Headlines

Power Cut ಪೆಟ್ರೋಲ್ ಬೆನ್ನಲ್ಲೇ ಕರೆಂಟ್ ಶಾಕ್, ಮಾ.25ರ ವರೆಗೆ ಬೆಸ್ಕಾಂ ವ್ಯಾಪ್ತಿಯ ವಿವಿದೆಡೆ ವಿದ್ಯುತ್ ಕಡಿತ | Bescom Announces Power Cuts In Several Areas Till March 25 After Fuel Hike Shock

Power Cut ಪೆಟ್ರೋಲ್ ಬೆನ್ನಲ್ಲೇ ಕರೆಂಟ್ ಶಾಕ್, ಮಾ.25ರ ವರೆಗೆ ಬೆಸ್ಕಾಂ ವ್ಯಾಪ್ತಿಯ ವಿವಿದೆಡೆ ವಿದ್ಯುತ್ ಕಡಿತ | Bescom Announces Power Cuts In Several Areas Till March 25 After Fuel Hike Shock



Power Cut ಪೆಟ್ರೋಲ್ ಬೆನ್ನಲ್ಲೇ ಕರೆಂಟ್ ಶಾಕ್, ಮಾ.25ರ ವರೆಗೆ ಬೆಸ್ಕಾಂ ವ್ಯಾಪ್ತಿಯ ವಿವಿದೆಡೆ ವಿದ್ಯುತ್ ಕಡಿತ | Bescom Announces Power Cuts In Several Areas Till March 25 After Fuel Hike Shock

ಗ್ಯಾಸ್, ಪೆಟ್ರೋಲ್ ಬೆನ್ನಲ್ಲೇ ಕರೆಂಟ್ ಶಾಕ್, ಮಾ.25ರ ವರೆಗೆ ಬೆಸ್ಕಾಂ ವ್ಯಾಪ್ತಿಯ ವಿವಿದೆಡೆ ವಿದ್ಯುತ್ ಕಡಿತ, ನಾಳೆಯಿಂದಲೇ ವಿದ್ಯುತ್ ಕಡಿತ ಶುರುವಾಗಲಿದೆ. ಎಲ್ಲೆಲ್ಲಾ ವಿದ್ಯುತ್ ಕಡಿತ ನಡೆಯಲಿದೆ, ಯಾವ ಸಮಯಕ್ಕೆ ಕಡಿತಗೊಳ್ಳಲಿದೆ? 

ಬೆಂಗಳೂರು (ಮಾ.21) ಮಧ್ಯಪ್ರಾಚ್ಯ ಯುದ್ಧದಿಂದ ಗ್ಯಾಸ್ ಸಿಲಿಂಡರ್ ಕೊರತೆ, ಪ್ರೀಮಿಯಂ ಪೆಟ್ರೋಲ್ ಬೆಲೆ ಏರಿಕೆ ಸಮಸ್ಯೆಗಳು ತಲೆದೋರಿದೆ. ಹಲವು ಹೊಟೆಲ್‌ಗಳು ಬಾಗಿಲು ಮುಚ್ಚಿದೆ. ಸಮಸ್ಯೆ ತೀವ್ರಗೊಳ್ಳುತ್ತಿದೆ. ಇದರ ನಡುವೆ ಜನರಿಗೆ ವಿದ್ಯುತ್ ಶಾಕ್ ಎದುರಾಗಿದೆ. ನಾಳೆಯಿಂದ ಮಾರ್ಚ್ 25ರ ವರೆಗೆ ಬೆಸ್ಕಾಂ ವ್ಯಾಪ್ತಿಯ ಹಲೆವೆಡೆ ವಿದ್ಯುತ್ ಕಡಿತಗೊಳ್ಳುತ್ತಿದೆ . ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ವಿದ್ಯುತ್ ಕಡಿತಗೊಳ್ಳುತ್ತಿದೆ. ಸಾರ್ವಜನಿಕರು ಸಹಕರಿಸಬೇಕಾಗಿ ಬೆಸ್ಕಾಂ ಮನವಿ ಮಾಡಿದೆ.

ದಿಢೀರ್ ವಿದ್ಯುತ್ ಕಡಿತಕ್ಕೆ ಕಾರಣವೇನು?

ಮಾರ್ಚ್ 22 ರಿಂದ ಮಾರ್ಚ್ 22ರ ವರೆಗೆ ವಿದ್ಯುತ್ ಕಡಿತ ನಡೆಯಲಿದೆ. ಬೆಸ್ಕಾಂ ವ್ಯಾಪ್ತಿಯ ಚಿತ್ರದುರ್ಗ ಮತ್ತು ಕೋಲಾರ ಸೇರಿ ಹಲವೆಡೆ ವಿದ್ಯುತ್ ಕಡಿತಗೊಳ್ಳಲಿದೆ. ನಿರ್ವಹಣಾ ಕಾಮಗಾರಿಗಳು ಮತ್ತು HT ರೀಕಂಡಕ್ಟರಿಂಗ್ ಕಾರಣ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ. ಕಾಮಗಾರಿ ಹಿನ್ನಲೆ ಬಡಾವಣೆಗಳು ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ತಾತ್ಕಾಲಿಕ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಹೇಳಿದೆ.

ಯಾವ ಪ್ರದೇಶಗಳಲ್ಲಿ ವಿದ್ಯುತ್ ಕಡಿತ

ಚಿತ್ರದುರ್ಗ ವ್ಯಾಪ್ತಿಯ ಎಚ್.ಡಿ.ಪುರ, ತಾಳ್ಯ ಕಾವಲು, ಉಪ್ಪರಿಗೇನಹಳ್ಳಿ, ಬೂದಿಪುರ,ನಲ್ಲಿಕಟ್ಟೆ, ತಾಳ್ಯ, ಮತ್ತಿಘಟ್ಟ, ಕೆರೆಯಾಗಲಹಳ್ಳಿ, ಚೌಡಗೊಂಡನಹಳ್ಳಿ, ತೇಕಲವಟ್ಟಿ, ಬಿ.ಆ‌ರ್.ಗುಡಿ, ಚಾಮುಂಡೇಶ್ವರಿ, ಮಹದೇವನಕಟ್ಟೆ, ದೊಡ್ಡಾಪುರ, ಕಕ್ಕೇರು, ಹೋಸೂರು, ಜುಂಜಪ್ಪ ಮಾರ್ಗ, ಗೊಡಬನಹಾಳ್, ಅನ್ನೆಹಾಳು, ವಜ್ರ ಮಾರ್ಗ, ಈಚಘಟ್ಟ, ಟಿ.ನುಲೆನೂರು, ಬಿ.ಜಿಹಳ್ಳಿ, ಚಿತ್ರಹಳ್ಳಿ, ಮದ್ದೇರು, ಶಿವಗಂಗ, ಲಿಂಗದಹಳ್ಳಿ,ಕೇಶವಪುರ, ದಾಸಯ್ಯನಹಟ್ಟಿ, ಕೊಂಡಾಪುರ, ಆ೦ನೇಯ ದೇವಸ್ಥಾನ ಪ್ರದೇಶ, ಬಸವೇಶ್ವರ ದೇವಸ್ಥಾನ ಪ್ರದೇಶ, ಮೇಕೇನಹಟ್ಟಿ, ಕಾಟಯ್ಯನಕೆರೆ ಪ್ರದೇಶ, ನರಸಿಂಹಸ್ವಾಮಿ ದೇವಸ್ಥಾನ(ಗರಗ),ಅರಸನಘಟ್ಟ, ಗರಗ ಕಾವಲು, ಸಾದರಹಳ್ಳಿ, ಚಿಕ್ಕಂದವಾಡಿ, ಕರೀಮಟ್ಟಿ, ಚಿಕ್ಕನಕಟ್ಟೆ, ಚಿಕ್ಕಹೆಮ್ಮಿಗನೂರು, ಕೆ.ಎನ್.ಹಳ್ಳಿ, ತನಿಗೆಹಳ್ಳಿ, ಹರೇಕಂದವಾಡಿ, ಗುಂಜಿಗನೂರು, ರಂಗವ್ವನಹಳ್ಳಿ, ಬಿ.ದುರ್ಗ, ಐಯನಹಳ್ಳಿ, ಕಡೂರು,ಕೋಟೇಹಾಳು, ಎಸ್.ಹೆಚ್.ಹಳ್ಳಿ, ಚಿಕ್ಕಂದವಾಡಿ, ಚಿಕ್ಕಜಾಜೂರು, ಕವಲಹಟ್ಟಿ, ಹೋಸಹಳ್ಳಿ, ಸಾವೇರಮ್ಮ, ಗುಂಜಿಗನೂರು, ಗಾಳಿಮಾರಮ್ಮ ದೇವಸ್ಥಾನ ಪ್ರದೇಶ, ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸ್ಥಗಿತವಾಗಲಿದೆ.

ಪೂರ್ವ ಮುಂಗಾರು ಮಳೆ ಹಿನ್ನಲೆಯಲ್ಲಿ ಬೆಸ್ಕಾಂ ಸಹಾಯವಾಣಿ

ಪೂರ್ವ ಮುಂಗಾರು ಮಳೆ ಹಿನ್ನಲೆ ಬೆಸ್ಕಾಂ ಸಾರ್ವಜನಕರಿಗೆ ನೆರವಾಗಲು ಸಹಾಯವಾಣಿ ತೆರೆದಿದೆ. ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ವಾಟ್ಸ್ ಆಪ್ ಸಂಖ್ಯೆ ಪರಿಚಯಿಸಲಾಗಿದೆ. ಗಾಳಿ‌ಮಳೆಗೆ ವಿದ್ಯುತ್ ಕಂಬ ವಾಲಿದ್ದರೆ, ಮರದ ಕೊಂಬೆಗಳು ಕಂಬಗಳ ಮೇಲೆ ಬಿದ್ದಿದ್ದರೆ ಬೆಸ್ಕಾಂ ಉಪ ವಿಭಾಗ ಕಚೇರಿಗೆ ಮಾಹಿತಿ ನೀಡಲು ಹಾಗೂ ಬೆಸ್ಕಾಂ 1912 ಸಹಾಯವಾಣಿಗೆ ಕರೆ ಮಾಡಲು ಬೆಸ್ಕಾಂ ವಿನಂತಿ ಮಾಡಿದೆ. ಇದೇ ವೇಳೆ ವಿದ್ಯುತ್ ಕಂಬಗಳು ಹಾದು ಹೋಗಿರುವ ಮರಗಳ ಕೆಳಗೆ ನಿಲ್ಲದಂತೆ ಹಾಗೂ ವಿದ್ಯುತ್‌ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಬೆಸ್ಕಾಂ ಸಾರ್ವಜನಿಕರಲ್ಲಿ ಬೆಸ್ಕಾಂ ಮನವಿ ಮಾಡಿದೆ.

ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ವಾಟ್ಸ್ ಆಪ್ ಸಂಖ್ಯೆಗಳ ವಿವರ

ಬೆಂಗಳೂರು ನಗರ ಜಿಲ್ಲೆ: ದಕ್ಷಿಣ ವೃತ್ತ : 8277884011,

  • ಪಶ್ಚಿಮ ವೃತ್ತ: 8277884012, ಪೂರ್ವ ವೃತ್ತ-:8277884013 , ಉತ್ತರ ವೃತ್ತ :8277884014,
  • ಕೋಲಾರ ಜಿಲ್ಲೆ : 8277884015,
  • ಚಿಕ್ಕಬಳ್ಳಾಪುರ ಜಿಲ್ಲೆ : 8277884016,
  • ಬೆಂಗಳೂರು ಗ್ರಾಮಾಂತರ ಜಿಲ್ಲೆ : 8277884017,
  • ರಾಮನಗರ ಜಿಲ್ಲೆ : 8277884018,
  • ತುಮಕೂರು ಜಿಲ್ಲೆ : 8277884019,
  • ಚಿತ್ರದರ್ಗ ಜಿಲ್ಲೆ : 8277884020,
  • ದಾವಣಗೆರೆ ಜಿಲ್ಲೆ : 8277884021



Source link

Leave a Reply

Your email address will not be published. Required fields are marked *