Headlines

ಯಾರಿಗೆ 3 ಗಂಡಂದಿರು ಇದ್ದಾರೆ? Bigg Boss Kannada ಮಹಿಳಾ ಸ್ಪರ್ಧಿ ಬಗ್ಗೆ ಬಾಂಬ್‌ ಹಾಕಿದ ಚೈತ್ರಾ ಕುಂದಾಪುರ | Chaithra Kundapura On Bbk 12 Lady Contestants Three Marriage

ಯಾರಿಗೆ 3 ಗಂಡಂದಿರು ಇದ್ದಾರೆ? Bigg Boss Kannada ಮಹಿಳಾ ಸ್ಪರ್ಧಿ ಬಗ್ಗೆ ಬಾಂಬ್‌ ಹಾಕಿದ ಚೈತ್ರಾ ಕುಂದಾಪುರ | Chaithra Kundapura On Bbk 12 Lady Contestants Three Marriage


Bigg Boss Kannada 12: ಬಿಗ್‌ ಬಾಸ್‌ ಆಟ ಮುಗಿದರೂ ಸ್ಪರ್ಧಿಗಳ ನಡುವಿನ ಜಗಳ ಮುಗಿಯುತ್ತಿಲ್ಲ. ಚೈತ್ರಾ ಕುಂದಾಪುರ ಹಾಗೂ ಅಶ್ವಿನಿ ಗೌಡ ಅವರು ಆಟದ ವಿಚಾರವಾಗಿ ಜಗಳ ಆಡುತ್ತಿದ್ದಾರೆ. ಈಗ ಚೈತ್ರಾ ಪೋಸ್ಟ್‌ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. 

ಕಳೆದ ಒಂದು ದಿನದಿಂದ ಚೈತ್ರಾ ಕುಂದಾಪುರ ಹಾಗೂ ಅಶ್ವಿನಿ ಗೌಡ ಮಧ್ಯೆ ಇನ್‌ಸ್ಟಾಗ್ರಾಮ್‌ ವಾರ್‌ ಶುರು ಆಗಿದೆ. ವಾದಕ್ಕೆ ಪ್ರತಿವಾದ ನಡೆಯುತ್ತಲೇ ಇತ್ತು. ಈಗ ಚೈತ್ರಾ ಕುಂದಾಪುರ ಅವರು ಮೂರು ಮದುವೆಯಾದ ಬಿಗ್‌ ಬಾಸ್‌ ಸ್ಪರ್ಧಿ ಬಗ್ಗೆ ಇನ್‌ಸ್ಟಾಗ್ರಾಮ್‌ ಸ್ಟೋರಿ ಹಂಚಿಕೊಂಡಿದ್ದಾರೆ.

ಚೈತ್ರಾ ಕುಂದಾಪುರ ಹೇಳಿದ್ದೇನು?

“ವೈಯಕ್ತಿಕ ದಾಳಿಗೆ ಇಳಿಯೋದೆ ಆದರೆ ನಾನು ಇಳಿಯಬಲ್ಲೆ. ಆದರೆ ನನಗೂ ನಿಮಗೂ ವ್ಯತ್ಯಾಸ ಇದೆ. ನನಗೂ ಗೊತ್ತು, ಯಾರು ಮೇಲೆ ಎಷ್ಟು ಚೆಕ್‌ಬೌನ್ಸ್‌ ಕೇಸ್‌ಇದೆ, ಯಾರಿಗೆ ಎಷ್ಟು ಗಂಡಂದಿರು ಇದ್ದಾರೆ? ಯಾಕೆ ತನ್ನ ಪ್ರೀತಿಯ ಬಗ್ಗೆ ಎರಡು ನಿಮಿಷ ಮಾತನಾಡುವ ಧೈರ್ಯ ಕೂಡ ಬಗ್‌ ಬಾಸ್‌ ಮನೆಯ ಒಳಗಡೆ ತೋರಿಸಲಿಲ್ಲ. ಎಲ್ಲವನ್ನು ಮಾತನಾಡಬಲ್ಲೆ, ಆದರೆ ನಾನು ಇವರಷ್ಟು ಚೀಪ್‌ಅಲ್ಲ, ನನಗೆ ಇನ್ನೊಬ್ಬತ ಮೇಲೆ ವೈಯಕ್ತಿಕ ದಾಳಿ ಮಾಡಿ ಪ್ರಚಾರ ಪಡೆಯುವ ಹುಚ್ಚು ಇಲ್ಲ. ಅಂದಹಾಗೆ ಚೆಕ್‌ ಬೌನ್ಸ್‌ಕೇಸ್‌ ಕೂಡ ವಂಚನೆ ಕೇಸ್‌ ಅಡಿಯಲ್ಲೇ ಬರುತ್ತದೆ. ಮೂರು ಗಂಡಂದಿರು.. ಕ್ಷಮಿಸಿ ಈಗ ಹೆಗಲು ಮುಟ್ಟಿ ನೋಡಿಕೊಳ್ಳಬೇಕು” ಎಂದು ಚೈತ್ರಾ ಕುಂದಾಪುರ ಅವರು ಪೋಸ್ಟ್‌ ಹಾಕಿದ್ದಾರೆ. ಚೈತ್ರಾ ಕುಂದಾಪುರ ಅವರು ಯಾವ ಬಿಗ್‌ ಬಾಸ್‌ ಸ್ಪರ್ಧಿಗೆ ಹೇಳಿದ್ದಾರೆ ಎಂಬುದನ್ನು ಅವರೇ ಹೇಳಬೇಕಿದೆ.

ಜಗಳ ಯಾಕೆ ಶುರು ಆಯ್ತು?

ಬಿಗ್‌ ಬಾಸ್‌ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಚೈತ್ರಾ ಕುಂದಾಪುರ ಆಟ ಆಡುವಾಗ ಅವರ ಮೈಮೇಲೆ ಗಾಯಗಳು ಆಗಿತ್ತು. ಅಶ್ವಿನಿ ಗೌಡ ಕೈಮೇಲೆ ಪರಚಿದ ಗಾಯಗಳ ಗುರುತು ಇತ್ತು. ಈ ಫೋಟೋಗಳು ಈಗ ವೈರಲ್‌ ಆಗುತ್ತಿದ್ದವು. ಈ ಬಗ್ಗೆ ಚೈತ್ರಾ ಕುಂದಾಪುರ ಅವು ಪ್ರತಿಕ್ರಿಯೆ ಕೊಟ್ಟಿದ್ದು, “ಇದು ಪಿಆರ್‌ ತಂತ್ರ, ನಾನು ಪಿಆರ್‌ ಮಾಡಿಲ್ಲ” ಎಂದು ಹೇಳಿದ್ದರು.

ಅಂದಹಾಗೆ ಅಶ್ವಿನಿ ಗೌಡ ಅವರ ಅಭಿಮಾನಿಗಳು, “ಅದು ಪಿ ಆರ್‌ ಅಲ್ಲ, ಗೌರವ, ಪಿ ಆರ್‌ ತಂತ್ರದಿಂದ ಗೌರವ ಬರೋದಿಲ್ಲ” ಎಂದು ಪೋಸ್ಟ್‌ ಹಂಚಿಕೊಳ್ಳುತ್ತಿದ್ದರು. ಆಮೇಲೆ ಅಶ್ವಿನಿ ಗೌಡ ಕೂಡ ಇದನ್ನೆಲ್ಲ ಶೇರ್‌ ಮಾಡಿದ್ದರು.

ಪಕ್ಕಾ ಸರ್ಕಾರಿ ಶಾಲೆ, ಕನ್ನಡ ಮೀಡಿಯಂ ಮಕ್ಕಳು ನಾವು, ಇದನ್ನೆಲ್ಲ ನಮ್ಮ ಹತ್ರ ಇಟ್ಕೊಬೇಡಿ, ಇಂತಹ ಗಿಮಿಕ್‌ ಎಲ್ಲವನ್ನು ಕನ್ನಡ ಓದೋಕೆ ಬರೆಯೋಕೆ ಬರದೆ ಇರೋ ಇಂಗ್ಲಿಷ್‌ ಮಕ್ಕಳ ಹತ್ರ ಇಟ್ಕೋಳಿ ಎಂದು ಚೈತ್ರಾ ಕುಂದಾಪುರ ಪೋಸ್ಟ್‌ ಮಾಡಿದ್ದರು.



Source link

Leave a Reply

Your email address will not be published. Required fields are marked *