Headlines

ಮಾ.28ರೊಳಗೆ ದಿಲ್ಲಿಯ ಕಾಂಗ್ರೆಸ್‌ ಮುಖ್ಯ ಕಚೇರಿ ತೆರವಿಗೆ ಕೇಂದ್ರ ಸರ್ಕಾರ ಸೂಚನೆ | Central Government Orders Vacating Delhi Congress Headquarters By March 28

ದಿಲ್ಲಿಯ ಹೃದಯಭಾಗದಲ್ಲಿರುವ ಅಕ್ಬರ್‌ ರಸ್ತೆಯ ಕಾಂಗ್ರೆಸ್‌ ಮುಖ್ಯ ಕಚೇರಿ ಹಾಗೂ ರೈಸೀನಾದಲ್ಲಿರುವ ಯುವ ಕಾಂಗ್ರೆಸ್‌ ಕಚೇರಿಯನ್ನು ಮಾ.28ರೊಳಗೆ ಖಾಲಿ ಮಾಡುವಂತೆ ಪಕ್ಷಕ್ಕೆ ಕೇಂದ್ರ ಸರ್ಕಾರದ ಎಸ್ಟೇಟ್ ಇಲಾಖೆಯಿಂದ ನೋಟಿಸ್ ಬಂದಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ : ದಿಲ್ಲಿಯ ಹೃದಯಭಾಗದಲ್ಲಿರುವ ಅಕ್ಬರ್‌ ರಸ್ತೆಯ ಕಾಂಗ್ರೆಸ್‌ ಮುಖ್ಯ ಕಚೇರಿ ಹಾಗೂ ರೈಸೀನಾದಲ್ಲಿರುವ ಯುವ ಕಾಂಗ್ರೆಸ್‌ ಕಚೇರಿಯನ್ನು ಮಾ.28ರೊಳಗೆ ಖಾಲಿ ಮಾಡುವಂತೆ ಪಕ್ಷಕ್ಕೆ ಕೇಂದ್ರ ಸರ್ಕಾರದ ಎಸ್ಟೇಟ್ ಇಲಾಖೆಯಿಂದ ನೋಟಿಸ್ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಎಸ್ಟೇಟ್ ಇಲಾಖೆ ಕಳಿಸಿರುವ ಅಂತಿಮ ನೋಟಿಸ್

ಎಸ್ಟೇಟ್ ಇಲಾಖೆ ಕಳಿಸಿರುವ ಅಂತಿಮ ನೋಟಿಸ್ ಇದಾಗಿರುವುದರಿಂದ, ಪಕ್ಷವು 1978ರಿಂದ ಹೊಂದಿರುವ ತನ್ನ ಹಳೆಯ ಕಚೇರಿಯನ್ನು ತೆರವುಗೊಳಿಸುವ ಪರಿಸ್ಥಿತಿ ಎದುರಾಗಿದೆ.

ಇಂದಿರಾ ಭವನದಲ್ಲಿ ತನ್ನ ಹೊಸ ಪಕ್ಷದ ಕಚೇರಿ

ಕಾಂಗ್ರೆಸ್ ಈಗಾಗಲೇ ಇಂದಿರಾ ಭವನದಲ್ಲಿ ತನ್ನ ಹೊಸ ಪಕ್ಷದ ಕಚೇರಿಯನ್ನು ನಿರ್ಮಿಸಿದೆ. ಆದಾಗ್ಯೂ‘24, ಅಕ್ಬರ್ ರಸ್ತೆಯಲ್ಲಿನ ಪ್ರಧಾನ ಕಚೇರಿಯಿಂದಲೇ ಇನ್ನೂ ಕಾರ್ಯನಿರ್ವಹಿಸುತ್ತಿದೆ . ಯುವ ಕಾಂಗ್ರೆಸ್ ಕಚೇರಿ ‘5, ರೈಸೀನಾ’ ರಸ್ತೆಯಲ್ಲಿದೆ.

ಕೆಲವು ದಿನಗಳ ಹಿಂದೆ ನೋಟಿಸ್ ನೀಡಲಾಗಿದ್ದು, ಹಳೆಯ ಪಕ್ಷಕ್ಕೆ ಒಂದು ವಾರದ ಸಮಯವನ್ನೂ ನೀಡಿಲ್ಲ. ಇದು ರಾಜಕೀಯ ಪ್ರೇರಿತ ಎಂದು ಪಕ್ಷದ ನಾಯಕರು ಕಿಡಿಕಾರಿದ್ದಾರೆ.ಈ ವಿಷಯದ ಬಗ್ಗೆ ಕಾಂಗ್ರೆಸ್ ಇನ್ನೂ ತನ್ನ ಕಾರ್ಯತಂತ್ರವನ್ನು ರೂಪಿಸಿಲ್ಲ ಮತ್ತು ಹಠಾತ್ ನೋಟಿಸ್‌ನಿಂದಾಗಿ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ನಡುವೆ ಪಕ್ಷದ ಸಂಸದ ಕಾರ್ತಿ ಚಿದಂಬರಂ ಮಾತನಾಡಿ, ‘ಸರ್ಕಾರವು ತನ್ನ ನಿಯಮವನ್ನು ಎಲ್ಲರಿಗೂ ಏಕರೂಪವಾಗಿ ಅನ್ವಯಿಸಬೇಕು. ಒಂದೇ ಪಕ್ಷದ ಮೇಲೆ ಕ್ರಮ ಜರುಗಿಸಬಾರದು’ ಎಂದಿದ್ದಾರೆ.

Source link

Leave a Reply

Your email address will not be published. Required fields are marked *