Headlines

ಐಫೋನ್ ಪ್ರಿಯರಿಗೆ ಶಾಕ್: ಭಾರತದಲ್ಲಿ ಭಾರೀ ದುಬಾರಿಯಾಗಲಿವೆ ಹಳೆಯ ಐಫೋನ್ ಮಾಡೆಲ್‌ಗಳು! ಕಾರಣವೇನು? | Older Iphone 15 16 Price Hike India Apple Retail Incentive Withdrawal San

ಐಫೋನ್ ಪ್ರಿಯರಿಗೆ ಶಾಕ್: ಭಾರತದಲ್ಲಿ ಭಾರೀ ದುಬಾರಿಯಾಗಲಿವೆ ಹಳೆಯ ಐಫೋನ್ ಮಾಡೆಲ್‌ಗಳು! ಕಾರಣವೇನು? | Older Iphone 15 16 Price Hike India Apple Retail Incentive Withdrawal San



ಐಫೋನ್ ಪ್ರಿಯರಿಗೆ ಶಾಕ್: ಭಾರತದಲ್ಲಿ ಭಾರೀ ದುಬಾರಿಯಾಗಲಿವೆ ಹಳೆಯ ಐಫೋನ್ ಮಾಡೆಲ್‌ಗಳು! ಕಾರಣವೇನು? | Older Iphone 15 16 Price Hike India Apple Retail Incentive Withdrawal San

ಭಾರತದಲ್ಲಿ ಹಳೆಯ ಐಫೋನ್ ಮಾಡೆಲ್‌ಗಳ ಬೆಲೆ ₹5,000 ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಆಪಲ್ ಸಂಸ್ಥೆಯು ರಿಟೇಲರ್‌ಗಳಿಗೆ ನೀಡುತ್ತಿದ್ದ ‘ಡಿಮ್ಯಾಂಡ್ ಜನರೇಷನ್’ ಪ್ರೋತ್ಸಾಹ ಧನವನ್ನು ಹಿಂತೆಗೆದುಕೊಳ್ಳುತ್ತಿರುವುದೇ ಇದಕ್ಕೆ ಕಾರಣ. 

ನವದೆಹಲಿ (ಮಾ.28): ನೀವು ಐಫೋನ್ 15 ಅಥವಾ ಐಫೋನ್ 16 ಖರೀದಿಸಲು ಯೋಜಿಸುತ್ತಿದ್ದೀರಾ? ಹಾಗಿದ್ದರೆ ತಡಮಾಡಬೇಡಿ. ಏಕೆಂದರೆ ಭಾರತದಲ್ಲಿ ಹಳೆಯ ಐಫೋನ್ ಮಾಡೆಲ್‌ಗಳ ಬೆಲೆ ಸುಮಾರು ₹5,000 ರವರೆಗೆ ಏರಿಕೆಯಾಗಲಿದೆ. ಆಪಲ್ ಸಂಸ್ಥೆಯು ರಿಟೇಲ್‌ ವ್ಯಾಪಾರಿಗಳಿಗೆ ನೀಡುತ್ತಿದ್ದ ಪ್ರಮುಖ ಪ್ರೋತ್ಸಾಹ ಧನವನ್ನು (Incentive Support) ಹಿಂತೆಗೆದುಕೊಳ್ಳಲು ನಿರ್ಧರಿಸಿರುವುದೇ ಇದಕ್ಕೆ ಮುಖ್ಯ ಕಾರಣ.

ಆಪಲ್ ಸಂಸ್ಥೆಯು ಈ ವಾರದಿಂದ ರೀಟೇಲರ್‌ಗಳಿಗೆ ಮತ್ತು ಚಾನೆಲ್ ಪಾರ್ಟ್‌ನರ್‌ಗಳಿಗೆ ನೀಡುತ್ತಿದ್ದ ‘ಡಿಮ್ಯಾಂಡ್ ಜನರೇಷನ್’ (DG) ಬೆಂಬಲವನ್ನು ಸ್ಥಗಿತಗೊಳಿಸುತ್ತಿದೆ. ಇದುವರೆಗೆ ಈ ಡಿಜಿ ಬೆಂಬಲದ ಮೂಲಕ ವ್ಯಾಪಾರಿಗಳು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಫೋನ್ ನೀಡಲು ಸಾಧ್ಯವಾಗುತ್ತಿತ್ತು. ಈಗ ಈ ಸಬ್ಸಿಡಿ ನಿಲ್ಲುತ್ತಿರುವುದರಿಂದ, ಐಫೋನ್ 15 ಮತ್ತು ಐಫೋನ್ 16 ಮಾಡೆಲ್‌ಗಳ ಬೆಲೆ ₹5,000 ಹೆಚ್ಚಾಗಲಿದೆ.

ಈಗಾಗಲೇ ಆಪಲ್ ತನ್ನ ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ₹6,000 ರಿಂದ ₹1,000 ಕ್ಕೆ ಇಳಿಸಿತ್ತು. ಇದರಿಂದ ಐಫೋನ್ 17 ಸರಣಿಯು ದುಬಾರಿಯಾಗಿತ್ತು. ಈಗ ಡಿಜಿ ಬೆಂಬಲದ ಹಿಂತೆಗೆತವು ಹಳೆಯ ಮಾಡೆಲ್‌ಗಳ ಮೇಲೂ ಬೆಲೆ ಏರಿಕೆಯ ಬರೆ ಎಳೆದಿದೆ.

ಗ್ರಾಹಕರ ಮೇಲೆ ಏನು ಪರಿಣಾಮ?

ಮಾರುಕಟ್ಟೆಯ ಮೂಲಗಳ ಪ್ರಕಾರ, ಐಫೋನ್ ಮಾಡೆಲ್‌ಗಳ ಅಧಿಕೃತ ಎಂಆರ್‌ಪಿ (MRP) ಬದಲಾಗುವುದಿಲ್ಲ. ಆದರೆ, ಈವರೆಗೆ ಚಿಲ್ಲರೆ ವ್ಯಾಪಾರಿಗಳು ನೀಡುತ್ತಿದ್ದ ರಿಯಾಯಿತಿಗಳು ಇನ್ನು ಮುಂದೆ ಇರುವುದಿಲ್ಲ. ಅಂದರೆ, ಗ್ರಾಹಕರು ಫೋನ್ ಖರೀದಿಸುವಾಗ ಜೇಬಿನಿಂದ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ. “ಇಂದೇ ಈ ರಿಯಾಯಿತಿ ದರದ ಕೊನೆಯ ದಿನವಾಗುವ ಸಾಧ್ಯತೆಯಿದೆ. ಒಮ್ಮೆ ಈ ಸಪೋರ್ಟ್ ನಿಂತರೆ, ಗ್ರಾಹಕರು ಅದೇ ಫೋನ್‌ಗೆ ₹5,000 ಹೆಚ್ಚು ತೆರಬೇಕಾಗುತ್ತದೆ,” ಎಂದು ರೀಟೇಲರ್‌ ಒಬ್ಬರು ಮಾಹಿತಿ ನೀಡಿದ್ದಾರೆ.

ಯಾವ ಮಾಡೆಲ್‌ಗಳಿಗೆ ಅನ್ವಯ?

ಈ ಬೆಲೆ ಏರಿಕೆಯು ಪ್ರಮುಖವಾಗಿ ಐಫೋನ್ 15 ಮತ್ತು ಐಫೋನ್ 16 ಸರಣಿಗಳಿಗೆ ಅನ್ವಯಿಸುತ್ತದೆ. ಇತ್ತೀಚಿನ ಐಫೋನ್ 17 ಸರಣಿಯ ಮೇಲೆ ಈ ಡಿಜಿ ಸಪೋರ್ಟ್ ಹಿಂತೆಗೆತದ ಪ್ರಭಾವ ಇರುವುದಿಲ್ಲ.

ಕೇವಲ ಆಪಲ್ ಮಾತ್ರವಲ್ಲ, ಸ್ಯಾಮ್‌ಸಂಗ್, ಒಪ್ಪೋ, ವಿವೋ, ರಿಯಲ್‌ಮಿ, ಶಿಯೋಮಿ ಮತ್ತು ಮೋಟೋರೋಲಾದಂತಹ ಆಂಡ್ರಾಯ್ಡ್ ಬ್ರ್ಯಾಂಡ್‌ಗಳು ಕೂಡ ಕಳೆದ ನವೆಂಬರ್‌ನಿಂದ ಬೆಲೆಗಳನ್ನು ಹೆಚ್ಚಿಸುತ್ತಿವೆ. ಮೆಮೊರಿ ಮತ್ತು ಸ್ಟೋರೇಜ್ ಘಟಕಗಳ ಬೆಲೆ ಗಗನಕ್ಕೇರಿರುವುದು ಈ ಏರಿಕೆಗೆ ಮೂಲ ಕಾರಣವಾಗಿದೆ.

ಮುಂದಿನ ದಿನಗಳು ಹೇಗಿರಲಿವೆ?

ಜಾಗತಿಕ ಪೂರೈಕೆ ಕೊರತೆ ಮತ್ತು ರೂಪಾಯಿ ಮೌಲ್ಯದ ಏರಿಳಿತದಿಂದಾಗಿ 2026ರ ವರ್ಷವು ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಸವಾಲಾಗಲಿದೆ. ಐಡಿಸಿ (IDC) ವರದಿಯ ಪ್ರಕಾರ, ಈ ವರ್ಷ ಸ್ಮಾರ್ಟ್‌ಫೋನ್ ಸಾಗಣೆಯಲ್ಲಿ ಶೇ. 12 ರಿಂದ 15 ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಆದರೆ ಆಂಡ್ರಾಯ್ಡ್ ಫೋನ್‌ಗಳಿಗೆ ಹೋಲಿಸಿದರೆ ಐಫೋನ್ ಮಾರುಕಟ್ಟೆ ಸ್ಥಿರವಾಗಿರಲಿದೆ ಎಂದು ಅಂದಾಜಿಸಲಾಗಿದೆ.



Source link

Leave a Reply

Your email address will not be published. Required fields are marked *