Headlines

Asia Cup 2025 UAE vs India ಟೀಂ ಇಂಡಿಯಾ ದಾಳಿಗೆ ಹೇಳ ಹೆಸರಿಲ್ಲದಂತಾದ ಯುಎಐ, ಕೇವಲ 57 ರನ್‌ಗೆ ಆಲೌಟ್ | Asia Cup 2025 Team India Restrict Uae By 57 Runs Get Easy Target

ಏಷ್ಯಾಕಪ್ ಟೂರ್ನಿ ಭಾರತದ ಮೊದಲ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದೆ. ದುಬೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಯುಎಐ ಕೇವಲ 57 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಭಾರತ ಸುಲಭ ಟಾರ್ಗೆಟ್ ಪಡೆದಿದೆ.

ದುಬೈ (ಸೆ.10) ಏಷ್ಯಾಕಪ್ ಟೂರ್ನಿ ಟೂರ್ನಿಯ ಎರಡನೇ ದಿನ ಭಾರತ ಹಾಗೂ ಯುಎಐ ಮುಖಾಮಖಿಯಾಗಿದೆ. ಟೀಂ ಇಂಡಿಯಾ ಎದುರು ಯುಎಐ ದುರ್ಬಲ ತಂಡ. ಆದರೂ ದಿಟ್ಟ ಹೋರಾಟ ನೀಡುವ ವಿಶ್ವಾಸದೊಂದಿಗೆ ಯುಎಐ ತಂಡ ಕಣಕ್ಕಿಳಿದಿತ್ತು. ಟೀಂ ಇಂಡಿಯಾ ದಾಳಿಗೆ ಕಂಗೆಟ್ಟ ಯುಎಐ ಕೇವಲ 57 ರನ್‌ಗೆ ಆಲೌಟ್ ಆಗಿದೆ. ಅಲಿಶಾನ್ ಶರಾಫು ಸಿಡಿಸಿದ 22 ರನ್ ಹೊರತುಪಡಿಸಿದರೆ ಇನ್ನುಳಿದ ಎಲ್ಲಾ ಬ್ಯಾಟರ್ ರನ್ ಗಣಿಸಲು ತಿಣುಕಾಡಿ ಪೆವಿಲಿಯನ್ ಸೇರಿಕೊಂಡರು. 13.1 ಓವರ್‌ನಲ್ಲಿ ಯುಎಐ 57 ರನ್‌ಗೆ ಆಲೌಟ್ ಆಯಿತು.

ಟಾಸ್ ಗೆದ್ದ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ

ಏಷ್ಯಾಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ ಟಾಸ್ ಗೆದ್ದಿತ್ತು. ಯುಎಐ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದ ಸೂರ್ಯಕುಮಾರ್ ಯಾದವ್ ನಿರ್ಧಾರ ಸರಿಯಾಗಿತ್ತು. ನಾಯಕ ಮೊಹಮ್ಮದ್ ವಾಸೀಮ್ ಹಾಗೂ ಅಲಿಶನ್ ಶರಾಫು ಆರಂಭಿಕರಾಗಿ ಕಣಕ್ಕಿಳಿದಿದ್ದರು. ಈ ಜೋಡಿ ಉತ್ತಮ ಆರಂಭ ನೀಡಿತ್ತು. ಆದರೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ. ಮೊದಲ ವಿಕೆಟ್‌ಗೆ ಈ ಜೋಡಿ 26 ರನ್ ಜೊತೆಯಾಟ ನೀಡಿತ್ತು. 17 ಎಸೆತದಲ್ಲಿ ಅಲಿಶನ್ 22 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ವಿಕೆಟ್ ಪತನ ಆರಂಭಗೊಂಡಿತು. ವಾಸೀಮ್ 19 ರನ್ ಸಿಡಿಸಿ ನಿರ್ಗಮಿಸಿದರು.

ಆರಂಭಿಕ ಇಬ್ಬರು ಮಾತ್ರ ಎರಂಡಂಕಿ ದಾಟಿದ್ದಾರೆ. ಇನ್ನುಳಿದ ಎಲ್ಲಾ ಬ್ಯಾಟರ್ 1,2,3ಕ್ಕೆ ತೃಪ್ತಿ ಪಟ್ಟುಕೊಂಡರು. ರನ್ ಗಣಿಸಲು, ವಿಕೆಟ್ ಉಳಿಸಲು ಕೊಳ್ಳಲು ಯುಎಐ ಪರದಾಡಿತು. ಇದರ ಪರಿಣಾಮ ಯುಎಐ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಯಿತು.

ಕುಲ್ದೀಪ್ ಯಾದವ್ 4 ವಿಕೆಟ್

ಭಾರತದ ಪರ ಅದ್ಬುತ ಬೌಲಿಂಗ್ ದಾಳಿ ಸಂಘಟಿಸಿದ ಕುಲ್ದೀಪ್ ಯಾದವ್ 4 ವಿಕೆಟ್ ಕಬಳಿಸಿದರು. ಇನ್ನು ಶಿವಂ ದುಬೆ 3, ವರುಣ್ ಚಕ್ರವರ್ತಿ 1, ಅಕ್ಸರ್ ಪಟೇಲ್ 1, ಜಸ್ಪ್ರೀತ್ ಬುಮ್ರಾ 1, ಹಾರ್ದಿಕ್ ಪಾಂಡ್ಯ 1 ವಿಕೆಟ್ ಕಬಳಿಸಿದರು.

Source link

Leave a Reply

Your email address will not be published. Required fields are marked *