Chhatrapati Shivaji Maharaj ಹಿಂದೂ ಧರ್ಮದ ರಕ್ಷಕ ಛತ್ರಪತಿ ಶಿವಾಜಿ: ಹಾಡಿ ಹೊಗಳಿದ ಕಾಂಗ್ರೆಸ್ ಶಾಸಕ | Congress Mla Shivaganga Praises Shivaji Maharaj As Protector Of Hindu Dharma

Chhatrapati Shivaji Maharaj ಹಿಂದೂ ಧರ್ಮದ ರಕ್ಷಕ ಛತ್ರಪತಿ ಶಿವಾಜಿ: ಹಾಡಿ ಹೊಗಳಿದ ಕಾಂಗ್ರೆಸ್ ಶಾಸಕ | Congress Mla Shivaganga Praises Shivaji Maharaj As Protector Of Hindu Dharma


ಚನ್ನಗಿರಿಯಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜನ್ಮದಿನಾಚರಣೆಯಲ್ಲಿ ಶಾಸಕ ಬಸವರಾಜು ವಿ. ಶಿವಗಂಗಾ ಭಾಗವಹಿಸಿದರು. ಶಿವಾಜಿಯವರ ಹೋರಾಟವನ್ನು ಸ್ಮರಿಸಿದ ಅವರು, ತಾಲೂಕಿನ ಹೊದಿಗೆರೆಯಲ್ಲಿರುವ ಷಹಜಿ ಸಮಾಧಿ ಅಭಿವೃದ್ಧಿಗೆ ₹5.25 ಕೋಟಿ ಅನುದಾನ ತಂದಿರುವುದಾಗಿ ತಿಳಿಸಿದರು.

ಚನ್ನಗಿರಿ (ಫೆ.20): ಹಿಂದೂ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರು ದೇಶದಲ್ಲಿ ಹುಟ್ಟದೇ ಇದ್ದಿದ್ದರೆ ಭಾರತದ ಹಿಂದೂಗಳ ಸ್ಥಿತಿ ಅತ್ಯಂತ ಶೋಚನೀಯವಾಗಿ ಇರುತ್ತಿತ್ತು. ಅವರು ಹಿಂದೂ ಧರ್ಮದ ಉಳಿವಿಗಾಗಿ ಹೋರಾಟ ಮಾಡಿದ ಮಹಾನ್ ಚೇತನ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.

ಗುರುವಾರ ಪಟ್ಟಣದ ಮರಾಠ ಬೀದಿಯಲ್ಲಿ ತಾಲೂಕು ಕ್ಷತ್ರಿಯ ಮರಾಠ ಸಮಾಜಜದಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜನ್ಮದಿನಾಚರಣೆ ಸಮಾರಂಭ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಶಿವಾಜಿ ಮಹಾರಾಜರ ತಂದೆ ಷಹಜಿ ಅವರ ಸಮಾಧಿ ನಮ್ಮ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿರುವುದು ನಮ್ಮಗಳ ಪುಣ್ಯವಾಗಿದೆ. ಅಂತಹ ಮಹಾನ್ ಶೂರರು ನಡೆದಾಡಿದ ಪ್ರತಿಫಲವಾಗಿ ಚನ್ನಗಿರಿ ತಾಲೂಕು ರಾಜ್ಯ, ದೇಶದಲ್ಲಿಯೇ ಹೆಸರು ಮಾಡಿದೆ ಎಂದರು.

ನಾನು ಶಾಸಕನಾದ ಮೇಲೆ ಹೊದಿಗೆರೆ ಗ್ರಾಮದಲ್ಲಿರುವ ಷಹಜಿ ಅವರ ಸ್ಮಾರಕ ಅಭಿವೃದ್ಧಿಗೆ ₹5.25 ಕೋಟಿ ಅನುದಾನ ತಂದಿದ್ದೇನೆ. ಈ ಅನುದಾನದಲ್ಲಿ ಷಹಜಿ ಮಹಾರಾಜರ ಸಮಾಧಿ ಅಭಿವೃದ್ಧಿಗೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಮರಾಠ ಸಮಾಜದವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಆದರೂ, ನಿಮ್ಮಗಳಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಫಿಸಿಕೊಡುವಂತಹ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ನಿಮ್ಮ ಸಮಾಜದಲ್ಲಿರುವ ಒಗ್ಗಟ್ಟು ಇತರೆ ಸಮಾಜದವರಿಗೂ ಬರಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಮಹರಾಷ್ಟ್ರದ ಜೈಹಿಂದ್ ಫೌಂಡೇಷನ್ ಅಧ್ಯಕ್ಷ ಸಂದೀಪ್ ಮಾನೆ, ಹನುಮಂತ್ ಮಾಂಡ್ರೆ, ಡಾ.ನಿತಿನ್ ಕದಂಬ್, ಮನಿಷ್ ಅರಮನೆ, ಹೇಮಲತಾ ಪಠಕರ್, ತಾಲೂಕು ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಎಂ.ಬಿ. ಶಿವಾಜಿ ರಾವ್, ವಕೀಲ ವೈ.ಎಂ. ರಾಮಚಂದ್ರ ರಾವ್, ಎಂ.ಎಂ. ಮಂಜುನಾಥ್, ಪ್ರವೀಣ್ ಬೋಸ್ಲೆ, ಬಿ.ಎಂ. ಕುಬೇಂದ್ರೋಜಿ ರಾವ್, ಲತಾ ಕಾಳೆ ಮತ್ತಿತರರು ಹಾಜರಿದ್ದರು.

YouTube video player



Source link

Leave a Reply

Your email address will not be published. Required fields are marked *