
Karnataka Train Cancellations: Shimoga-Bangalore Jan Shatabdi Cancelled ರಾಷ್ಟ್ರೀಯ ಹೆದ್ದಾರಿ-206ರಲ್ಲಿ ಮೇಲ್ಸೇತುವೆನಿರ್ಮಾಣ ಕಾಮಗಾರಿಯಿಂದಾಗಿ, ಬಿರೂರು-ತಾಳಗುಪ್ಪ ಮತ್ತು ಅರಸೀಕೆರೆ-ಚಿಕ್ಕಜಾಜೂರು ವಿಭಾಗಗಳಲ್ಲಿ ರೈಲ್ವೆ ‘ಲೈನ್ ಬ್ಲಾಕ್’ ಮಾಡಲಾಗುತ್ತಿದೆ.
ಬೆಂಗಳೂರು (ಫೆ.13): ರಾಷ್ಟ್ರೀಯ ಹೆದ್ದಾರಿ-206ರಲ್ಲಿ ರಸ್ತೆ ಮೇಲೇತುವೆ (ROB) ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕದ ಪ್ರಮುಖ ರೈಲ್ವೆ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗಲಿದೆ. ಬಿರೂರು-ತಾಳಗುಪ್ಪ ಹಾಗೂ ಅರಸೀಕೆರೆ-ಚಿಕ್ಕಜಾಜೂರು ವಿಭಾಗಗಳ ನಡುವೆ ರೈಲ್ವೆ ‘ಲೈನ್ ಬ್ಲಾಕ್’ ಇರುವುದರಿಂದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಹಲವು ರೈಲುಗಳ ಸೇವೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಿಸಿದೆ.
ಸಂಪೂರ್ಣ ರದ್ದಾಗಿರುವ ರೈಲುಗಳು
ಈ ಕೆಳಗಿನ ರೈಲುಗಳು ನಿಗದಿತ ದಿನಾಂಕಗಳಂದು ಸಂಚರಿಸುವುದಿಲ್ಲ:
- ತುಮಕೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (16567): ಫೆಬ್ರವರಿ 16, 19, 23, 24 ಮತ್ತು ಮಾರ್ಚ್ 2 ರಿಂದ 5ರವರೆಗೆ.
- ಶಿವಮೊಗ್ಗ ಟೌನ್ – ತುಮಕೂರು ಎಕ್ಸ್‌ಪ್ರೆಸ್ (16568): ಫೆಬ್ರವರಿ 17, 20, 24, 25 ಮತ್ತು ಮಾರ್ಚ್ 3 ರಿಂದ 6ರವರೆಗೆ.
- ಹುಬ್ಬಳ್ಳಿ – ಅರಸೀಕೆರೆ ಎಕ್ಸ್‌ಪ್ರೆಸ್ (16214): ಫೆಬ್ರವರಿ 23, 24.
- ಅರಸೀಕೆರೆ – ಹುಬ್ಬಳ್ಳಿ ಎಕ್ಸ್‌ಪ್ರೆಸ್ (16213): ಫೆಬ್ರವರಿ 24, 25.
- ಕೆಎಸ್ಆರ್ ಬೆಂಗಳೂರು – ಶಿವಮೊಗ್ಗ – ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ (12089/12090): ಫೆಬ್ರವರಿ 24 ಮತ್ತು 25.
ತಡವಾಗಿ ಹೊರಡುವ ರೈಲುಗಳು
- ಶಿವಮೊಗ್ಗ – ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ (12090): ಫೆಬ್ರವರಿ 17, 20 ಮತ್ತು ಮಾರ್ಚ್ 3 ರಿಂದ 6ರವರೆಗೆ ಶಿವಮೊಗ್ಗದಿಂದ 75 ನಿಮಿಷ ತಡವಾಗಿ ಹೊರಡಲಿದೆ.
- ಅರಸೀಕೆರೆ – ಹುಬ್ಬಳ್ಳಿ ರೈಲು (16213): ಫೆಬ್ರವರಿ 17, 20 ಮತ್ತು ಮಾರ್ಚ್ 3 ರಿಂದ 6ರವರೆಗೆ ಅರಸೀಕೆರೆಯಿಂದ 45 ನಿಮಿಷ ತಡವಾಗಿ ಪ್ರಯಾಣ ಆರಂಭಿಸಲಿದೆ.
ಮಾರ್ಗಮಧ್ಯೆ ತಡೆಹಿಡಿಯಲಾಗುವ (ನಿಯಂತ್ರಣ) ರೈಲುಗಳು
ಕಾಮಗಾರಿ ಹಿನ್ನೆಲೆಯಲ್ಲಿ ಈ ರೈಲುಗಳು ಮಾರ್ಗಮಧ್ಯೆ ನಿಲುಗಡೆಗೊಂಡು ವಿಳಂಬವಾಗಲಿವೆ:
- ಬೆಂಗಳೂರು – ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ (20661): ಫೆಬ್ರವರಿ 25 ರಂದು 35 ನಿಮಿಷ ವಿಳಂಬ.
- ತಾಳಗುಪ್ಪ – ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ (20652): ಫೆಬ್ರವರಿ 24 ಮತ್ತು 25 ರಂದು 75 ನಿಮಿಷ ವಿಳಂಬ.
- ಚಿಕ್ಕಮಗಳೂರು – ಶಿವಮೊಗ್ಗ ಪ್ಯಾಸೆಂಜರ್ (56272): ಅರ್ಧ ಗಂಟೆ (30 ನಿಮಿಷ) ಕಾಲ ಮಾರ್ಗಮಧ್ಯೆ ವಿಳಂಬ.
ರಾಷ್ಟ್ರೀಯ ಹೆದ್ದಾರಿಯ ಲೆವೆಲ್ ಕ್ರಾಸಿಂಗ್‌ಗಳ ಬದಲಿಗೆ ಮೇಲೇತುವೆ ನಿರ್ಮಿಸುವುದು ದೀರ್ಘಕಾಲದ ಸುರಕ್ಷತೆಯ ದೃಷ್ಟಿಯಿಂದ ಅನಿವಾರ್ಯವಾಗಿದೆ. ಈ ‘ಲೈನ್ ಬ್ಲಾಕ್’ ಅವಧಿಯಲ್ಲಿ ಪ್ರಯಾಣಿಕರು ಪರ್ಯಾಯ ಸಾರಿಗೆ ವ್ಯವಸ್ಥೆಗಳನ್ನು ಅವಲಂಬಿಸುವುದು ಉತ್ತಮ. ಪ್ರಯಾಣದ ಮುನ್ನ ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಅಥವಾ ಆಪ್‌ಗಳ ಮೂಲಕ ರೈಲಿನ ನೈಜ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಲು ಕೋರಲಾಗಿದೆ.