Headlines

Viral Video: ‘ನಾನು ಮದ್ವೆ ಆಗಿಲ್ಲ, ಆದ್ರೆ ನಮ್ಮಮ್ಮ ಆದ್ರು’; ಅಮ್ಮನ ಎರಡನೇ ಮದುವೆ ವಿಡಿಯೋ ಹಂಚಿಕೊಂಡ ಮಗಳು! | Daughter Shares Mothers Second Wedding Video In Emotional Post

Viral Video: ‘ನಾನು ಮದ್ವೆ ಆಗಿಲ್ಲ, ಆದ್ರೆ ನಮ್ಮಮ್ಮ ಆದ್ರು’; ಅಮ್ಮನ ಎರಡನೇ ಮದುವೆ ವಿಡಿಯೋ ಹಂಚಿಕೊಂಡ ಮಗಳು! | Daughter Shares Mothers Second Wedding Video In Emotional Post



Viral Video: ‘ನಾನು ಮದ್ವೆ ಆಗಿಲ್ಲ, ಆದ್ರೆ ನಮ್ಮಮ್ಮ ಆದ್ರು’; ಅಮ್ಮನ ಎರಡನೇ ಮದುವೆ ವಿಡಿಯೋ ಹಂಚಿಕೊಂಡ ಮಗಳು! | Daughter Shares Mothers Second Wedding Video In Emotional Post

ಪೂಜಾ ಭಡ್ನಾಗರ್ ಎಂಬ ಯುವತಿ ತನ್ನ ತಾಯಿಯ ಎರಡನೇ ಮದುವೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲ್ ಆಗಿದ್ದಾರೆ. ತಾಯಿಯ ಈ ಖುಷಿಯ ಕ್ಷಣಕ್ಕೆ ಮಗಳೇ ಸಾಕ್ಷಿಯಾಗಿದ್ದು, ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆಯೇ ಹರಿದುಬಂದಿದೆ.

ಸಾಮಾನ್ಯವಾಗಿ ನಮ್ಮ ಜೀವನದಲ್ಲಿ ಅತಿ ಮುಖ್ಯವಾದವರ ಮದುವೆಯನ್ನು ನಾವು ಸಖತ್ ಸಂಭ್ರಮದಿಂದ ಆಚರಿಸುತ್ತೇವೆ. ಆದರೆ, ಅದು ನಮ್ಮ ಅಪ್ಪ ಅಥವಾ ಅಮ್ಮನ ಮದುವೆಯಾಗಿದ್ದರೆ? ಈ ಪ್ರಶ್ನೆಗೆ ಉತ್ತರ ಹೇಳಲು ನಮ್ಮಲ್ಲಿ ಹಲವರು ಒಮ್ಮೆ ಹಿಂದೆ ಮುಂದೆ ನೋಡುತ್ತಾರೆ. ಆದರೆ, ಪೂಜಾ ಭಡ್ನಾಗರ್ ಎಂಬ ಯುವತಿ ತನ್ನ ತಾಯಿಯ ಎರಡನೇ ಮದುವೆಯ ವಿಡಿಯೋವನ್ನು ಹಂಚಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ‘ನಾನಿನ್ನೂ ಮದುವೆಯಾಗಿಲ್ಲ, ಆದರೆ ನನ್ನಮ್ಮ ಮತ್ತೆ ಆದರು’ ಎಂಬ ಮಾತುಗಳೊಂದಿಗೆ ಪೂಜಾ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದು ಖುಷಿಯ ಕಣ್ಣೀರು

‘ಇವತ್ತು ನಾನು ಎಷ್ಟು ಅತ್ತಿದ್ದೀನಿ ಅಂತ ಯಾರಿಗೂ ಗೊತ್ತಿಲ್ಲ. ಖಂಡಿತವಾಗಿಯೂ ಇದು ಖುಷಿಯ ಕಣ್ಣೀರು. ಈ ಕ್ಷಣಕ್ಕೆ ಸಾಕ್ಷಿಯಾಗಲು ನನಗೆ ಸಾಧ್ಯವಾಗಿದ್ದಕ್ಕೆ ನಾನು ಅದೃಷ್ಟವಂತೆ. ನನ್ನಮ್ಮ ಮದುವೆಯಾಗುತ್ತಿದ್ದಾರೆ. ಏನೇ ಇರಲಿ, ನಿಜವಾದ ಪ್ರೀತಿ ಯಾವಾಗಲೂ ಗೆಲ್ಲುತ್ತದೆ ಎಂಬುದು ನನಗೆ ಈಗ ಗೊತ್ತಾಗಿದೆ. ನನ್ನ ಸುಂದರ ಪೋಷಕರಿಗೆ ಮೊದಲ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು’ ಎಂದು ಪೂಜಾ ವಿಡಿಯೋ ಜೊತೆ ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ, ವಧುವಿನ ಉಡುಗೆಯಲ್ಲಿದ್ದ ತಾಯಿ ತನ್ನ ಎರಡನೇ ಪತಿಗೆ ಹಾರ ಹಾಕುವುದನ್ನು ಮತ್ತು ಪೂಜೆಗಳನ್ನು ಮಾಡುವುದನ್ನು ನೋಡಬಹುದು. ವಿಶೇಷ ಅಂದರೆ, ಇಬ್ಬರ ಮದುವೆಗೆ ಪೂಜಾ ಅವರೇ ಸಾಕ್ಷಿಯಾಗಿ ಸಹಿ ಮಾಡಿದ್ದಾರೆ.

ನೆಟ್ಟಿಗರಿಂದ ಅಭಿನಂದನೆ

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆದ ತಕ್ಷಣವೇ ವೈರಲ್ ಆಗಿದೆ. ಸಾವಿರಾರು ಜನರು ಈ ಜೋಡಿಗೆ ಶುಭ ಹಾರೈಸಿದ್ದಾರೆ. ‘ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ, ಆ ಮುದ್ದಾದ ಜೋಡಿಯನ್ನು ನೋಡಿ ತುಂಬಾ ಖುಷಿಯಾಯಿತು,” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ’ಪ್ರಪಂಚದಾದ್ಯಂತದ ಕೆಟ್ಟ ಸುದ್ದಿಗಳನ್ನು ಕೇಳಿ ಬೇಸರವಾಗಿದ್ದಾಗ, ಇವತ್ತು ಇಂಟರ್ನೆಟ್‌ನಲ್ಲಿ ನೋಡಿದ ಬೆಸ್ಟ್ ವಿಷಯ ಇದು,’ ಎಂದು ಮತ್ತೊಬ್ಬರು ಬರೆದಿದ್ದಾರೆ. ಅಮ್ಮ ಮತ್ತು ಅವರ ಪತಿಗೆ ಸಂತೋಷದ ದಾಂಪತ್ಯ ಜೀವನವನ್ನು ಹಾರೈಸಿದವರೂ ಅನೇಕ. “ಹೆಣ್ಣುಮಕ್ಕಳು ಯಾಕೆ ಸ್ವತಂತ್ರರಾಗಲು ಬಯಸುತ್ತಾರೆ ಅಂದ್ರೆ, ತಮ್ಮ ತಾಯಿಯ ಕನಸುಗಳನ್ನು ನನಸು ಮಾಡಲು,” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದು, ಈ ಕಾಮೆಂಟ್ ಕೂಡ ಎಲ್ಲರ ಗಮನ ಸೆಳೆದಿದೆ.



Source link

Leave a Reply

Your email address will not be published. Required fields are marked *