2nd PUC exam result: ತಾಯಿ ಮಗಳು ಒಟ್ಟಿಗೇ ಪಿಯು ಪರೀಕ್ಷೇಲಿ ಪಾಸ್; ದಕ್ಷಿಣ ಕನ್ನಡ ಟಾಪ್ ಬಂದಿರೋದು ಸುಮ್ನೇನಾ! | Mother And Daughter Pass Pu Exam Together In Bantwal Dakshina Kannada Rav

2nd PUC exam result: ತಾಯಿ ಮಗಳು ಒಟ್ಟಿಗೇ ಪಿಯು ಪರೀಕ್ಷೇಲಿ ಪಾಸ್; ದಕ್ಷಿಣ ಕನ್ನಡ ಟಾಪ್ ಬಂದಿರೋದು ಸುಮ್ನೇನಾ! | Mother And Daughter Pass Pu Exam Together In Bantwal Dakshina Kannada Rav


ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ, ತಾಯಿ ನೇತ್ರಾವತಿ ಮತ್ತು ಮಗಳು ಹೇಮಶ್ರೀ ಏಕಕಾಲದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಲಿ ಉತ್ತೀರ್ಣರಾಗುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ ಮಗಳು ಹೇಮಶ್ರೀ ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದರೆ, ತಾಯಿ ಕೂಡ ತೇರ್ಗಡೆಯಾಗಿ ಸ್ಪೂರ್ತಿಯಾಗಿದ್ದಾರೆ.

ಬಂಟ್ವಾಳ (ಏ.111): ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ತಾಯಿ ಮತ್ತು ಮಗಳು ಏಕಕಾಲದಲ್ಲಿ ಉತ್ತೀರ್ಣರಾಗುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

ಪಟ್ಟಣದ ನಿವಾಸಿ ನೇತ್ರಾವತಿ ವಿ.ಆರ್. ಹಾಗೂ ಈಕೆಯ ಮಗಳು ಹೇಮಶ್ರೀ ಆರ್. ಇಬ್ಬರೂ ಗುರುವಾರ ಪ್ರಕಟವಾದ ಫಲಿತಾಂಶದಲ್ಲಿ ತೇರ್ಗಡೆಯಾಗಿದ್ದಾರೆ. ಪಟ್ಟಣದ ಬಿ.ಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಓದುತ್ತಿದ್ದ ಹೇಮಶ್ರೀ 562 ಅಂಕ (ಶೇ.93.6) ಗಳಿಸಿ ಕಾಲೇಜಿಗೆ ಟಾಪರ್ ಆಗಿದ್ದಾಳೆ.

ಇನ್ನು ಮೊಂಟೆಪದವು ಸರ್ಕಾರಿ ಪದವಿಪೂರ್ವ ಕಾಲೇಜಿನ ಮೂಲಕ ಪರೀಕ್ಷೆಗೆ ಹಾಜರಾಗಿದ್ದ ತಾಯಿ ನೇತ್ರಾವತಿ ಕಲಾ ವಿಭಾಗದಲ್ಲಿ 257 (ಶೇ.42.3) ಅಂಕ ಪಡೆದಿದ್ದಾರೆ. ಇವರ ಸಾಧನೆಗೆ ಪತಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರವಿಕುಮಾರ್ ಅವರು ಪ್ರೋತ್ಸಾಹಿಸಿದ್ದು, ಕಾಲೇಜಿನ ಉಪನ್ಯಾಸಕರು ಬೆಂಬಲ ನೀಡಿದ್ದಾರೆ.

YouTube video player



Source link

Leave a Reply

Your email address will not be published. Required fields are marked *