Headlines

ಹಿಂದೂ ಮಹಾಸಾಗರದ ಯುಎಸ್‌-ಯುಕೆ ನೆಲೆ ಮೇಲೆ ಇರಾನ್‌ ದಾಳಿ, ಮಿಸೈಲ್‌ ದೂರ ನೋಡಿ ಬೆಚ್ಚಿಬಿದ್ದ ಅಮೆರಿಕ! | Iran Missile Attack Diego Garcia Us Base Indian Ocean Iris Dena Sunk War Updates San

ಹಿಂದೂ ಮಹಾಸಾಗರದ ಯುಎಸ್‌-ಯುಕೆ ನೆಲೆ ಮೇಲೆ ಇರಾನ್‌ ದಾಳಿ, ಮಿಸೈಲ್‌ ದೂರ ನೋಡಿ ಬೆಚ್ಚಿಬಿದ್ದ ಅಮೆರಿಕ! | Iran Missile Attack Diego Garcia Us Base Indian Ocean Iris Dena Sunk War Updates San



ಹಿಂದೂ ಮಹಾಸಾಗರದ ಯುಎಸ್‌-ಯುಕೆ ನೆಲೆ ಮೇಲೆ ಇರಾನ್‌ ದಾಳಿ, ಮಿಸೈಲ್‌ ದೂರ ನೋಡಿ ಬೆಚ್ಚಿಬಿದ್ದ ಅಮೆರಿಕ! | Iran Missile Attack Diego Garcia Us Base Indian Ocean Iris Dena Sunk War Updates San

ಅಮೆರಿಕ-ಇರಾನ್ ಸಂಘರ್ಷವು ಹಿಂದೂ ಮಹಾಸಾಗರಕ್ಕೆ ವಿಸ್ತರಿಸಿದ್ದು, ಇರಾನ್ ಡಿಯಾಗೋ ಗಾರ್ಸಿಯಾದಲ್ಲಿರುವ ಅಮೆರಿಕ-ಬ್ರಿಟನ್ ಸೇನಾ ನೆಲೆಯ ಮೇಲೆ ವಿಫಲ ಕ್ಷಿಪಣಿ ದಾಳಿ ನಡೆಸಿದೆ. ಈ ಮಿಸೈಲ್‌ ಪ್ರಯಾಣ ಮಾಡಿರುವ ದೂರ ನೋಡಿ ಅಮೆರಿಕ ಕಂಗಾಲಾಗಿದೆ.

ವಾಷಿಂಗ್ಟನ್ (ಮಾ.21): ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವು ಈಗ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಹಿಂದೂ ಮಹಾಸಾಗರದ ಎರಡು ಪ್ರಮುಖ ದಾಳಿಗಳೊಂದಿಗೆ ಯುದ್ಧದ ಭೌಗೋಳಿಕ ವ್ಯಾಪ್ತಿ ವಿಸ್ತರಣೆಯಾಗಿದೆ. ಇರಾನ್ ಮೊದಲ ಬಾರಿಗೆ ಬ್ರಿಟಿಷ್ ಮತ್ತು ಅಮೆರಿಕದ ಜಂಟಿ ಸೇನಾ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಜಗತ್ತಿಗೆ ಶಾಕ್ ನೀಡಿದೆ. ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿರುವಂತೆ, ಇರಾನ್ ಚಾಗೋಸ್ ದ್ವೀಪಸಮೂಹದಲ್ಲಿರುವ ಅಮೆರಿಕ-ಬ್ರಿಟನ್ ಜಂಟಿ ಮಿಲಿಟರಿ ನೆಲೆ ‘ಡಿಯಾಗೋ ಗಾರ್ಸಿಯಾ’ ಮೇಲೆ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಆದರೆ, ಇರಾನ್ ಉಡಾಯಿಸಿದ ಎರಡು ಕ್ಷಿಪಣಿಗಳು ಗುರಿ ತಲುಪುವಲ್ಲಿ ವಿಫಲವಾಗಿವೆ.

ಒಂದು ಕ್ಷಿಪಣಿಯು ಹಾರಾಟದ ಮಧ್ಯದಲ್ಲೇ ತಾಂತ್ರಿಕ ದೋಷದಿಂದ ಪತನಗೊಂಡರೆ, ಎರಡನೇ ಕ್ಷಿಪಣಿಯನ್ನು ಅಮೆರಿಕದ ಯುದ್ಧನೌಕೆಯಿಂದ ಉಡಾಯಿಸಲಾದ ಪ್ರತಿರೋಧಕ ಕ್ಷಿಪಣಿ (Interceptor) ತಡೆದಿದೆ. ಆದರೆ ಅದು ಧ್ವಂಸವಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅಮೆರಿಕಕ್ಕೆ ಆತಂಕ ತಂದ ಮಿಸೈಲ್‌ ಪ್ರಯಾಣಿಸಿದ ದೂರ

ಈ ಮಿಲಿಟರಿ ನೆಲೆಯು ಇರಾನ್‌ನಿಂದ ಸುಮಾರು 4,000 ಕಿ.ಮೀ. ದೂರದಲ್ಲಿದೆ. ಇರಾನ್ ಇಷ್ಟು ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿ ಹೊಂದಿದೆ ಎನ್ನುವುದೇ ಈಗ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಆತಂಕ ಮೂಡಿಸಿದೆ. ಇದರರ್ಥ ಇರಾನ್ ಈಗ ಯುರೋಪ್‌ನಲ್ಲಿರುವ ಬಹುತೇಕ ಎಲ್ಲಾ ನೆಲೆಗಳನ್ನೂ ಗುರಿಯಾಗಿಸಬಲ್ಲದು. ಈ ಬಗ್ಗೆ ಪೆಂಟಗನ್ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಈ ಬೆಳವಣಿಗೆಯ ಕುರಿತು ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ ಎಕ್ಸ್ (ಟ್ವಿಟರ್) ನಲ್ಲಿ ಪ್ರತಿಕ್ರಿಯಿಸಿದ್ದು, “ಇರಾನ್ ಡಿಯಾಗೋ ಗಾರ್ಸಿಯಾವನ್ನು ಗುರಿಯಾಗಿಸಲು ಯತ್ನಿಸಿರುವುದು ನಿಜವೇ ಆದಲ್ಲಿ, ಇರಾನ್ ಯುದ್ಧದ ವ್ಯಾಪ್ತಿಯನ್ನು ವಿಸ್ತರಿಸಿದೆ. ದಕ್ಷಿಣದ ಕಡೆಗೆ ದಾಳಿ ಮಾಡುವ ಮೂಲಕ ಪಶ್ಚಿಮ ರಾಷ್ಟ್ರಗಳಿಗೆ ಸ್ಪಷ್ಟ ಸಂದೇಶ ರವಾನಿಸಿದೆ,” ಎಂದಿದ್ದಾರೆ.

ಶ್ರೀಲಂಕಾ ಸಮೀಪ ಇರಾನ್ ಯುದ್ಧನೌಕೆ ಧ್ವಂಸ ಮಾಡಿದ್ದ ಅಮೆರಿಕ

ಕೆಲವು ವಾರಗಳ ಹಿಂದೆ ಹಿಂದೂ ಮಹಾಸಾಗರದಲ್ಲಿ ನಡೆದ ಮೊದಲ ಸಂಘರ್ಷದಲ್ಲಿ, ಅಮೆರಿಕದ ಜಲಾಂತರ್ಗಾಮಿ ನೌಕೆಯು ಇರಾನ್‌ನ ಯುದ್ಧನೌಕೆ ‘ಐರಿಸ್‌ ದೇನಾ’ (IRIS Dena) ವನ್ನು ಟಾರ್ಪಿಡೊ ದಾಳಿಯ ಮೂಲಕ ಶ್ರೀಲಂಕಾದ ದಕ್ಷಿಣ ಭಾಗದಲ್ಲಿ ಮುಳುಗಿಸಿತ್ತು. ಈ ದಾಳಿಯಲ್ಲಿ 85ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಭಾರತ ಆಯೋಜಿಸಿದ್ದ ‘ಮಿಲನ್ 2026’ (MILAN 2026) ನೌಕಾ ಸಮರಭ್ಯಾಸದಲ್ಲಿ ಭಾಗವಹಿಸಿ ವಾಪಸ್ ಇರಾನ್‌ಗೆ ತೆರಳುತ್ತಿದ್ದಾಗ ಈ ದಾಳಿ ನಡೆದಿತ್ತು. ಫೆಬ್ರವರಿ 28 ರಂದು ಆರಂಭವಾದ ಈ ಯುದ್ಧದಲ್ಲಿ ಇರಾನ್‌ನ ನೌಕಾಪಡೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದೇ ಪೆಂಟಗನ್‌ನ ಮುಖ್ಯ ಗುರಿಯಾಗಿದೆ.

ಡಿಯಾಗೋ ಗಾರ್ಸಿಯಾ ಮತ್ತು ಚಾಗೋಸ್ ದ್ವೀಪದ ಹಿನ್ನೆಲೆ

ಡಿಯಾಗೋ ಗಾರ್ಸಿಯಾ ನೆಲೆಯು ಅಫ್ಘಾನಿಸ್ತಾನ ಮತ್ತು ಇರಾಕ್ ಮೇಲಿನ ಅಮೆರಿಕದ ಬಾಂಬ್ ದಾಳಿಗಳಿಗೆ ಪ್ರಮುಖ ಕೇಂದ್ರವಾಗಿತ್ತು. ಬ್ರಿಟನ್ ಈಗ ಚಾಗೋಸ್ ದ್ವೀಪಗಳ ಸಾರ್ವಭೌಮತ್ವವನ್ನು ಮಾರಿಷಸ್‌ಗೆ ಹಸ್ತಾಂತರಿಸಲು ಒಪ್ಪಿಕೊಂಡಿದ್ದರೂ, ಡಿಯಾಗೋ ಗಾರ್ಸಿಯಾ ನೆಲೆಯನ್ನು ಮಾತ್ರ ತನ್ನ ಲೀಸ್‌ನಲ್ಲಿ ಉಳಿಸಿಕೊಂಡಿದೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಸ್ತಾಂತರವನ್ನು ಬಹಿರಂಗವಾಗಿ ವಿರೋಧಿಸಿದ್ದಾರೆ.



Source link

Leave a Reply

Your email address will not be published. Required fields are marked *