ಇರಾನ್ ಜೊತೆಗಿನ ಮಾತುಕತೆ ವಿಫಲ: ಕೆರಳಿದ ಟ್ರಂಪ್‌ನಿಂದ ಶಾಕಿಂಗ್ ಘೋಷಣೆ, ಇಡೀ ವಿಶ್ವವೇ ಸ್ತಬ್ಧ! | Iran Knowingly Failed Donald Trump Orders Us Navy Blockade Of Strait Of Hormuz After Islamabad Peace Talks Stall Mrq

ಇರಾನ್ ಜೊತೆಗಿನ ಮಾತುಕತೆ ವಿಫಲ: ಕೆರಳಿದ ಟ್ರಂಪ್‌ನಿಂದ ಶಾಕಿಂಗ್ ಘೋಷಣೆ, ಇಡೀ ವಿಶ್ವವೇ ಸ್ತಬ್ಧ! | Iran Knowingly Failed Donald Trump Orders Us Navy Blockade Of Strait Of Hormuz After Islamabad Peace Talks Stall Mrq



ಇರಾನ್ ಜೊತೆಗಿನ ಮಾತುಕತೆ ವಿಫಲ: ಕೆರಳಿದ ಟ್ರಂಪ್‌ನಿಂದ ಶಾಕಿಂಗ್ ಘೋಷಣೆ, ಇಡೀ ವಿಶ್ವವೇ ಸ್ತಬ್ಧ! | Iran Knowingly Failed Donald Trump Orders Us Navy Blockade Of Strait Of Hormuz After Islamabad Peace Talks Stall Mrq

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ ವಿಫಲವಾದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹರ್ಮೋಜ್ ಜಲಸಂಧಿ ಮೂಲಕ ಸಾಗುವ ಹಡಗುಗಳನ್ನು ತಡೆಯಲು ನೌಕಾಪಡೆಗೆ ಆದೇಶಿಸಿದ್ದಾರೆ. ಇರಾನ್‌ನ ಕಾನೂನುಬಾಹಿರ ಸುಂಕ ವಸೂಲಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಇದು ಜಾಗತಿಕ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ.

ವಾಷಿಂಗ್ಟನ್: ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಡೀ ಜಗತ್ತೇ ಬೆಚ್ಚಿಬೀಳುವಂತಹ ಘೋಷಣೆಯೊಂದನ್ನು ಮಾಡಿದ್ದಾರೆ. ಹರ್ಮೋಜ್ ಜಲಸಂಧಿ ಮೂಲಕ ಸಾಗುವ ಎಲ್ಲಾ ಹಡಗುಗಳನ್ನು ತಡೆಹಿಡಿಯುವಂತೆ ಅವರು ಅಮೆರಿಕ ನೌಕಾಪಡೆಗೆ ಆದೇಶ ನೀಡಿದ್ದಾರೆ.

‘ಹರ್ಮೋಜ್ ಜಲಸಂಧಿಯಲ್ಲಿ ಇರಾನ್ ಕಾನೂನುಬಾಹಿರವಾಗಿ ಸುಂಕ ವಸೂಲಿ ಮಾಡುತ್ತಿದೆ. ಈ ರೀತಿ ಸುಂಕ ಕಟ್ಟುವ ಯಾವುದೇ ಹಡಗನ್ನು ಅಂತಾರಾಷ್ಟ್ರೀಯ ಜಲಗಡಿಯೊಳಗೆ ಬಿಡುವುದಿಲ್ಲ’ ಎಂದು ಟ್ರಂಪ್ ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ‘ಟ್ರೂತ್ ಸೋಶಿಯಲ್’ನಲ್ಲಿ ಸ್ಪಷ್ಟಪಡಿಸಿದ್ದಾರೆ. ಇರಾನ್‌ನ ಈ ನಡೆ ಜಾಗತಿಕ ಮಟ್ಟದಲ್ಲಿ ಒಂದು ದೊಡ್ಡ ಅಪಾಯ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ದೊಡ್ಡ ಸಂಕಷ್ಟಕ್ಕೆ ಸಿಲುಕಿರುವ ಜಾಗತೀಕ ಅರ್ಥವ್ಯವಸ್ಥೆ

ಜಲಸಂಧಿಯಲ್ಲಿ ಇರಾನ್ ಅಳವಡಿಸಿರುವ ಮೈನ್‌ಗಳನ್ನು ತೆರವುಗೊಳಿಸಲು ನೌಕಾಪಡೆ ಕಾರ್ಯಾಚರಣೆ ಶುರು ಮಾಡಲಿದೆ. ಒಂದು ವೇಳೆ ಅಮೆರಿಕ ಸೇನೆ ಅಥವಾ ಶಾಂತಿಯುತವಾಗಿ ಸಾಗುವ ಹಡಗುಗಳ ಮೇಲೆ ಇರಾನ್ ಗುಂಡು ಹಾರಿಸಿದರೆ, ನಾವು ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಇರಾನ್ ಏಕಪಕ್ಷೀಯವಾಗಿ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದ್ದರಿಂದ ಜಾಗತಿಕ ಆರ್ಥಿಕತೆ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಅಂತಾರಾಷ್ಟ್ರೀಯ ಹಡಗು ಮಾರ್ಗದಲ್ಲಿ ಯಾವುದೇ ಅಡೆತಡೆ ಇಲ್ಲದೆ ಸಂಚಾರಕ್ಕೆ ಅವಕಾಶ ನೀಡಬೇಕು ಎನ್ನುವುದು ಅಮೆರಿಕದ ಪ್ರಮುಖ ಬೇಡಿಕೆಯಾಗಿತ್ತು.

ಇದನ್ನೂ ಓದಿ: ಟ್ರಂಪ್ ಕೊಟ್ಟ ಸಾಲದಲ್ಲಿ ಶರೀಫ್, ಮುನೀರ್ ಸೂಟುಬೂಟು ಶೋಕಿ, ಅಮೆರಿಕಕ್ಕೆ ಪಾಕಿಸ್ತಾನ ಮಾಡಿದ ಸಾಲ ಎಷ್ಟು ಗೊತ್ತಾ!?

ಇರಾನ್ ಮುಂದಿನ ನಡೆ ಏನು?

ಕೊಟ್ಟ ಮಾತಿನಂತೆ ಇರಾನ್ ಆದಷ್ಟು ಬೇಗ ಅಂತಾರಾಷ್ಟ್ರೀಯ ಜಲಮಾರ್ಗವನ್ನು ಮತ್ತೆ ತೆರೆಯಬೇಕು ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ. ಶಾಂತಿ ಮಾತುಕತೆ ಮುರಿದುಬಿದ್ದಿರುವುದರಿಂದ ಈ ಭಾಗದಲ್ಲಿ ಸೇನಾ ಕಾರ್ಯಾಚರಣೆಯ ಸಾಧ್ಯತೆ ಹೆಚ್ಚಾಗಿದೆ. ಹಾರ್ಮುಜ್ ಜಲಸಂಧಿಯ ದಿಗ್ಬಂಧನದಿಂದ ಜಾಗತಿಕ ತೈಲ ಮಾರುಕಟ್ಟೆ ಮತ್ತು ವ್ಯಾಪಾರದ ಮೇಲೆ ಏನು ಪರಿಣಾಮ ಬೀರಬಹುದು ಎಂಬ ಆತಂಕದಲ್ಲಿ ಇಡೀ ಜಗತ್ತಿದೆ. ಮುಂದಿನ ಕೆಲ ಗಂಟೆಗಳಲ್ಲಿ ಅಮೆರಿಕ ಮತ್ತು ಇರಾನ್‌ನ ನಡೆಗಳು ಅತ್ಯಂತ ನಿರ್ಣಾಯಕವಾಗಲಿವೆ.

ಇದನ್ನೂ ಓದಿ: ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ವಿಮಾನಕ್ಕೆ ಪಾಕಿಸ್ತಾನದ ಎಫ್16 ವಿಮಾನದ ಬೆಂಗಾವಲು

Scroll to load tweet…



Source link

Leave a Reply

Your email address will not be published. Required fields are marked *