Bike stunt goes wrong ಗರ್ಲ್‌ಫ್ರೆಂಡ್ ಜೊತೆ ಬೈಕ್‌ನಲ್ಲಿ ವ್ಹೀಲಿಂಗ್ ಸ್ಟಂಟ್, ಗೆಳತಿ ಖಾಸಗಿ ಅಂಗಕ್ಕೆ ಗಂಭೀರ ಗಾಯ | Female Friend Private Part Injured After Male Friend Bike Wheeling Stunt Mumbai

Bike stunt goes wrong ಗರ್ಲ್‌ಫ್ರೆಂಡ್ ಜೊತೆ ಬೈಕ್‌ನಲ್ಲಿ ವ್ಹೀಲಿಂಗ್ ಸ್ಟಂಟ್, ಗೆಳತಿ ಖಾಸಗಿ ಅಂಗಕ್ಕೆ ಗಂಭೀರ ಗಾಯ | Female Friend Private Part Injured After Male Friend Bike Wheeling Stunt Mumbai



Bike stunt goes wrong ಗರ್ಲ್‌ಫ್ರೆಂಡ್ ಜೊತೆ ಬೈಕ್‌ನಲ್ಲಿ ವ್ಹೀಲಿಂಗ್ ಸ್ಟಂಟ್, ಗೆಳತಿ ಖಾಸಗಿ ಅಂಗಕ್ಕೆ ಗಂಭೀರ ಗಾಯ | Female Friend Private Part Injured After Male Friend Bike Wheeling Stunt Mumbai

ಗರ್ಲ್‌ಫ್ರೆಂಡ್ ಜೊತೆ ಬೈಕ್‌ನಲ್ಲಿ ವ್ಹೀಲಿಂಗ್ ಸ್ಟಂಟ್, ಕೊಂಚ ಡಿಫ್ರೆಂಟ್ ಇರ್ಲಿ ಎಂದು ಗೆಳತಿ ಕೂರಿಸಿ ಸ್ಟಂಟ್ ಮಾಡಿದ್ದಾನೆ. ಆದರೆ ದುರಂತದಲ್ಲಿ ಗೆಳತಿ ಚಕ್ರದಡಿಗೆ ಸಿಲುಕಿ ಆಕೆಯ ಖಾಸಗಿ ಅಂಗ ಗಂಭೀರವಾಗಿ ಗಾಯಗೊಂಡಿದೆ. 

ಮುಂಬೈ (ಫೆ.16) ಅದೆಷ್ಟೇ ಘಟನೆಗಳು ನಡೆದರೂ, ಪೊಲೀಸರು ದುಬಾರಿ ದಂಡ ಹಾಕಿದರೂ ಬೈಕ್ ಸ್ಟಂಟ್ ಮಾಡುವ ಖಯಾಲಿ ಕಡಿಮೆಯಾಗಿಲ್ಲ. ನಗರ ಸೇರಿದಂತೆ ಎಲ್ಲೆಡೆ ಸಾರ್ವಜನಿಕ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತಾ ಸ್ಟಂಟ್ ಮಾಡುವ ಹಲವರು ಇದ್ದೇ ಇರುತ್ತಾರೆ. ಹೀಗೆ ಇಲ್ಲೊಬ್ಬ ಹುಡುಗರೇ ವ್ಹೀಲಿಂಗ್ ಮಾಡಿದರೆ ಭಿನ್ನತೆ ಎಲ್ಲಿ? ಹೀಗಾಗಿ ಗರ್ಲ್‌ಫ್ರೆಂಡ್ ಕೂರಿಸಿ ಸ್ಟಂಟ್ ಮಾಡಲು ನಿರ್ಧರಿಸಿದ್ದಾನೆ. ಗೆಳತಿಯನ್ನು ಬೈಕ್‌ನಲ್ಲಿ ಕೂರಿಸಿ ಬೈಕ್ ವ್ಹೀಲಿಂಗ್ ಆರಂಭಿಸಿದಂತೆ ಹಿಂಬದಿ ಕುಳಿತಿದ್ದ ಗೆಳತಿ ಬೈಕ್‌ನಿಂದ ಸ್ಲಿಪ್ ಆಗಿದ್ದಾಳೆ. ಸ್ಪೋರ್ಟ್ಸ್ ಬೈಕ್ ಆದ ಕಾರಣ ಗೆಳತಿ ಬೈಕ್ ಸೊಂಟ ಹಾಗೂ ಕೆಳಭಾಗ ಚಕ್ರದಡಿಗೆ ಸಿಲುಕಿದೆ. ವೇಗವಾಗಿ ಚಲಿಸುತ್ತಿದ್ದ ಕಾರಣ ಗೆಳತಿಯ ಹಿಂಭಾಗದಿಂದ ಖಾಸಗಿ ಅಂಗದ ವರೆಗೆ ಚರ್ಮ ಕಿತ್ತು ಹೋಗಿ ಗಂಭೀರವಾಗಿ ಗಾಯಗೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ದಿಢೀರ್ ಸ್ಟಂಟ್ ಮಾಡಿದ ಗೆಳೆಯ

ಮುಂಬೈ ರಸ್ತೆಯಲ್ಲಿ ಗೆಳತಿಯನ್ನು ಕೂರಿಸಿಕೊಂಡು ಸಾಗಿದ ಈತ ವಿಡಿಯೋ ರೆಕಾರ್ಡ್ ಆರಂಭಿಸುತ್ತಿದ್ದಂತೆ ಬೈಕ್‌ನಲ್ಲಿ ವೀಲ್ಹಿಂಗ್ ಮಾಡಲು ನಿರ್ಧರಿಸಿ ಚಲಿಸುತ್ತಿದ್ದ ಬೈಕ್‌ನ್ನು ಹ್ಯಾಂಡಲ್ ಸಹಾಯದಿಂದ ಮೇಲಕ್ಕೆ ಎತ್ತಿದ್ದಾನೆ. ಆದರೆ ಇದರ ಯಾವುದೇ ಸೂಚನೆ ಹಿಂಬದಿ ಕುಳಿತ ಗೆಳತಿಗೆ ಇರಲಿಲ್ಲ. ಗೆಳತಿ ಎಲ್ಲರೂ ಬೈಕ್‌ನಲ್ಲಿ ಕುಳಿತುಕೊಳ್ಳುವಂತೆ ಸಹಜವಾಗಿ, ಆರಾಮವಾಗಿ ಕುಳಿತುಕೊಂಡಿದ್ದಾರೆ. ಆದರೆ ಗೆಳೆಯ ಏಕಾಏಕಿ ಬೈಕ್ ಮೇಲಕ್ಕೆತ್ತಿ ಸ್ಟಂಟ್ ಮಾಡುತ್ತಾನೆ ಅನ್ನೋ ಕಲ್ಪನೆ ಆಕೆಗೆ ಇರಲಿಲ್ಲ. ಇದು ಅವಘಡಕ್ಕೆ ಪ್ರಮುಖ ಕಾರಣವಾಗಿದೆ.

ಯುವತಿಗೆ ಗಂಭೀರ ಗಾಯ

ಬೈಕ್‌ನ ಮುಂಭಾಗ ಚಕ್ರಗಳು ಮೇಲಕ್ಕೆ ಏಳುತ್ತಿದ್ದಂತೆ ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಸ್ಲಿಪ್ ಆಗಿದ್ದಾಳೆ. ಸ್ಪೋರ್ಟ್ಸ್ ಬೈಕ್‌ನ ಸೀಟು ಹಾಗೂ ಹಿಂಬದಿ ಚಕ್ರದ ನಡುವೆ ಸಣ್ಣ ಗ್ಯಾಪ್ ಇರುತ್ತೆ. ಯುವತಿ ಸ್ಲಿಪ್ ಆಗಿ ಈ ಗ್ಯಾಪ್ ಒಳಗೆ ಸುಲಿಕಿದ್ದಾಳೆ. ಇತ್ತ ಬೈಕ್ ವೇಗವಾಗಿ ಚಲಿಸುತ್ತಿದ್ದ ಕಾರಣ ಯುುವತಿ ಹಿಂಭಾಗ ಹಾಗೂ ಖಾಸಗಿ ಅಂಗದ ಚರ್ಮಗಳು ಕಿತ್ತು ಹೋಗಿದೆ. ಯುವತಿ ಕಿರುಚಾಡುತ್ತಿದ್ದಂತೆ ಬೈಕ್ ನಿಲ್ಲಿಸಿದ್ದಾನೆ. ಅಷ್ಟರೊಳಗೆ ಕಾಲ ಮಿಂಚಿತ್ತು.

ಯುವತಿ ಖಾಸಗಿ ಅಂಗಗಳಿಗೆ ಗಾಯವಾಗಿರುವ ಕಾರಣ ನಡೆಯಲು, ಕುಳಿತುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಸ್ಥಳೀಯ ವರದಿಗಳ ಪ್ರಕಾರ ಯುವತಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಸ್ಟಂಟ್ ಮಾಡಲು ಹೋಗಿ ಅವಘಡಕ್ಕೆ ತುತ್ತಾಗಿದ್ದಾರೆ.

ನೆಟ್ಟಿಗರಿಂದ ಭಾರಿ ಆಕ್ರೋಶ

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಅಪಾಯಕಾರಿ ಸ್ಟಂಟ್ ಮಾಡುವಾಗ ಗೆಳತಿಯನ್ನು ಕೂರಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಅಪಾಯಕಾರಿ ಸ್ಟಂಟ್ ಮಾಡಿದ್ದೇ ತಪ್ಪು, ಅದರ ಜೊತೆಗೆ ಯುವತಿಯನ್ನು ಕೂರಿಸಿಕೊಂಡು ಸ್ಟಂಟ್ ಮಾಡುವುದು ಮತ್ತೊಂದು ತಪ್ಪು ಎಂದಿದ್ದಾರೆ. ಈ ಸ್ಟಂಟ್ ಮಾಡಿ ಬಿಲ್ಡಪ್ ತೆಗೆದುಕೊಳ್ಳಲು ಹೋದವನಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.



Source link

Leave a Reply

Your email address will not be published. Required fields are marked *