Bengaluru: 15 ವರ್ಷದ ಮಗಳಿಗೆ 5-6 ಸಾವಿರ ಫಿಕ್ಸ್ ಮಾಡಿ ವೇಶ್ಯಾವಾಟಿಕೆ ತಳ್ಳಿದ ತಾಯಿ | Bengaluru Mother Step Father Arrested For Sending Minor Daughter Into Prostitution Mrq

Bengaluru: 15 ವರ್ಷದ ಮಗಳಿಗೆ 5-6 ಸಾವಿರ ಫಿಕ್ಸ್ ಮಾಡಿ ವೇಶ್ಯಾವಾಟಿಕೆ ತಳ್ಳಿದ ತಾಯಿ | Bengaluru Mother Step Father Arrested For Sending Minor Daughter Into Prostitution Mrq



Bengaluru: 15 ವರ್ಷದ ಮಗಳಿಗೆ 5-6 ಸಾವಿರ ಫಿಕ್ಸ್ ಮಾಡಿ ವೇಶ್ಯಾವಾಟಿಕೆ ತಳ್ಳಿದ ತಾಯಿ | Bengaluru Mother Step Father Arrested For Sending Minor Daughter Into Prostitution Mrq

ಬೆಂಗಳೂರಿನ ಚಂದ್ರಾಲೇಔಟ್‌ನಲ್ಲಿ ಹಣದಾಸೆಗಾಗಿ 15 ವರ್ಷದ ಮಗಳನ್ನು ತಾಯಿಯೇ ವೇಶ್ಯಾವಾಟಿಕೆಗೆ ದೂಡಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಲಕಿಯ ತಾಯಿ, ಮಲತಂದೆ ಹಾಗೂ ಮಧ್ಯವರ್ತಿಯನ್ನು ಪೊಲೀಸರು ಬಂಧಿಸಿದ್ದು, ಬಾಲಕಿಯನ್ನು ರಕ್ಷಿಸಿದ್ದಾರೆ.

ಬೆಂಗಳೂರು: 15 ವರ್ಷದ ಮಗಳನ್ನು ತಾಯಿಯೇ ವೇಶ್ಯಾವಾಟಿಕೆ ದಂಧೆಗೆ ದೂಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಚಂದ್ರಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣದಾಸೆಗೆ ಬಿದ್ದು ತನ್ನ 15 ವರ್ಷದ ಮಗಳನ್ನು ಮಾಂಸದಂಧೆಗೆ ದೂಡಿದ ತಾಯಿಯ ಕರಾಳ ಕೃತ್ಯ ಚಂದ್ರಾಲೇಔಟ್ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಬಯಲಾಗಿದೆ. ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ್ದ ಆರೋಪದ ಮೇಲೆ ಬಾಲಕಿಯ ತಾಯಿ, ಆಕೆಯ ಮಲತಂದೆ ಹಾಗೂ ಮಧ್ಯವರ್ತಿಯನ್ನು ಬಂಧಿಸಲಾಗಿದೆ.

6 ರಿಂದ 10 ಸಾವಿರ ರು.ವರೆಗೂ ಹಣ ನಿಗದಿ

ತಾಯಿ ಮತ್ತು ಮಲತಂದೆ ಪ್ರತಿದಿನ ಕಾರಿನಲ್ಲಿ ಬಾಲಕಿಯನ್ನು ಮಧ್ಯವರ್ತಿಯ ಮನೆಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದರು. ಅಲ್ಲಿ ಬಾಲಕಿ ಸಂಜೆವರೆಗೂ ಗಿರಾಕಿಗಳ ಕಿರುಕುಳಕ್ಕೆ ಬಲಿಯಾಗುತ್ತಿದ್ದಳು. ಬಾಲಕಿಯೊಂದಿಗೆ ಸಮಯ ಕಳೆಯಲು ಮಧ್ಯವರ್ತಿಯು 6 ರಿಂದ 10 ಸಾವಿರ ರು.ವರೆಗೂ ಹಣ ನಿಗದಿಪಡಿಸುತ್ತಿದ್ದಳು. ಇದರಲ್ಲಿ ಅರ್ಧದಷ್ಟು ಹಣವನ್ನು ಆಕೆಯ ತಾಯಿಗೆ ನೀಡಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

ಚಂದ್ರಾಲೇಔಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಸದ್ಯ ಬಾಲಕಿಯನ್ನು ರಕ್ಷಿಸಿದ್ದು, ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಈ ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದು, ಪೊಲೀಸರು ಅವರಿಗಾಗಿ ಬಲೆ ಬೀಸಿದ್ದಾರೆ.

ಪೊಲೀಸರ ಹೆಸರಿನಲ್ಲಿ ಮಹಿಳೆಗೆ ಡಿಜಿಟಲ್ ಅರೆಸ್ಟ್, ಹಣ ಸುಲಿಗೆ ಯತ್ನ

ನಗರದ ಪೊಲೀಸರ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಡಿಜಿಟಲ್ ಅರೆಸ್ಟ್‌ಗೊಳಪಡಿಸಿ ಹಣ ಸುಲಿಗೆಗೆ ಕಿಡಿಗೇಡಿಗಳು ಯತ್ನಿಸಿರುವ ಘಟನೆ ನಡೆದಿದೆ.

ಈ ಸಂಬಂಧ ಇ ಮೇಲ್ ಮೂಲಕ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದು, ನಗರ ಪೊಲೀಸ್ ಆಯುಕ್ತರ ಸಹಿ ಹಾಗೂ ಕಚೇರಿ ಸೀಲ್ ನಕಲು ಮಾಡಿ ಸಂತ್ರಸ್ತೆಗೆ ನೋಟಿಸ್ ನೀಡಿ ವಂಚನೆಗೆ ಯತ್ನಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಕೃತ್ಯದಲ್ಲಿ ತೊಡಗಿರುವುದಾಗಿ ಸಂತ್ರಸ್ತೆ ತಾಯಿಗೆ ನಗರ ಪೊಲೀಸ್‌ ಸೋಗಿನಲ್ಲಿ ಅಪರಿಚಿತ ಕರೆ ಮಾಡಿದ್ದಾನೆ. ಬಳಿಕ ತಮ್ಮ ಮಗಳಿಗೆ ಅವರು ಮೊಬೈಲ್ ಕೊಟ್ಟಿದ್ದಾರೆ. 

ಇದನ್ನೂ ಓದಿ: ಅಯ್ಯೋ ವಿಧಿಯೇ… ಬಾಲಕನ ಪ್ರಾಣ ತೆಗೀತು ಚಾಕೊಲೇಟ್, ಆಸೆಪಟ್ಟಿದ್ದೇ ತಪ್ಪಾಯ್ತಾ?

ಆ ಕರೆ ಸ್ವೀಕರಿಸಿದ ಸಂತ್ರಸ್ತೆಗೆ ನಿಮ್ಮ ತಾಯಿ ವಿರುದ್ಧ ಕೇಳಿ ಬಂದಿರುವ ಆರ್ಥಿಕ ವಂಚನೆ ಕೃತ್ಯದ ತನಿಖೆಗೆ ನಗರ ಪೊಲೀಸ್ ಆಯುಕ್ತರ ಆದೇಶವಿದೆ ಎಂದಿದ್ದಾನೆ. ಅಲ್ಲದೆ ವಾಟ್ಸಪ್‌ನಲ್ಲಿ ಆಯುಕ್ತರ ಸಹಿಯುಳ್ಳ ಆದೇಶದ ಪ್ರತಿಯನ್ನು ಕಳುಹಿಸಿದ್ದಾನೆ. ಈ ಕರೆ ಬಗ್ಗೆ ಶಂಕೆಗೊಂಡ ಅವರು, ಕೂಡಲೇ ಕರೆ ಸ್ಥಗಿತಗೊಳಿಸಿ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ಸಹೋದರರ ಕರಾಳ ಮುಖ, ಸವಾನಿ ಬ್ರದರ್ಸ್‌ಗೆ 835 ವರ್ಷಗಳ ಜೈಲು ಶಿಕ್ಷೆ!



Source link

Leave a Reply

Your email address will not be published. Required fields are marked *