Bengaluru ಬೆಂಗಳೂರು ಫ್ಲ್ಯಾಟ್‌ನಲ್ಲಿ ಇಬ್ಬರು ಯುವತಿಯರ ಜೊತೆ ವಾಸವಾಗಿದ್ದ ಯುವಕ ಶವವಾಗಿ ಪತ್ತೆ | Kerala Man Found Dead In Bengaluru Flat Where He Lived With Two Women

Bengaluru ಬೆಂಗಳೂರು ಫ್ಲ್ಯಾಟ್‌ನಲ್ಲಿ ಇಬ್ಬರು ಯುವತಿಯರ ಜೊತೆ ವಾಸವಾಗಿದ್ದ ಯುವಕ ಶವವಾಗಿ ಪತ್ತೆ | Kerala Man Found Dead In Bengaluru Flat Where He Lived With Two Women



Bengaluru ಬೆಂಗಳೂರು ಫ್ಲ್ಯಾಟ್‌ನಲ್ಲಿ ಇಬ್ಬರು ಯುವತಿಯರ ಜೊತೆ ವಾಸವಾಗಿದ್ದ ಯುವಕ ಶವವಾಗಿ ಪತ್ತೆ | Kerala Man Found Dead In Bengaluru Flat Where He Lived With Two Women

ಬೆಂಗಳೂರು ಫ್ಲ್ಯಾಟ್‌ನಲ್ಲಿ ಇಬ್ಬರು ಯುವತಿಯರ ಜೊತೆ ವಾಸವಾಗಿದ್ದ ಯುವಕ ಶವವಾಗಿ ಪತ್ತೆ, ಇಬ್ಬರು ಯುವತಿಯರ ವಿರುದ್ದ ಪ್ರಕರಣ ದಾಖಲಾಗಿದೆ. ಒಬ್ಬಳ ಪ್ರೀತಿಯಲ್ಲಿ ಬಿದ್ದಿದ್ದೆ, ಮೂವರ ಜಗಳಕ್ಕೆ ಕಾರಣವಾಗಿದೆ. ಯುವತಿಯರ ಕಿರುಕುಳಕ್ಕೆ ಯುವಕ ಬದುಕು ಅಂತ್ಯಗೊಳಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಬೆಂಗಳೂರು (ನ.11) ಇಬ್ಬರು ಯುವತಿಯರ ಜೊತೆ ಬೆಂಗಳೂರಿನ ಫ್ಲ್ಯಾಟ್ ಒಂದರಲ್ಲಿ ವಾಸವಾಗಿದ್ದ ಯುವಕ ದುರಂತ ಅಂತ್ಯಕಂಡಿದ್ದಾನೆ. ಕೆಲಸದ ಕಾರಣದಿಂದ ಕೆಳೆದ ಕೆಲ ವರ್ಷಗಳಿಂದ ಯುವಕ ಹಾಗೂ ಇಬ್ಬರು ಯುವತಿಯರು ಬೆಂಗಳೂರಿನ ಯಲ್ಲನೇಹಳ್ಳಿಯ ಫ್ಲ್ಯಾಟ್‌ನಲ್ಲಿ ವಾಸವಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರು ಮೂಲತಃ ಕೇರಳದ ತಿರುವನಂತಪುರಂದವರು. ಹೀಗಾಗಿ ಬೆಂಗಳೂರಿನಲ್ಲಿ ಜೊತೆಯಾಗಿ ಒಂದೇ ಫ್ಲ್ಯಾಟ್‌ನಲ್ಲಿ ವಾಸವಿದ್ದರು. ಈ ಪೈಕಿ ಒಬ್ಬಳ ಜೊತೆ ಪ್ರೀತಿಯಲ್ಲಿ ಬಿದ್ದಿದ್ದೆ, ಮೂವರ ಜಗಳಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ. ಪರಿಣಾಮ ಇಬ್ಬರು ಯುವತಿರ ಕಿರುಕುಳ ಹೆಚ್ಚಾಗಿ, ಯುವಕ ದುರಂತ ಅಂತ್ಯಕಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇಬ್ಬರು ಯುುವತಿಯರ ವಿರುದ್ದ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

ಇಬ್ಬರು ಯುವತಿಯರ ಜೊತೆ ಒಂದೇ ಫ್ಲ್ಯಾಟ್

ಕೇರಳದ ಶ್ರೀಕಾರ್ಯಂ ಮೂಲದ 39 ವರ್ಷದ ವಿಷ್ಣು ಮೃತ ದುರ್ದೈವಿ. ಮೂವರು ತಿರುವನಂತಪುರಂ ಮೂಲದವರಾಗಿದ್ದ ಕಾರಣ ಬೆಂಗಳೂರಿನಲ್ಲಿ ಒಂದೇ ಫ್ಲ್ಯಾಟ್‌ನಲ್ಲಿ ಕಳದೆ ಕೆಲ ವರ್ಷಗಳಿಂದ ಜೊತೆಯಾಗಿ ವಾಸವಿದ್ದರು. 38 ವರ್ಷದ ಸೂರ್ಯ ಕುಮಾರಿ ಹಾಗೂ 28 ವರ್ಷದ ಜ್ಯೋತಿ ಎಂಬ ಇಬ್ಬರು ಯುವತಿಯರು ವಿಷ್ಣು ಜೊತೆ ಒಂದೇ ಫ್ಲ್ಯಾಟ್‌ನಲ್ಲಿ ವಾಸವಿದ್ದರು.

ಒಬ್ಬಳ ಜೊತೆ ರಿಲೇಶನ್‌ಶಿಪ್, ಶುರುವಾಯ್ತು ಜಗಳ

ಸೂರ್ಯ ಕುಮಾರಿ ಹಾಗೂ ಜ್ಯೋತಿ ಇಬ್ಬರ ಜೊತೆ ಕಳೆದ ಕೆಲ ವರ್ಷಗಳಿಂದ ವಾಸವಿದ್ದ ಕಾರಣ ಒಬ್ಬಳ ಜೊತೆ ಪ್ರೀತಿ ಶುರುವಾಗಿದೆ. ಇದು ಮತ್ತೊಬ್ಬಳ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ಮೂವರಿಗೂ ಜಗಳವಾಗಿದೆ. ಪ್ರೀತಿ ವಿಚಾರ ಬಹಿರಂಗವಾದ ಬಳಿಕ ಮನೆ ರಣಾಂಗಣವಾಗಿದೆ. ಪ್ರತಿ ದಿನ ಜಗಳ ಶುರುವಾಗ ತೊಡಗಿದೆ. ನೆಮ್ಮದಿ ಇಲ್ಲದಾಗಿದೆ. ಜಗಳ ನಿಲ್ಲಿಸಿ ಇಬ್ಬರನ್ನು ಸಮಾಧಾನ ಪಡಿಸಲು ವಿಷ್ಣು ಪ್ರಯತ್ನಿಸಿದ್ದ ಎನ್ನಲಾಗಿದೆ. ಆದರೆ ಸಾಧ್ಯವಾಗಿಲ್ಲ.

ಶುಕ್ರವಾರ ಮುಂಜಾನೆ ವಿಷ್ಣು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ. ಫ್ಲ್ಯಾಟ್‌ನ ಬಾತ್‌ರೂಂನಲ್ಲಿ ದುರಂತ ಅಂತ್ಯಕಂಡಿದ್ದಾನೆ. ಈ ಕುರಿತು ಇಬ್ಬರು ಗೆಳತಿಯರ ಪೈಕಿ ಒಬ್ಬರು ವಿಷ್ಣು ಕುಟುಂಬಕ್ಕೆ ಕರೆ ಮಾಡಿ ತಿಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ವಿಷ್ಣು ಕುಟುಂಬಸ್ಥರು ಬೆಂಗಳೂರಿಗೆ ಆಗಮಿಸಿದೆ. ಘಟನೆ ಕುರಿತು ಅನುಮಾನಗೊಂಡಿರುವ ವಿಷ್ಣು ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ಬರು ಯುವತಿಯ ಕಿರಕುಳದಿಂದ ಸಹೋದರ ವಿಷ್ಣು ಈ ನಿರ್ಧಾರ ಕೈಗೊಂಡಿದ್ದಾರೆ. ಸಹೋದರ ದೂರಿನ ಮೇಲೆ ಪೊಲೀಸರು ಇಬ್ಬರು ಪ್ರಕರಣ ದಾಖಲಿಸಿದ್ದಾರೆ.

ಜ್ಯೋತಿ ಫೋನ್ ಸ್ವಿಚ್ ಆಫ್

ಬೆಂಗಳೂರಿನಲ್ಲಿ ವಾಸವಾಗಿರುವ ಸೂರ್ಯ ಕುಮಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಇತ್ತ ಜ್ಯೂತಿ ಕೆಲಸದ ನಿಮಿತ್ತ ಡೆಹ್ರಡೂನ್‌ಗೆ ತೆರಳಿರುವ ಮಾಹಿತಿ ಸಿಕ್ಕಿದೆ. ಆದರೆ ಜ್ಯೋತಿ ಫೋನ್ ಸ್ವಿಚ್ ಆಫ್ ಆಗಿದೆ.

ಬದುಕು ಅಂತ್ಯಗೊಳಿಸುವುದು ಯಾವುದಕ್ಕೂ ಪರಿಹಾರವಲ್ಲ

ಯಾವುದೇ ಸಂದರ್ಭದಲ್ಲಿ ಬದುಕು ಅಂತ್ಯಗೊಳಿಸುವ ನಿರ್ಧಾರ ಯಾವ ಸಮಸ್ಯೆಗೂ ಪರಿಹಾರವೂ ಅಲ್ಲ, ಮುಕ್ತಿಯೂ ಅಲ್ಲ. ಯಾವುದೇ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಉಚಿತ ಸಹಾಯಾವಣಿ ಲಭ್ಯವಿದೆ.



Source link

Leave a Reply

Your email address will not be published. Required fields are marked *