Headlines

ತುಂಡುಡುಗೆಯಲ್ಲಿ ನರ್ಸ್‌ಗಳಿಂದ ಕೆಲಸ; ಬಿಹಾರ ಖಾಸಗಿ ಆಸ್ಪತ್ರೆಯ ವಿಡಿಯೋ ಅಸಲಿ ಸತ್ಯ ಇಲ್ಲಿದೆ! | Nurses Working In Skimpy Clothes Here Is The Real Truth Behind The Video From A Private Hospital In Bihar Mrq

ತುಂಡುಡುಗೆಯಲ್ಲಿ ನರ್ಸ್‌ಗಳಿಂದ ಕೆಲಸ; ಬಿಹಾರ ಖಾಸಗಿ ಆಸ್ಪತ್ರೆಯ ವಿಡಿಯೋ ಅಸಲಿ ಸತ್ಯ ಇಲ್ಲಿದೆ! | Nurses Working In Skimpy Clothes Here Is The Real Truth Behind The Video From A Private Hospital In Bihar Mrq



ತುಂಡುಡುಗೆಯಲ್ಲಿ ನರ್ಸ್‌ಗಳಿಂದ ಕೆಲಸ; ಬಿಹಾರ ಖಾಸಗಿ ಆಸ್ಪತ್ರೆಯ ವಿಡಿಯೋ ಅಸಲಿ ಸತ್ಯ ಇಲ್ಲಿದೆ! | Nurses Working In Skimpy Clothes Here Is The Real Truth Behind The Video From A Private Hospital In Bihar Mrq

ಬಿಹಾರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳು ತುಂಡುಡುಗೆ ಧರಿಸಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಶೀರ್ಷಿಕೆಯನ್ನು ಸತ್ಯವೆಂದು ನಂಬಿ, ಆಕ್ರೋಶದಿಂದ ಕಮೆಂಟ್ ಮಾಡುತ್ತಿದ್ದಾರೆ. ಆದ್ರೆ ಈ ವಿಡಿಯೋಗಳ ಅಸಲಿ ಸತ್ಯವೇ ಬೇರೆಯಾಗಿದೆ.

ನವದೆಹಲಿ: ಕಳೆದ ಮೂರು ದಿನಗಳಿಂದ ಬಿಹಾರದ ಖಾಸಗಿ ಆಸ್ಪತ್ರೆಯದ್ದು ಎನ್ನಲಾದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ರೋಗಿಗಳನ್ನು ಹೆಚ್ಚು ದಿನ ಉಳಿಸಿಕೊಳ್ಳಲು ಮತ್ತು ಆಕರ್ಷಿಸಲು ಈ ರೀತಿಯ ಸಮವಸ್ತ್ರ ಮಾಡಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಿನಿ ಸ್ಕರ್ಟ್, ಸ್ಲೀವ್‌ಲೆಸ್ ಟಾಪ್ ಧರಿಸಿರುವ ಮಹಿಳಾ ನರ್ಸ್‌ಗಳು ಆಸ್ಪತ್ರೆಯಲ್ಲಿ ಓಡಾಡುತ್ತಿರುವ ಮೂರ್ನಾಲ್ಕು ವಿಡಿಯೋಗಳು ಹರಿದಾಡುತ್ತಿವೆ. ಬಹುತೇಕರು ವಿಡಿಯೋ ಶೀರ್ಷಿಕೆಯನ್ನು ಸತ್ಯವೆಂದು ನಂಬಿ, ಆಕ್ರೋಶದಿಂದ ಕಮೆಂಟ್ ಮಾಡುತ್ತಿದ್ದಾರೆ. ಆದ್ರೆ ಈ ವಿಡಿಯೋಗಳ ಅಸಲಿ ಸತ್ಯವೇ ಬೇರೆಯಾಗಿದೆ.

ಈ ವಿಡಿಯೋಗಳು ಯಾವುದೇ ಆಸ್ಪತ್ರೆಯದ್ದಲ್ಲ. ಕೆಲ ಎಡಿಟೆಡ್ ವಿಡಿಯೋಗಳನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರಿಂದ ಈ ರೀತಿಯ ತಪ್ಪಾದ ವಿಷಯದೊಂದಿಗೆ ವಿಡಿಯೋಗಳು ವೈರಲ್ ಆಗುತ್ತಿವೆ. ಇದನ್ನೇ ನಿಜ ಅಂತ ನಂಬಿರುವ ನೆಟ್ಟಿಗರು, ನಾವು ಅವರನ್ನು ಸಿಸ್ಟರ್ಸ್ ಎಂದು ಕರೆಯುತ್ತವೆ. ಆದ್ರೆ ಇಂತಹ ಸಮವಸ್ತ್ರದ ಮೂಲಕ ಆಸ್ಪತ್ರೆ ಕೀಳುಮಟ್ಟಕ್ಕೆ ಇಳಿದಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಪಡ್ಡೆಹುಡುಗರು ಒಂದು ಹೆಜ್ಜೆ ಮುಂದೆ ಹೋಗಿ, ಈ ಆಸ್ಪತ್ರೆ ಎಲ್ಲಿದೆ ಹೇಳಿ? ನಾವು ಹೋಗಿ ಅಡ್ಮಿಟ್ ಆಗುತ್ತೇವೆ? ಇವರನ್ನು ನೋಡಿದ್ರೆ ನಮಗೆ ಜ್ವರ ಬರುತ್ತೆ ಎಂದು ಪೋಲಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಅಸಲಿ ವಿಡಿಯೋದಲ್ಲಿ ಏನಿದೆ?

ಅಲೋನ್ (@loveraj1122) ಹೆಸರಿನ ಎಕ್ಸ್ ಖಾತೆಯಲ್ಲಿ ವೈರಲ್ ನರ್ಸ್‌ಗಳ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಾದಕ ನರ್ಸ್ ಸುತ್ತಮುತ್ತ ಕ್ಯಾಮೆರಾ, ಲೈಟಿಂಗ್ ಅಳವಡಿಕೆ ಮಾಡಿರೋದನ್ನು ಗಮನಿಸಬಹುದು. ಓರ್ವ ವ್ಯಕ್ತಿ, ನರ್ಸ್‌ಗಳಿಗೆ ಹೇಗೆ ಚಿಕಿತ್ಸೆ ನೀಡಬೇಕೆಂಬುದನ್ನು ತೋರಿಸುತ್ತಿದ್ದಾರೆ. ಇದೆಲ್ಲವೂ ಇದೊಂದು ಶೂಟಿಂಗ್ ಎಂಬುದನ್ನು ದೃಢಪಡಿಸುತ್ತದೆ. ವೈರಲ್ ಆಗಿರುವ ಮೂರ್ನಾಲ್ಕು ವಿಡಿಯೋಗಳಲ್ಲಿ ಹೆಗಲಿಗೆ ಬ್ಯಾಗ್ ಹಾಕಿಕೊಂಡಿರುವ ವ್ಯಕ್ತಿಯನ್ನು ನೋಡಬಹುದು.

ಇದನ್ನೂ ಓದಿ: 20 ವರ್ಷ ಗೊತ್ತೇ ಆಗ್ಲಿಲ್ಲ ಗಂಡನ ಸೀಕ್ರೆಟ್! ಸತ್ಯ ಬಯಲಾಗ್ತಿದ್ದಂತೆ ಸೋಡಾಚೀಟಿ ಕೊಟ್ಟ ಪತ್ನಿ

ಈ ಶೂಟಿಂಗ್ ಯಾವ ಸಿನಿಮಾದ್ದು ಮತ್ತು ಎಲ್ಲಿಯದ್ದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಆದ್ರೆ ಕೆಲವರು ತಪ್ಪಾದ ಶೀರ್ಷಿಕೆ ಜೊತೆ ವಿಡಿಯೋ ಶೇರ್ ಮಾಡಿಕೊಂಡಿರುವ ಕಾರಣ, ಸಾಮಾಜಿಕ ಜಾಲತಾಣದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಈ ವಿಡಿಯೋಗೆ ಬಂದಿರುವ ಆಯ್ದ ಕೆಲ ಕಮೆಂಟ್‌ಗಳು ಈ ರೀತಿಯಾಗಿವೆ.

ವೈರಲ್ ವಿಡಿಯೋಗೆ ಬಂದಿರುವ ಕಮೆಂಟ್‌ಗಳು

  1. ಈ ರೀತಿಯಲ್ಲಿ ನರ್ಸ್ ಸುತ್ತಾಮುತ್ತಾ ಓಡಾಡ್ತಿದ್ರೆ ನಾವು ಆಸ್ಪತ್ರೆಯಿಂದ ಹೋಗಲ್ಲ.
  2. ಇಂಜೆಕ್ಸನ್ ಯಾಕೆ? ಇವರಿದ್ರೆ ಆಪರೇಷನ್ ಮಾಡಿಸಿಕೊಳ್ಳಲು ನಾವು ರೆಡಿ.
  3. ಈ ಸ್ವರ್ಗದ ಆಸ್ಪತ್ರೆ ಎಲ್ಲಿದೆ?
  4. ಇವರು ನರ್ಸ್‌ಗಳಾ ಅಥವಾ ದೇವತೆಗಳಾ?
  5. ನಾನು ಆಸ್ಪತ್ರೆಗೆ ದಾಖಲಾಗಬೇಕಿತ್ತು? ಈ ಆಸ್ಪತ್ರೆ ಎಲ್ಲಿದೆ ಎಂದು ತಿಳಿಸಿ
  6. ಬಿಹಾರ ಇಂಥಾ ವಿಷಯಗಳಲ್ಲಿ ಯಾವಾಗಲೂ ಮುಂದಿರುತ್ತೆ?

Scroll to load tweet…

ಇದನ್ನೂ ಓದಿ: ಗೆಳತಿ ಜೊತೆ ಹಾಸಿಗೆಯಲ್ಲಿ ಮಜಾ ಮಾಡ್ತಿದ್ದ ಗಂಡನಿಗೆ ಶಾಕ್ ಕೊಟ್ಟ ಹೆಂಡ್ತಿ; ವಿಡಿಯೋ ವೈರಲ್



Source link

Leave a Reply

Your email address will not be published. Required fields are marked *