Headlines

ವಿಧಾನಸೌಧಕ್ಕೆ ಬಂದ ಯುವಕನ ಬ್ಯಾಗಲ್ಲಿ ₹6 ಲಕ್ಷ ಪತ್ತೆ! ಕಂತೆ ಕಂತೆ ಹಣದೊಂದಿಗೆ ಶಾಸಕರನ್ನ ನೋಡಲು ಬಂದಿದ್ದೇಕೆ? | Rs 6 Lakh Found In Youth S Bag At Vidhana Soudha Entrance Police Interrogate Suspect Rav

ವಿಧಾನಸೌಧದ ಕೆಂಗಲ್ ಗೇಟ್ ಬಳಿ ಭದ್ರತಾ ತಪಾಸಣೆ ವೇಳೆ ಇಂಡಿ ಮೂಲದ ವ್ಯಕ್ತಿಯೊಬ್ಬನ ಬ್ಯಾಗಿನಲ್ಲಿ ₹6 ಲಕ್ಷ ನಗದು ಪತ್ತೆಯಾಗಿದೆ. ಶಾಸಕರ ಲೆಟರ್ ಹೆಡ್ ಪಡೆಯಲು ಹಾಗೂ ಸಂಬಂಧಿಕರ ಆಸ್ಪತ್ರೆ ಬಿಲ್ ಪಾವತಿಸಲು ಹಣ ತಂದಿದ್ದಾಗಿ ಹೇಳಿಕೆ ನೀಡಿದ ಆತನನ್ನು, ಪೊಲೀಸರು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ.

ಬೆಂಗಳೂರು (ಮಾ.26): ವಿಧಾನಸೌಧ ಭದ್ರತಾ ಸಿಬ್ಬಂದಿ ತಪಾಸಣೆ ವೇಳೆ ವ್ಯಕ್ತಿಯೊಬ್ಬನ ಬ್ಯಾಗಿನಲ್ಲಿ ₹6 ಲಕ್ಷ ನಗದು ಪತ್ತೆ ಆಗಿದ್ದು, ಪೊಲೀಸರು ಆತನನ್ನು ವಿಧಾನಸೌಧದ ಒಳಗೆ ಬಿಡಲು ನಿರಾಕರಿಸಿದ ಘಟನೆ ನಡೆದಿದೆ.

ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಕೆಂಗಲ್ ಗೇಟ್ ಮೂಲಕ ಇಂಡಿ ಮೂಲದ ವ್ಯಕ್ತಿಯೊಬ್ಬ ವಿಧಾನಸೌಧ ಪ್ರವೇಶಿಸುವಾಗ ಪೊಲೀಸರು ಆತನ ಬ್ಯಾಗ್ ತಪಾಸಣೆ ನಡೆಸಿದಾಗ ₹6 ಲಕ್ಷ ಮೊತ್ತದ ಹಣ ಪತ್ತೆಯಾಗಿದೆ.

ಇಂಡಿ ಕ್ಷೇತ್ರದ ಶಾಸಕರ ಲೆಟರ್ ಹೆಡ್ ಪಡೆಯಲು ಇಲ್ಲಿಗೆ ಬಂದಿರುವುದಾಗಿ ಆತ ಹೇಳಿದ್ದಾನೆ. ಬ್ಯಾಗ್‌ನಲ್ಲಿ ₹6 ಲಕ್ಷ ಹಣವನ್ನು ಇಟ್ಟುಕೊಂಡಿದ್ದ. ಇಷ್ಟು ದೊಡ್ಡ ಮೊತ್ತದ ಹಣದೊಂದಿಗೆ ಒಳಗೆ ಹೋಗುವಂತಿಲ್ಲ, ವಾಪಸ್ ಹೋಗಿ ಎಂದು ಪೊಲೀಸರು ಸೂಚಿಸಿದರೂ ಶಾಸಕರನ್ನು ನೋಡಲೇಬೇಕು ಎಂದು ಯುವಕ ಹಟ ಹಿಡಿದಿದ್ದ ಎನ್ನಲಾಗಿದೆ. ನಂತರ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಪೊಲೀಸರ ವಿಚಾರಣೆ ವೇಳೆ ಆತ ನಮ್ಮ ಸಂಬಂಧಿಕರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಆಸ್ಪತ್ರೆಯ ಬಿಲ್‌ ಪಾವತಿಸಲು ಇಷ್ಟೊಂದು ಹಣ ತಂದಿದ್ದೇನೆ ಎಂದು ತಿಳಿಸಿದ್ದಾನೆ. ಇದರ ಜತೆಗೆ ಶಾಸಕರ ಬಳಿ ಕೆಲಸವಿದ್ದಿದ್ದರಿಂದ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾನೆ. ವಿಚಾರಣೆ ನಡೆಸಿದ ನಂತರ ಆತನನ್ನು ಬಿಟ್ಟುಕಳುಹಿಸಲಾಯಿತು. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Source link

Leave a Reply

Your email address will not be published. Required fields are marked *