ದೆಹಲಿಯಲ್ಲಿ ಕಂಪಿಸಿದ ಭೂಮಿ, ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆ ದಾಖಲು, ಆಫ್ಘಾನಿಸ್ತಾನ ಕೇಂದ್ರ ಬಿಂದುವಾಗಿದ್ದು, ದೆಹಲಿ ಹಾಗೂ ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಭೂಕಂಪನವಾಗಿದೆ.
ದೆಹಲಿ (ಏ.04) ದೇಶದ ರಾಜಧಾನಿ ದೆಹಲಿಯಲ್ಲಿ ಭೂಕಂಪನವಾಗಿದೆ. ಈ ಭೂಕಂಪನದ ಕೇಂದ್ರಬಿಂದು ಆಫ್ಘಾನಿಸ್ತಾನವಾಗಿದ್ದು, ದೆಹಲಿ ಹಾಗೂ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗದಲ್ಲಿ ಭೂಮಿ ಕಂಪಿಸಿದೆ. ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿ ಪ್ರದೇಶದಲ್ಲಿ 5.5 ತೀವ್ರತೆ ಭೂಕಂಪನ ದಾಖಲಾಗಿದೆ. ಭೂಕಂಪನದ ಅನುಭವವಾಗುತ್ತಿದ್ದಂತೆ ಜನರು ಮನೆಯಿಂದ, ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ.
5.5 ತೀವ್ರತೆ, ಹಲೆವಡೆ ಆತಂಕ ತೀವ್ರ
ದೆಹಲಿ ಹಾಗೂ ಎನ್ಸಿಆರ್ ವ್ಯಾಪ್ತಿಯಲ್ಲಿ 5.5 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಮನೆಯ ವಸ್ತುಗಳು,ಫ್ಯಾನ್ ಅಲುಗಾಡಿದೆ. ಜನರು ಆತಂಕದಿಂದ ಹೊರಗೆ ಓಡಿ ಬಂದಿದ್ದಾರೆ. ದೆಹಲಿಯ ಹಲವು ಭಾಗದಲ್ಲಿ ಜನರು ಮತ್ತೆ ಮನೆಗೆ ಮರಳಲು ಭಯಪಡುವ ಸ್ಥಿತಿ ಎದುರಾಗಿದೆ.
ದೆಹಲಿ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದೆ 5.5 ತೀವ್ರತೆಯ ಭೂಕಂಪನದಲ್ಲಿ ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲ. ರಕ್ಷಣಾ ತಂಡಗಳು ಸನ್ನದ್ಧವಾಗಿದೆ. ಆಫ್ಘಾನಿಸ್ದಾನದಲ್ಲಿ ಇದರ ಕೇಂದ್ರಬಿಂದುವಾಗಿದೆ. ಆಪ್ಘಾನಿಸ್ದಾನದಲ್ಲಿ ರತ್ರಿ 9.42ರ ಸುಮಾರಿಗೆ ಈ ಭೂಕಂಪನ ಸಂಭವಿಸಿದೆ. ಲಘು ಭೂಕಂಪನದ ಪರಿಣಾಮ ಹೆಚ್ಚಿನ ಹಾನಿಯಾಗಿಲ್ಲ.
ಪಂಜಾಬ್ನ ಕೆಲ ಭಾಗದಲ್ಲೂ ಭೂಮಿ ಕಂಪಿಸಿದ ಅನುವವಾಗಿ ಎಂದು ಸ್ಥಳೀಯರು ಹೇಳಿದ್ದಾರೆ. ಚಂಡೀಘಟ, ಬಲದೇವ್ ಚಾಂದ್ ಸೇರಿದಂತೆ ಪಂಜಾಬ್ನ ಕೆಲ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದಿದ್ದಾರೆ. ಎಪ್ರಿಲ್ 2 ರಂದು ಟಿಬೆಟ್ ಪ್ರಾಂತ್ಯದಲ್ಲಿ 3.8 ತೀವ್ರತೆ ಭೂಕಂಪನವಾಗಿರುವುದು ವರಿದಿಯಾಗಿದೆ.