ಕೆಜಿಎಫ್ ಸಿನಿಮಾ ಬಳಿಕ ಅವರ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಕುತೂಹಲ ಶುರುವಾಗಿದೆ. ಯಶ್ ಅವರು ಅಭಿಮಾನಿಗಳನ್ನು ಭೇಟಿ ಮಾಡಿಲ್ಲವಾದರೂ ‘ಟಾಕ್ಸಿಕ್’ ಮೂಲಕ ಜನರಿಗೆ ಸರ್ಪ್ರೈಸ್ ನೀಡಿದ್ದಾರೆ.

’ಟಾಕ್ಸಿಕ್’ ಟೀಸರ್ ಮತ್ತು ಕ್ಯಾರೆಕ್ಟರ್ ರಿವೀಲ್

ಈ ಬಾರಿಯ ಯಶ್ ಅವರ ಹುಟ್ಟುಹಬ್ಬಕ್ಕೆ ಟಾಕ್ಸಿಕ್ ಚಿತ್ರತಂಡದಿಂದ ಅತಿದೊಡ್ಡ ಉಡುಗೊರೆ ಸಿಕ್ಕಿದೆ. ರಯಾ ಪಾತ್ರದ ಪರಿಚಯ ಮಾಡಿಕೊಡಲಾಗಿದೆ.

ಇಂದು ಬೆಳಿಗ್ಗೆ 10:10ಕ್ಕೆ ಚಿತ್ರತಂಡವು ಯಶ್ ಅವರ ಪಾತ್ರವನ್ನು ಬಿಡುಗಡೆ ಮಾಡಿದೆ. ಯಶ್ ಅವರಂತೂ ಮಾಸ್, ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವು ಮಾರ್ಚ್ 19, 2026 ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.

ಈ ಸಿನಿಮಾವಂತೂ ಪಕ್ಕಾ ಹಾಲಿವುಡ್ ಸಿನಿಮಾ ಥರ ಕಾಣಿಸಿದೆ, ಅದರಲ್ಲಿಯೂ ಯಶ್ ಅವರು ಸಿಕ್ಸ್ ಪ್ಯಾಕ್‌ನಲ್ಲಿ ಭರ್ಜರಿಯಾಗಿ ಕಾಣಿಸಿಕೊಂಡಿದ್ದಾರೆ. ರಯಾ ಪಾತ್ರದಲ್ಲಿ ಅವರು ರೌಡಿಗಳನ್ನು ಹೊಡೆಯುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಡ್ಯಾಡಿ ಈಸ್ ಹೋಮ್ ಎಂದು ಅವರು ಒಂದೇ ಒಂದು ಡೈಲಾಗ್ ಹೊಡೆದಿದ್ದಾರೆ.

ಯಶ್ ಪ್ರಸ್ತುತ ಮುಂಬೈನಲ್ಲಿ ‘ಟಾಕ್ಸಿಕ್’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಮತ್ತು ಚಿತ್ರೀಕರಣದ ಕೆಲಸಗಳಲ್ಲಿ ಹಗಲಿರುಳು ಬ್ಯುಸಿಯಾಗಿದ್ದಾರೆ. ಈ ಕಾರಣದಿಂದ ಅವರು ಬೆಂಗಳೂರಿನಲ್ಲಿ ಅಭಿಮಾನಿಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಈಗಾಗಲೇ ಅಭಿಮಾನಿಗಳಿಗೆ ಪತ್ರ ಬರೆದಿರುವ ಯಶ್, "ನಿಮ್ಮನ್ನು ಭೇಟಿಯಾಗಲು ನಾನು ಕೂಡ ಕಾತರನಾಗಿದ್ದೇನೆ. ಆದರೆ ಮಾರ್ಚ್ 19ಕ್ಕೆ ಸಿನಿಮಾ ಸಿದ್ಧಪಡಿಸುವ ಜವಾಬ್ದಾರಿ ನನ್ನ ಮೇಲಿದೆ. ಶೀಘ್ರದಲ್ಲೇ ದೊಡ್ಡ ಮಟ್ಟದಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ" ಎಂದು ಮನವಿ ಮಾಡಿದ್ದಾರೆ.

Source link
Yash Toxic Teaser: ಹಾಲಿವುಡ್ ರೇಂಜ್, ರಯಾ ಆಗಿ ಅಬ್ಬರಿಸಿದ ರಾಕಿಂಗ್ ಸ್ಟಾರ್ ಯಶ್; ಏನ್ರೋ ಇದು ಟೀಸರ್!