ಎರಡೂ ಕ್ಷೇತ್ರಗಳನ್ನ ನಾವೇ ಗೆಲ್ತೀವಿ, ,ಯತ್ನಾಳ್ ವಿರುದ್ಧ ಎನ್‌ಎಸ್ ಬೋಸರಾಜು ಕಿಡಿ

ಎರಡೂ ಕ್ಷೇತ್ರಗಳನ್ನ ನಾವೇ ಗೆಲ್ತೀವಿ, ,ಯತ್ನಾಳ್ ವಿರುದ್ಧ ಎನ್‌ಎಸ್ ಬೋಸರಾಜು ಕಿಡಿ

ಎರಡೂ ಕ್ಷೇತ್ರಗಳನ್ನ ನಾವೇ ಗೆಲ್ತೀವಿ, ,ಯತ್ನಾಳ್ ವಿರುದ್ಧ ಎನ್‌ಎಸ್ ಬೋಸರಾಜು ಕಿಡಿ

ರಾಯಚೂರು (ಏ.5): ದಾವಣಗೆರೆ, ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ. ನಮ್ಮ ಮೇನ್ ಇಂಪ್ಯಾಕ್ಟ್ ಮಹಿಳೆಯರು ಇದ್ದಾರೆ ಎಂದು ಸಚಿವ ಎನ್‌ಎಸ್ ಬೋಸರಾಜು ವಿಶ್ವಾಸ ವ್ಯಕ್ತಪಡಿಸಿದರು.

ಇಂದು ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು, ಹಿಂದೆ ಮಂಡ್ಯ, ಶಿಗ್ಗಾಂವಿ ಉಪಚುನಾವಣೆಯಲ್ಲಿ ನಮಗೇ ಗೆಲುವು ಸಿಕ್ತು. ಮಹಿಳೆಯರ ಗ್ಯಾರಂಟಿ ಯೋಜನೆ ನಮಗೆ ರಿಜಲ್ಟ್ ಕೊಟ್ಟಿತ್ತು. ಈಗಲೂ ನಾವು ನೋಡಿದಂತೆ ದಾವಣಗೆರೆ, ಬಾಗಲಕೋಟೆ ಎರಡೂ ಕ್ಷೇತ್ರವನ್ನೂ ನಾವು ಗೆಲ್ಲಲಿದ್ದೇವೆ ಎಂದರು.

ಮಹಿಳೆಯರು ಬಹಳ ಉತ್ಸಾಹದಲ್ಲಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ನಮಗೆ ಬಹಳ ಅನುಕೂಲ ಆಗಿದೆ ಎಂದು ಮಾತನಾಡುತ್ತಿದ್ದಾರೆ.ಗ್ಯಾರೆಂಟಿ ಯೋಜನೆಗಳು ನಮಗೆ ಶ್ರೀರಕ್ಷವಲ್ಲ; ಮಹಿಳೆಯರ ಹೆಚ್ಚಿನ ಓಟು ಕಾಂಗ್ರೆಸ್ ಬರಲು ಗ್ಯಾರೆಂಟಿಗಳು ಅನುಕೂಲವಾಗಿವೆ. ನಮ್ಮ ಪಾರ್ಟಿ ಕಾರ್ಯಕರ್ತರು, ಅಲ್ಲದೇ ‌ನಾವು ಮೂರು ವರ್ಷಗಳ ಕಾಲ ಕೊಟ್ಟ ಗ್ಯಾರೆಂಟಿ ಯೋಜನೆಗಳು ನಮಗೆ ಲಾಭವಾಗಲಿದೆ ಎಂದರು.

ಗ್ಯಾರಂಟಿ ಬಗ್ಗೆ ಬಿಜೆಪಿಯವ್ರು ಅಪಪ್ರಚಾರ

ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಅಪಪ್ರಚಾರ ಮಾಡುತ್ತ ಬಂದಿದೆ. ಇದು ಈ ಎಲೆಕ್ಷನ್‌ನಲ್ಲೂ ಅಪಪ್ರಚಾರ ಮಾಡಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಸರಕಾರಿ ಖಜಾನೆ ಖಾಲಿ ಆಗುತ್ತೆ ಆಮೇಲೆ ಗ್ಯಾರಂಟಿ ಇರಲ್ಲ, ಗೌರಮೆಂಟ್ ಖಜಾನೆ ಲೂಟಿ ಆಗುತ್ತೆ ಅಂತ ಬಿಜೆಪಿಯವರು ಅಪಪ್ರಚಾರ ಮಾಡಿದ್ರು ಆದ್ರೆ ಸರ್ಕಾರ ಬಂದು ಇಷ್ಟು ವರ್ಶದಲ್ಲಿ ಏನಾಯ್ತ? ಏನೂ ಆಗಿಲ್ಲ. ನಾವು ಮೂರು ವರ್ಷದಲ್ಲಿ 1ಲಕ್ಷ 23 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ಇಲ್ಲಿ ಭ್ರಷ್ಟಾಚಾರ ಇಲ್ಲ ಏನು ಇಲ್ಲ. ನೇರವಾಗಿ ಫಲಾನುಭವಿಗಳ ಖಾತೆಗೆ ಹೋಗುತ್ತೆ. ಗೃಹ ಜ್ಯೋತಿ ಯೋಜನೆದ್ದು

200 ಯೂನಿಟ್ ಜಿಯೋ ಬಿಲ್ ಕೊಡುತ್ತಿದ್ದೇವೆ. 2 ಸಾವಿರ ರೂ. ಅವರ ಅಕೌಂಟ್ ಗೆ ಹೋಗುತ್ತೆ. ಅಕ್ಕಿ ಅವರ ಕೈಗೆ ಬರುತ್ತಿದೆ. ಮಹಿಳೆಯರುಬಸ್ ನಲ್ಲಿ ಆರಾಮ ಆಗಿ ಓಡಾಟ ಮಾಡುತ್ತಿದ್ದಾರೆ ಎಂದರು.

Source link

Leave a Reply

Your email address will not be published. Required fields are marked *