Ramya: ಕಾಂಗ್ರೆಸ್ ‘ಸಿಎಂ’ ಕುರ್ಚಿ ಕಿತ್ತಾಟ, ‘ಅದೇ ರಾಜಕೀಯ’ ಎಂದು ನಕ್ಕ ನಟಿ ರಮ್ಯಾ! | Sandalwood Actress Ramya Talk On Cm Power Sharing Dispute Becomes Viral

ಇದೀಗ ಸಿಎಂ ಕುರ್ಚಿ ಕಾದಾಟದ  ಹೊತ್ತಲ್ಲಿ ನಟಿ ‘ಇದನ್ನ ನಾನು ಡಿಸೈಡ್ ಮಾಡೋದಲ್ಲ. ಹೈಕಮಾಂಡ್ ತೀರ್ಮಾನ ಮಾಡಲಿದೆ. ಸೀನಿಯರ್ ಲೀಡರ್ ಗಳು ನಿರ್ಧಾರ ಮಾಡ್ತಾರೆ. ಯಾರಾದ್ರು ನಗರ ಓಕೆ, ಒಟ್ಟಿನಲ್ಲಿ ರಾಜ್ಯಕ್ಕೆ ಒಳ್ಳೇಯದಾಗಬೇಕು’ ಎಂದಿದ್ದಾರೆ. ಇನ್ನೂ ಏನಂದ್ರು ನೋಡಿ.. 

ಕರ್ನಾಟಕದಲ್ಲಿ ಸದ್ಯ ನಡೆಯುತ್ತಿರುವ ಕುರ್ಚಿ ಕಿತ್ತಾಟದ ಬಹುತೇಕರಿಗೆ ಗೊತ್ತಿದೆ. ಹಾಲಿ ಸಿಎಂ ಹಾಗೂ ಡಿಸಿಎಂ ಮಧ್ಯೆ ‘ಸಿಎಂ ಚೇರ್‌’ಗಾಗಿ ಕುರ್ಚಿ ಕಿತ್ತಾಟ ಈಗ ತಾರಕಕ್ಕೇರಿದ್ದು, ಇಬ್ಬರ ಬೆಂಬಲಿಗರೂ ಕೂಡ ಗಲಾಟೆ ಶುರುಮಾಡಿಕೊಂಡಿದ್ದಾರೆ. ಇದೀಗ ಸಿಎಂ ಕುರ್ಚಿ ಕಾದಾಟದ ಚೆಂಡು ಸಹಜವಾಗಿಯೇ ಹೈಕಮಾಂಡ್ ಅಂಗಳದಲ್ಲಿ ಓಡಾಡುತ್ತಿದೆ. ಮುಂದೇನು ಎಂದು ಕಾದು ನೋಡಲಾಗುತ್ತಿರುವ ಹೊತ್ತಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಈ ಬಗ್ಗೆ ಏಷ್ಯಾನೆಟ್ ಸುವರ್ಣ ಪ್ರತಿನಿಧಿ ಜೊತೆ ಮಾತನಾಡಿದ್ದಾರೆ. ಹಾಗಿದ್ದರೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಈ ಬಗ್ಗೆ ಅದೇನು ಹೇಳಿದ್ದಾರೆ ನೋಡಿ..

ಕಾಂಗ್ರೇಸ್ ನಲ್ಲಿ ಖುರ್ಚಿ ಕಿತ್ತಾಟ ವಿಚಾರ.

ಕಾಂಗ್ರೆಸ್ ಕುರ್ಚಿ ಕಿತ್ತಾಟಕ್ಕೆ ಸಂಬಂಧಿಸಿದಂತೆ, ಕೇಳಲಾದ ಪ್ರಶ್ನೆಗೆ ನಟಿ ರಮ್ಯಾ ರಮ್ಯಾ ಹೇಳಿಕೆ ನೀಡಿದ್ದಾರೆ. ‘ಇದನ್ನ ನಾನು ಡಿಸೈಡ್ ಮಾಡೋದಲ್ಲ. ಹೈಕಮಾಂಡ್ ತೀರ್ಮಾನ ಮಾಡಲಿದೆ. ಸೀನಿಯರ್ ಲೀಡರ್ ಗಳು ನಿರ್ಧಾರ ಮಾಡ್ತಾರೆ. ಯಾರಾದ್ರು ನಗರ ಓಕೆ, ಒಟ್ಟಿನಲ್ಲಿ ರಾಜ್ಯಕ್ಕೆ ಒಳ್ಳೇಯದಾಗಬೇಕು.

ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ವೇಣುಗೋಪಾಲ್ ಇದ್ದಾರೆ ನಿರ್ಧಾರ ಮಾಡ್ತಾರೆ. ಯಾರನ್ನ ಮಾಡಿದ್ರು ಓಕೆ. ‘ಪಕ್ಷದಲ್ಲಿ ಗೊಂದಲ ಹೆಚ್ಚಾಗಿದೆ ಯಾಕೆ’ ಅನ್ನೋ ಪ್ರಶ್ನೆಗೆ, ‘ಅದೇ ರಾಜಕೀಯ’ ಎಂದು ನಕ್ಕ ನಟಿ‌ ರಮ್ಯಾ ‘ಎಲ್ಲಾ ನಾಯಕರಿಗೂ ಅರ್ಹತೆ ಇದೆ. ಯಾರಾದ್ರೂ ಓಕೆ , ಹೈಕಮಾಂಡ್ ತೀರ್ಮಾನ ಮಾಡಲಿದೆ.. ‘ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

Source link

Leave a Reply

Your email address will not be published. Required fields are marked *