ನಾವು ಕೊಟ್ಟ ಹಣ ವಾಪಾಸ್‌ ಕೊಡಿ, ಯುಎಇ ಬೇಡಿಕೆ ಕೇಳಿ ಕಕ್ಕಾಬಿಕ್ಕಿಯಾದ ಪಾಪಿ ಪಾಕಿಸ್ತಾನ | Pakistan To Repay 2 Billion Dollar Loan To Uae Economic Crisis Middle East War San

ನಾವು ಕೊಟ್ಟ ಹಣ ವಾಪಾಸ್‌ ಕೊಡಿ, ಯುಎಇ ಬೇಡಿಕೆ ಕೇಳಿ ಕಕ್ಕಾಬಿಕ್ಕಿಯಾದ ಪಾಪಿ ಪಾಕಿಸ್ತಾನ | Pakistan To Repay 2 Billion Dollar Loan To Uae Economic Crisis Middle East War San



ನಾವು ಕೊಟ್ಟ ಹಣ ವಾಪಾಸ್‌ ಕೊಡಿ, ಯುಎಇ ಬೇಡಿಕೆ ಕೇಳಿ ಕಕ್ಕಾಬಿಕ್ಕಿಯಾದ ಪಾಪಿ ಪಾಕಿಸ್ತಾನ | Pakistan To Repay 2 Billion Dollar Loan To Uae Economic Crisis Middle East War San

ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಮಿತ್ರರಾಷ್ಟ್ರ ಯುಎಇ, ತಾನು ನೀಡಿದ್ದ 2 ಬಿಲಿಯನ್ ಡಾಲರ್ ಸಾಲವನ್ನು ತಕ್ಷಣವೇ ಹಿಂದಿರುಗಿಸುವಂತೆ ಕೇಳಿದೆ. ಮಧ್ಯಪ್ರಾಚ್ಯದ ಉದ್ವಿಗ್ನತೆಯೇ ಇದಕ್ಕೆ ಕಾರಣ ಎನ್ನಲಾಗಿದ್ದು, ಪಾಕಿಸ್ತಾನವು ಈ ತಿಂಗಳ ಅಂತ್ಯದೊಳಗೆ ಹಣ ಪಾವತಿಸಲು ಒಪ್ಪಿಕೊಂಡಿದೆ.

ಇಸ್ಲಾಮಾಬಾದ್ (ಏ.4): ಆರ್ಥಿಕ ಮುಗ್ಗಟ್ಟಿನಿಂದ ಕಂಗಾಲಾಗಿರುವ ಪಾಕಿಸ್ತಾನಕ್ಕೆ ಸಂಕಷ್ಟದ ಕಾಲದಲ್ಲಿ ನೆರವಾಗಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಈಗ ತಾನು ನೀಡಿದ್ದ 2 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 16,600 ಕೋಟಿ ರೂಪಾಯಿ) ಸಾಲವನ್ನು ತಕ್ಷಣವೇ ಹಿಂದಿರುಗಿಸುವಂತೆ ಬೇಡಿಕೆಯಿಟ್ಟಿದೆ. ಮಿತ್ರರಾಷ್ಟ್ರದ ಈ ಅನಿರೀಕ್ಷಿತ ಬೇಡಿಕೆಗೆ ಮಣಿದಿರುವ ಪಾಕಿಸ್ತಾನ, ಈ ತಿಂಗಳ ಅಂತ್ಯದೊಳಗೆ ಹಣ ಪಾವತಿಸಲು ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಯುಎಇ ಈ ಹಣವನ್ನು ತಕ್ಷಣವೇ ವಾಪಸ್ ಕೇಳಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಬೆಂಬಲಿಸಲು ಯುಎಇ ಈ ಮೊತ್ತವನ್ನು ನೀಡಿತ್ತು.

ಶೇ. 6ರಷ್ಟು ಬಡ್ಡಿ ನೀಡುತ್ತಿದ್ದ ಪಾಕಿಸ್ತಾನ

ಪಾಕಿಸ್ತಾನವು ಈ ಸಾಲದ ಮೊತ್ತದ ಮೇಲೆ ಸುಮಾರು ಶೇ. 6ರಷ್ಟು ಬಡ್ಡಿಯನ್ನು ಪಾವತಿಸುತ್ತಿದೆ. ಈ ಹಿಂದೆ ಯುಎಇ ಪ್ರತಿ ವರ್ಷ ಈ ಠೇವಣಿಯನ್ನು ನವೀಕರಿಸುತ್ತಿತ್ತು (Roll over). ಆದರೆ, ಡಿಸೆಂಬರ್ 2025ರಲ್ಲಿ ಮೊದಲು ಒಂದು ತಿಂಗಳು, ನಂತರ ಎರಡು ತಿಂಗಳ ಅವಧಿಗೆ ಅಂದರೆ ಏಪ್ರಿಲ್ 17ರವರೆಗೆ ಮಾತ್ರ ಗಡುವು ವಿಸ್ತರಿಸಿತ್ತು. ಪ್ರಸ್ತುತ ಈ ಮೊತ್ತವನ್ನು ಪಾಕಿಸ್ತಾನದ ಕೇಂದ್ರ ಬ್ಯಾಂಕ್ (State Bank of Pakistan) ನಲ್ಲಿ ಸುರಕ್ಷಿತ ಠೇವಣಿಯಾಗಿ ಇರಿಸಲಾಗಿದೆ ಎನ್ನಲಾಗಿದೆ.

ಪಾಕಿಸ್ತಾನದ ಮುಂದಿರುವ ಆರ್ಥಿಕ ಸವಾಲು

ಪ್ರಸಕ್ತ ಹಣಕಾಸು ವರ್ಷದಲ್ಲಿ ಪಾಕಿಸ್ತಾನಕ್ಕೆ ಸುಮಾರು 12 ಬಿಲಿಯನ್ ಡಾಲರ್ (ಅಂದಾಜು 99,600 ಕೋಟಿ ರೂಪಾಯಿ) ಬಾಹ್ಯ ಠೇವಣಿಗಳ ನವೀಕರಣದ (Rollover) ಅಗತ್ಯವಿತ್ತು. ಇದರಲ್ಲಿ ಸೌದಿ ಅರೇಬಿಯಾದಿಂದ 5 ಬಿಲಿಯನ್ ಡಾಲರ್ (41,500 ಕೋಟಿ ರೂ.), ಚೀನಾದಿಂದ 4 ಬಿಲಿಯನ್ ಡಾಲರ್ (33,200 ಕೋಟಿ ರೂ.) ಮತ್ತು ಯುಎಇ ನೀಡಿದ್ದ 3 ಬಿಲಿಯನ್ ಡಾಲರ್ (24,900 ಕೋಟಿ ರೂ.) ಸಾಲವೂ ಸೇರಿದೆ.

ಮೀಸಲು ನಿಧಿ ಎಷ್ಟಿದೆ?

ಸದ್ಯ ಪಾಕಿಸ್ತಾನದ ಬಳಿ 21 ಬಿಲಿಯನ್ ಡಾಲರ್‌ಗಿಂತಲೂ (ಸುಮಾರು 1.74 ಲಕ್ಷ ಕೋಟಿ ರೂಪಾಯಿ) ಹೆಚ್ಚು ಮೀಸಲು ನಿಧಿಯಿದೆ. ಇದರಲ್ಲಿ ಈಗ ಯುಎಇಗೆ 16,600 ಕೋಟಿ ರೂಪಾಯಿ ಪಾವತಿಸಬೇಕಿದೆ. ಆದರೆ, ಮುಂಬರುವ ತಿಂಗಳುಗಳಲ್ಲಿ ದೇಶದ ಆರ್ಥಿಕತೆಯನ್ನು ಸರಿದೂಗಿಸಲು ಪಾಕಿಸ್ತಾನಕ್ಕೆ ಮತ್ತೆ ಬಾಹ್ಯ ಆರ್ಥಿಕ ನೆರವಿನ ಅಗತ್ಯ ಬೀಳುವ ಸಾಧ್ಯತೆಯಿದೆ.



Source link

Leave a Reply

Your email address will not be published. Required fields are marked *