
‘ರೈಲು ನಿರ್ಗಮನದ 8 ತಾಸು ಮೊದಲು ಟಿಕೆಟ್ ರದ್ದು ಮಾಡಿದ್ರಷ್ಟೇ ರೀಫಂಡ್… ಅಂತಿಮ 8 ತಾಸಿನೊಳಗೆ ರದ್ದು ಮಾಡಿದರೆ ರೀಫಂಡ್ ಇಲ್ಲ’ ಎಂಬ ನಿಯಮ ಸೇರಿ ರೈಲ್ವೆ ಇಲಾಖೆ , ಹೊಸ ಮರುಪಾವತಿ ಸ್ಲ್ಯಾಬ್‌ಗಳನ್ನು ಪ್ರಕಟಿಸಿದೆ. ಹೊಸ ಹೊಸ ನಿಯಮವು ಈ ವರ್ಷ ಏಪ್ರಿಲ್ 1 ರಿಂದ 15 ರವರೆಗೆ ಜಾರಿಗೆ ಬರಲಿದೆ.
ನವದೆಹಲಿ: ‘ರೈಲು ನಿರ್ಗಮನದ 8 ತಾಸು ಮೊದಲು ಟಿಕೆಟ್ ರದ್ದು ಮಾಡಿದ್ರಷ್ಟೇ ರೀಫಂಡ್… ಅಂತಿಮ 8 ತಾಸಿನೊಳಗೆ ರದ್ದು ಮಾಡಿದರೆ ರೀಫಂಡ್ ಇಲ್ಲ’ ಎಂಬ ನಿಯಮ ಸೇರಿ ರೈಲ್ವೆ ಇಲಾಖೆ , ಹೊಸ ಮರುಪಾವತಿ ಸ್ಲ್ಯಾಬ್‌ಗಳನ್ನು ಪ್ರಕಟಿಸಿದೆ. ಹೊಸ ಹೊಸ ನಿಯಮವು ಈ ವರ್ಷ ಏಪ್ರಿಲ್ 1 ರಿಂದ 15 ರವರೆಗೆ ಜಾರಿಗೆ ಬರಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ನೆಟ್‌ವರ್ಕ್ ಅನ್ನು ಮೇಲ್ದರ್ಜೆಗೇರಿಸುವುದು ಮತ್ತು ಪ್ರಯಾಣಿಕರ ಸೇವೆಯನ್ನು ಉತ್ತಮಪಡಿಸುವ ಉದ್ದೇಶದಿಂದ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದಿದ್ದಾರೆ.
ಟಿಕೆಟ್ ರದ್ದತಿ ನಿಯಮ ಬದಲು:
ರೈಲು ಟಿಕೆಟ್ ಅನ್ನು ರೈಲಿನ ನಿರ್ಗಮನದ 8 ಗಂಟೆಗಿಂತ ಮೊದಲು ಕ್ಯಾನ್ಸಲ್ ಮಾಡಿದರಷ್ಟೇ ರೀಫಂಡ್ ಸಿಗಲಿದೆ. ರೈಲು ಬಿಡುವ ಸಮಯಕ್ಕಿಂತ ಮೊದಲಿನ ‘8 ತಾಸು ಅವಧಿ’ಯಲ್ಲಿ ರದ್ದು ಮಾಡಿದರೆ ರೀಫಂಡ್ ಇಲ್ಲ. ಕೊನೇ ಕ್ಷಣದಲ್ಲಿ ಟಿಕೆಟ್ ರದ್ದು ಮಾಡುವ ಅಭ್ಯಾಸ ತಡೆಯುವುದು, ಅಗತ್ಯವಿರುವ ಪ್ರಯಾಣಿಕರಿಗೆ ಟಿಕೆಟ್ ಲಭ್ಯವಾಗುವಂತೆ ನೋಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮುನ್ನ ಪ್ರಯಾಣದ 4 ತಾಸು ಮುಂಚಿನವರೆಗೂ ಟಿಕೆಟ್ ರದ್ದು ಮಾಡಿ ರೀಫಂಡ್ ಪಡೆಯಬಹುದಾಗಿಯತ್ತು.
ಟಿಕೆಟ್ ರದ್ದು ಮಾಡಿದರೆ, ಪ್ರಯಾಣಕ್ಕಿಂತ ಮುಂಚಿನ 8ರಿಂದ24 ಗಂಟೆ ಒಳಗೆ ರದ್ದಾಗುವ ಟಿಕೆಟ್‌ನ ಶೇ.50ರಷ್ಟು, 24-72 ಗಂಟೆ ನಡುವೆ ರದ್ದಾಗುವ ಟಿಕೆಟ್‌ನ ಶೇ.75ರಷ್ಟು ಹಣ ರೀಫಂಡ್ ಆಗಲಿದೆ. 72 ಗಂಟೆಗಿಂತ ಹಿಂದಿನ ಅವಧಿಯಲ್ಲಿ ರದ್ದು ಮಾಡಿದರೆ ಕನಿಷ್ಠ ಶುಲ್ಕವನ್ನಷ್ಟೇ ಕಡಿತ ಮಾಡಲಾಗುತ್ತದೆ.
ಕ್ಲಾಸ್ ಬದಲಾವಣೆಗೆ ಅವಕಾಶ:
ರೈಲು ಪ್ರಯಾಣಕ್ಕೆ 30 ನಿಮಿಷ ಮೊದಲು ಪ್ರಯಾಣಿಕರು ತಾವು ಪ್ರಯಾಣಿಸುವ ಕ್ಲಾಸ್ ಅನ್ನು ಮೇಲ್ದರ್ಜೆಗೇರಿಸಲೂ ಅವಕಾಶ ಸಿಗಲಿದೆ. ಈ ಹಿಂದೆ ರಿಸರ್ವೇಷನ್ ಚಾರ್ಚ್ ಸಿದ್ಧಪಡಿಸುವ ಮೊದಲಷ್ಟೇ ಈ ರೀತಿಯ ಬದಲಾವಣೆಗೆ ಅವಕಾಶವಿತ್ತು.
ಬೋರ್ಡಿಂಗ್ ಪಾಯಿಂಟ್ ಬದಲಾವಣೆ:
ರೈಲು ನಿರ್ಗಮಿಸುವ ಅರ್ಧಗಂಟೆ ಮೊದಲು ಪ್ರಯಾಣಿಕರು ತಾವು ರೈಲು ಹತ್ತುವ ಸ್ಥಳವನ್ನೂ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಈ ಹಿಂದೆ ಚಾರ್ಟ್ ಸಿದ್ಧಪಡಿಸುವ ಮೊದಲಷ್ಟೇ ಇಂಥ ಬದಲಾವಣೆಗೆ ಅವಕಾಶ ಇತ್ತು.
ತತ್ಕಾಲ್ ಬುಕ್ಕಿಂಗ್‌ನಲ್ಲಿ ಬದಲಾವಣೆ:ತತ್ಕಾಲ್ ಬುಕ್ಕಿಂಗ್‌ಗೆ ಆಧಾರ್ ಆಧರಿತ ಒಟಿಪಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಮೂಲಕ ನಕಲಿ ಬುಕ್ಕಿಂಗ್‌ಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ.
5 ಹೊಸ ಡೆಕ್‌ಗಳು:
ಇನ್ನು ಸರಕು ಸಾಗಣೆ ಕ್ಷೇತ್ರದಲ್ಲೂ ಇಲಾಖೆ ಸುಧಾರಣೆ ತರುತ್ತಿದ್ದು, ಹೊಸ ಸಿಂಗಲ್ ಡೆಕ್ ಮತ್ತು ಡಬಲ್ ಡೆಕ್ ವ್ಯಾಗನ್‌ಗಳನ್ನು ಇಲಾಖೆ ಪರಿಚಯಿಸುತ್ತಿದೆ. ಉಪ್ಪು ಮತ್ತು ಆಟೋಮೊಬೈಲ್‌ಗಳ ಸಾಗಣೆಗೆ ಇದರಿಂದ ಅನುಕೂಲ ಆಗಲಿದೆ.