Headlines

Ramya Krishnan: ‘ನನ್ನ ಹೆಂಡತಿಯೇ ನನಗೆ ಗಂಡ’ ಎಂದ ಪತಿ: ಶಿವಗಾಮಿ ರಮ್ಯಾ ಕೃಷ್ಣನ್‌ ಕೊಟ್ಟ ಖಡಕ್ ಉತ್ತರವೇನು? | Ramya Krishnan Bold Reply To Husband Krishna Vamsi Comment Gvd

Ramya Krishnan: ‘ನನ್ನ ಹೆಂಡತಿಯೇ ನನಗೆ ಗಂಡ’ ಎಂದ ಪತಿ: ಶಿವಗಾಮಿ ರಮ್ಯಾ ಕೃಷ್ಣನ್‌ ಕೊಟ್ಟ ಖಡಕ್ ಉತ್ತರವೇನು? | Ramya Krishnan Bold Reply To Husband Krishna Vamsi Comment Gvd



Ramya Krishnan: ‘ನನ್ನ ಹೆಂಡತಿಯೇ ನನಗೆ ಗಂಡ’ ಎಂದ ಪತಿ: ಶಿವಗಾಮಿ ರಮ್ಯಾ ಕೃಷ್ಣನ್‌ ಕೊಟ್ಟ ಖಡಕ್ ಉತ್ತರವೇನು? | Ramya Krishnan Bold Reply To Husband Krishna Vamsi Comment Gvd

ನಟಿ ರಮ್ಯಾ ಕೃಷ್ಣನ್‌ ಮತ್ತು ನಿರ್ದೇಶಕ ಕೃಷ್ಣ ವಂಶಿ ಅವರ ಸಂಬಂಧದ ಬಗ್ಗೆ ಈ ಹಿಂದೆ ಹಲವು ವದಂತಿಗಳು ಹಬ್ಬಿದ್ದವು. ಆದರೆ, ‘ನನಗೆ ರಮ್ಯಾ ಕೃಷ್ಣನ್‌ ಗಂಡ’ ಎಂದು ಕೃಷ್ಣ ವಂಶಿ ಮಾಡಿದ ಕಾಮೆಂಟ್‌ಗೆ, ರಮ್ಯಾ ಕೃಷ್ಣನ್‌ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

ರಮ್ಯಾ ಕೃಷ್ಣನ್‌ ಈಗ ಬಹುಮುಖ ನಟಿಯಾಗಿ ಮಿಂಚುತ್ತಿದ್ದಾರೆ. ಒಂದು ಕಾಲದಲ್ಲಿ ಗ್ಲಾಮರ್ ಪಾತ್ರಗಳಿಂದಲೇ ಅವರು ಜನಮನ ಗೆದ್ದಿದ್ದರು. ಸುಮಾರು ಎರಡು ದಶಕಗಳ ಕಾಲ ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಆಗಿ ಮೆರೆದಿದ್ದರು. ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ, ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ‘ಬಾಹುಬಲಿ’ ಚಿತ್ರದ ಮೂಲಕ ಅವರ ಸೆಕೆಂಡ್ ಇನ್ನಿಂಗ್ಸ್ ಆರಂಭವಾಯಿತು ಎನ್ನಬಹುದು. ಇತ್ತೀಚೆಗೆ ‘ರಂಗಮಾರ್ತಾಂಡ’ ಚಿತ್ರದಲ್ಲಿ ಅದ್ಭುತ ಅಭಿನಯ ನೀಡಿ, ಭಾವನಾತ್ಮಕ ಪಾತ್ರದ ಮೂಲಕ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಿದ್ದರು. ‘ಜೈಲರ್’ ಚಿತ್ರದ ಮೂಲಕ ಸೂಪರ್ ಹಿಟ್ ಸಾಧಿಸಿದ್ದಾರೆ.

ರಮ್ಯಾ ಕೃಷ್ಣನ್‌ ಅವರು ನಿರ್ದೇಶಕ ಕೃಷ್ಣ ವಂಶಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಕೃಷ್ಣ ವಂಶಿ ನಿರ್ದೇಶನದ ‘ಚಂದ್ರಲೇಖಾ’ ಚಿತ್ರದಲ್ಲಿ ರಮ್ಯಾ ಕೃಷ್ಣನ್‌ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ನಾಗಾರ್ಜುನ ನಾಯಕರಾಗಿದ್ದರು. ಈ ಸಿನಿಮಾದ ಸಮಯದಲ್ಲಿ ಇಬ್ಬರೂ ಪರಸ್ಪರ ಪ್ರೀತಿಸಲು ಆರಂಭಿಸಿದರು. ನಂತರ ಮದುವೆಯಾದರು. ಬಹಳ ವರ್ಷಗಳ ನಂತರ, ಇತ್ತೀಚೆಗೆ ಕೃಷ್ಣ ವಂಶಿ ನಿರ್ದೇಶನದ ‘ರಂಗಮಾರ್ತಾಂಡ’ ಚಿತ್ರದಲ್ಲಿ ರಮ್ಯಾ ಕೃಷ್ಣನ್‌ ಮತ್ತೆ ನಟಿಸಿದರು.

ರಮ್ಯಾ ಕೃಷ್ಣನ್‌ ಮತ್ತು ಕೃಷ್ಣ ವಂಶಿ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ಹಲವು ಬಾರಿ ವದಂತಿಗಳು ಹಬ್ಬಿದ್ದವು. ರಮ್ಯಾ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಬಗ್ಗೆ ನಿರ್ದೇಶಕ ಕೃಷ್ಣ ವಂಶಿ ಸ್ಪಷ್ಟನೆ ನೀಡಿದ್ದರು. ಶೂಟಿಂಗ್‌ಗಾಗಿ ರಮ್ಯಾ ಚೆನ್ನೈಗೆ ಹೋಗಿ ಬರುತ್ತಾರೆ, ನಾವು ನಿಯಮಿತವಾಗಿ ಭೇಟಿಯಾಗುತ್ತೇವೆ, ನಮ್ಮ ನಡುವೆ ಯಾವುದೇ ಅಂತರವಿಲ್ಲ ಎಂದು ಅವರು ಹೇಳಿದ್ದರು. ನಾವು ಒಟ್ಟಿಗೆ ವಾಸಿಸುತ್ತಿದ್ದೇವೆ, ಹಬ್ಬಿರುವ ವದಂತಿಗಳೆಲ್ಲಾ ಸುಳ್ಳು ಎಂದು ಸ್ಪಷ್ಟಪಡಿಸಿದ್ದರು.

ಒಮ್ಮೆ ಸಂದರ್ಶನವೊಂದರಲ್ಲಿ ನಿರ್ದೇಶಕ ಕೃಷ್ಣ ವಂಶಿ, ರಮ್ಯಾ ಕೃಷ್ಣನ್‌ ಬಗ್ಗೆ ಒಂದು ಇಂಟರೆಸ್ಟಿಂಗ್ ಕಾಮೆಂಟ್ ಮಾಡಿದ್ದರು. ‘ರಮ್ಯಾ ಕೃಷ್ಣನ್‌ಗೆ ನಾನು ಗಂಡನಲ್ಲ, ನನಗೇ ಆಕೆ ಗಂಡ’ ಎಂದಿದ್ದರು. ಇದಕ್ಕೆ ರಮ್ಯಾ ಕೃಷ್ಣನ್‌ ಪ್ರತಿಕ್ರಿಯಿಸಿದ್ದರು. ‘ಕ್ವೀನ್’ ಸಿನಿಮಾ ಬಿಡುಗಡೆ ಸಮಯದಲ್ಲಿ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದರು. ‘(ನಗುತ್ತಾ) ಯಾರು ಯಾರಿಗೆ ಗಂಡನಾದರೇನು? ಅವರು ತಮಾಷೆಗಾಗಿ ಹಾಗೆ ಹೇಳಿರಬಹುದು. ಕೆಲವೊಮ್ಮೆ ಅವರು ಹೆಂಡತಿ, ನಾನು ಗಂಡ ಆಗಬಹುದು. ಪಾತ್ರಗಳನ್ನು ಬದಲಾಯಿಸಿಕೊಳ್ಳಬಹುದು.

ಸಂದರ್ಶನದ ತುಣುಕು ವೈರಲ್

ಗಂಡ-ಹೆಂಡತಿ ನಡುವೆ ತಿಳುವಳಿಕೆ ಇರಬೇಕು. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಬೇಕು. ನಾವು ಇದನ್ನೇ ನಂಬುತ್ತೇವೆ’ ಎಂದು ರಮ್ಯಾ ಕೃಷ್ಣನ್‌ ತಿಳಿಸಿದ್ದರು. ಈ ಸಂದರ್ಶನದ ತುಣುಕು ಈಗ ವೈರಲ್ ಆಗಿದ್ದು, ಅಭಿಮಾನಿಗಳನ್ನು ಆಕರ್ಷಿಸುತ್ತಿದೆ. ರಮ್ಯಾ ಕೃಷ್ಣನ್‌ ಸದ್ಯ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವರು ಮಾಡರ್ನ್ ಮಹಿಳೆಯಾಗಿ, ಪ್ರಯಾಣ ಇಷ್ಟಪಡುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ, ತಮಿಳಿನಲ್ಲಿ ರಜನಿಕಾಂತ್ ಜೊತೆ ‘ಜೈಲರ್ 2’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರ ಸದ್ಯ ಶೂಟಿಂಗ್ ಹಂತದಲ್ಲಿದೆ.



Source link

Leave a Reply

Your email address will not be published. Required fields are marked *